ವಾಯ್ಸ್ ಮೆಸೇಜ್ ಮಾಡಿ ಕಾರ್ ಸಮೇತ ಭದ್ರಾ ನಾಲೆಗೆ ಹಾರಿದ ಇಡೀ ಕುಟುಂಬ

ವಾಯ್ಸ್ ಮೆಸೇಜ್ ಮಾಡಿ ಕಾರ್ ಸಮೇತ ಭದ್ರಾ ನಾಲೆಗೆ ಹಾರಿದ ಇಡೀ ಕುಟುಂಬ

ಚಿಕ್ಕಮಗಳೂರು: ವಾಯ್ಸ್ ಮೆಸೇಜ್ ಮಾಡಿ ಇಡೀ ಕುಟುಂಬ ಕಾರು ಸಮೇತ ಭದ್ರಾ ನಾಲೆಗೆ ಬಿದ್ದು ಆತ್ಮಹತ್ಯೆಗೆ ಯತ್ನಿಸಿದೆ. ಈ ಪೈಕಿ ಕುಟುಂಬದ ನಾಲ್ವರಲ್ಲಿ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಲ್ಲದೇ ಮತ್ತಿಬ್ಬರು ನೀರಲ್ಲಿ ಮುಳುಗಿರುವ ಶಂಕೆ ವ್ಯಕ್ತವಾಗಿದೆ.

13 ವರ್ಷ ಧ್ಯಾನ್, 35 ವರ್ಷದ ನೀತು ಸಾವಿನಿಂದ ಪಾರಾಗಿದ್ದಾರೆ. ನೀತು ಪತಿ ಮಂಜು, ಅತ್ತೆ ಸುನಂದಮ್ಮ ಸಾವಿನ ಶಂಕೆ ವ್ಯಕ್ತವಾಗಿದ್ದು, ನೀರಲ್ಲಿ ಮುಳುಗಿರುವ ಇಬ್ಬರ ಪತ್ತೆಗಾಗಿ ಶೋಧಕಾರ್ಯ ಮುಂದುವರಿದಿದೆ.

ಆತ್ಮಹತ್ಯೆಗೆ ಯತ್ನಿಸಿದವರು ಭದ್ರಾವತಿ ತಾಲೂಕಿನ ಹಳೇ ಜೇಡಿಕಟ್ಟೆಯವರು ಎಂದು ತಿಳಿದುಬಂದಿದೆ. ರೀಕೆರೆ ತಾಲೂಜಿನ ಎಂ.ಸಿ ಹಳ್ಳಿ ಬಳಿ ನಾಲೆಗೆ ಬಿದ್ದು ಇಡೀ ಕುಟುಂಬ ಆತ್ಮಹತ್ಯೆ ಯತ್ನಿಸಿದೆ. ಸದ್ಯ ಸ್ಥಳಕ್ಕೆ ಎಸ್ಪಿ ಅಕ್ಷಯ್ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಫ್ಲಾಪ್ ಸ್ಟಾರ್​ ಪೂಜಾರ ಮತ್ತೆ ವೈಫಲ್ಯ.. 1 ರನ್​ಗೆ ವಿಕೆಟ್ ಒಪ್ಪಿಸಿದ ಟೆಸ್ಟ್​​ ಸ್ಪೆಷಲಿಸ್ಟ್

Source: newsfirstlive.com Source link