ಮೈಸೂರು ಮೇಯರ್ ಚುನಾವಣೆ; ಕೈ ಸೇರ್ತೀನಿ ಎಂದಿದ್ದ ಜಿಟಿಡಿಗೆ ಟಾಂಗ್ ಕೊಟ್ಟ ದಳಪತಿಗಳು

ಮೈಸೂರು ಮೇಯರ್ ಚುನಾವಣೆ; ಕೈ ಸೇರ್ತೀನಿ ಎಂದಿದ್ದ ಜಿಟಿಡಿಗೆ ಟಾಂಗ್ ಕೊಟ್ಟ ದಳಪತಿಗಳು

ಮೈಸೂರು ಮೇಯರ್ ಚುನಾವಣೆಯಲ್ಲಿ ಬಿಜೆಪಿಗೆ ಬಾಹ್ಯ ಬೆಂಬಲ ನೀಡುವ ಮೂಲಕ ಕಾಂಗ್ರೆಸ್​ ಸೇರಲು ಮುಂದಾಗಿರುವ ಜಿ.ಟಿ. ದೇವೇಗೌಡ ಅವರಿಗೆ ದಳಪತಿಗಳು ಟಾಂಗ್ ಕೊಟ್ಟಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಮೈಸೂರಲ್ಲಿ ಗ್ಯಾಂಗ್ ರೇಪ್​: ರಾಜ್ಯದಲ್ಲಿ ಕುಸಿದುಬಿದ್ದಿರುವ ಕಾನೂನು-ಸುವ್ಯವಸ್ಥೆಗೆ ಸಾಕ್ಷಿ -ಸಿದ್ದರಾಮಯ್ಯ

ಮೈಸೂರು ಮೇಯರ್ ಚುನಾವಣೆಯಲ್ಲಿ ತಟಸ್ಥವಾಗಿ ಉಳಿಯುವ ಮೂಲಕ ಜೆಡಿಎಸ್ ಬಿಜೆಪಿಗೆ ಬಾಹ್ಯ ಬೆಂಬಲ ನೀಡಿದೆ. ಮೈಮುಲ್‌ನಲ್ಲಿ ಗೆದ್ದು ಬೀಗಿದ್ದ ಜಿಟಿಡಿಗೆ ಮೇಯರ್ ಚುನಾವಣೆ ಮೂಲಕ ಟಾಂಗ್ ಕೊಟ್ಟಿದೆ. ಅಲ್ಲದೇ ಭವಿಷ್ಯದಲ್ಲೂ ನಿಮ್ಮ ಗೆಲುವು ಸುಲಭವಲ್ಲ ಎಂಬ ಎಚ್ಚರಿಕೆ ಸಂದೇಶವನ್ನ ಹೆಚ್​.ಡಿ. ಕುಮಾರಸ್ವಾಮಿ ಕೊಟ್ಟಿದ್ದಾರೆ ಎನ್ನಲಾಗ್ತಿದೆ.

ಇದನ್ನೂ ಓದಿ: ಕಾಂಗ್ರೆಸ್​ನಿಂದ್ ಆಪರೇಷನ್ ಹಸ್ತಕ್ಕೆ ಅಸ್ತು.. 2 ಡಜನ್​ಗೂ ಹೆಚ್ಚು ನಾಯಕರಿಗೆ ಕೈ ಗಾಳ..?

ಮೇಯರ್ ಚುನಾವಣೆ ಹೊತ್ತಲ್ಲಿ ಜಿಟಿಡಿ ಕಾಂಗ್ರೆಸ್ ಸೇರ್ಪಡೆ ಘೋಷಣೆ ಮಾಡಿದರು. ತಮ್ಮ ರಾಜಕೀಯ ಬದ್ದ ವೈರಿ ಸಿದ್ದರಾಮಯ್ಯ ಜೊತೆ ಗುರುತಿಸಿಕೊಳ್ಳಲು ಜಿಟಿಡಿ ಮುಂದಾಗಿದ್ದಾರೆ ಎಂಬ ಕಾರಣಕ್ಕೆ ಸಿದ್ದರಾಮಯ್ಯ, ಜಿಟಿಡಿ ಇಬ್ಬರಿಗೂ ಮೈಸೂರು ಮೇಯರ್ ಚುನಾವಣೆ ಮೂಲಕ ಪರೋಕ್ಷ ಎಚ್ಚರಿಕೆ ಸಂದೇಶ ನೀಡಿದ್ದಾರೆ ಎಂದು ಹೇಳಲಾಗಿದೆ.

Source: newsfirstlive.com Source link