ಫ್ಲಾಪ್ ಸ್ಟಾರ್​ ಪೂಜಾರ ಮತ್ತೆ ವೈಫಲ್ಯ.. 1 ರನ್​ಗೆ ವಿಕೆಟ್ ಒಪ್ಪಿಸಿದ ಟೆಸ್ಟ್​​ ಸ್ಪೆಷಲಿಸ್ಟ್

ಫ್ಲಾಪ್ ಸ್ಟಾರ್​ ಪೂಜಾರ ಮತ್ತೆ ವೈಫಲ್ಯ.. 1 ರನ್​ಗೆ ವಿಕೆಟ್ ಒಪ್ಪಿಸಿದ ಟೆಸ್ಟ್​​ ಸ್ಪೆಷಲಿಸ್ಟ್

4, 12, 9, 45, 1, ಒಟ್ಟು 71 ರನ್…! ಇದು ಕಳೆದ 5 ಇನ್ನಿಂಗ್ಸ್​​ಗಳಲ್ಲಿ ಟೀಮ್ ಇಂಡಿಯಾ ಟೆಸ್ಟ್ ಸ್ಪೆಷಲಿಸ್ಟ್ ಪೂಜಾರ ಟ್ರ್ಯಾಕ್ ರೆಕಾರ್ಡ್..!! ಲೀಡ್ಸ್​​ನಲ್ಲಾದ್ರೂ ಹಣೆ ಬರಹ ಬದಲಾಗುತ್ತಾ ಅಂದ್ರೆ, ಇಲ್ಲೂ ಅದೇ ರಾಗ.. ಅದೇ ಹಾಡು..!

ಚೇತೇಶ್ವರ ಅರವಿಂದ ಪೂಜಾರ, ಕ್ಲಾಸಿಕ್ ಟೆಸ್ಟ್​​​ ಬ್ಯಾಟ್ಸ್​ಮನ್, ತಾಳ್ಮೆಯೇ ಪೂಜಾರ ಬ್ಯಾಟಿಂಗ್​ ಸೂತ್ರ…! ನಿರಾಯಸವಾಗಿ ದೀರ್ಘಕಾಲ ಬ್ಯಾಟಿಂಗ್​ ನಡೆಸಬಲ್ಲ ಕಲೆಯೇ, ಸೌರಾಷ್ಟ್ರದ ಬ್ಯಾಟ್ಸ್​​ಮನ್​ಗೆ ಟೆಸ್ಟ್​ ಸ್ಪೆಷಲಿಸ್ಟ್​ ಎಂವ ಪಟ್ಟ ನೀಡಿತ್ತು. ಇಷ್ಟೇ ಅಲ್ಲ… ಟೀಮ್ ಇಂಡಿಯಾದ ನಯಾ ವಾಲ್, ನಂಬಿಕಸ್ಥ, ಆಧಾರಸ್ಥಂಭ ಎಂಬಿತ್ಯಾದಿ ಬಿರುದುಗಳು ಪೂಜಾರಗಿವೆ..ಆದ್ರೆ, ಕಳೆದ ಕೆಲ ಇನ್ನಿಂಗ್ಸ್​​ಗಳಿಂದ ಪೂಜಾರ ಇವೆಲ್ಲವಕ್ಕೂ ತದ್ವಿರುದ್ಧ ಹೆಜ್ಜೆ ಇಡ್ತಿದ್ದಾರೆ.

ಒಂದು ರನ್​ಗೆ ಪೆವಿಲಿಯನ್ ಸೇರಿದ ಪೂಜಾರ..!
3ನೇ ಟೆಸ್ಟ್​​​ ಆರಂಭಕ್ಕೂ ಮುನ್ನ ಪೂಜಾರರನ್ನ ಆಡಿಸಬೇಕೋ ಬೇಡ್ವೋ ಎಂಬ ಬಗ್ಗೆ ಸಿಕ್ಕಾಪಟ್ಟೆ ಚರ್ಚೆಗಳು ನಡೆದಿದ್ವು. ಪೂಜಾರಗೆ ರೆಸ್ಟ್​​ ನೀಡಬೇಕು ಅನ್ನೋದು ಹಲವರ ವಾದವಾಗಿತ್ತು. ಆದ್ರೂ ಚೇತೇಶ್ವರ್​ ಮೇಲೆ ನಂಬಿಕೆ ಇರಿಸಿದ ಮ್ಯಾನೇಜ್​ಮೆಂಟ್​​ ಮಣೆ ಹಾಕಿತ್ತು. ಆದ್ರೆ, ಸಂಕಷ್ಟದಲ್ಲಿದ್ದಲ್ಲಿದ್ದಾಗ ತಂಡದ ಕೈ ಹಿಡಿಯದ ಪೂಜಾರ ನಂಬಿಕೆ ಹುಸಿಯಾಗಿಸಿದ್ರು. ಮೊದಲ ಓವರ್​ನಲ್ಲೇ ರಾಹುಲ್ ಶೂನ್ಯಕ್ಕೆ ಪೆವಿಲಿಯನ್ ಸೇರಿದ್ರು. ಈ ವೇಳೆ ಜವಾಬ್ಧಾರಿಯುತ ಇನ್ನಿಂಗ್ಸ್​ ಕಟ್ಟಬೇಕಿದ್ದ ಅನುಭವಿ ಪೂಜಾರ 9 ಎಸೆತ ಎದುರಿಸಿ ಕೇವಲ 1 ರನ್​ಗಳಿಸಿ ಪೆವಿಲಿಯನ್ ಸೇರಿದರು.

blank

ಇಂಗ್ಲೆಂಡ್ ಟೆಸ್ಟ್​ ಸರಣಿಯ ನ್ಯಾಟಿಂಗ್​ಹ್ಯಾಮ್ ಟೆಸ್ಟ್​​ನ ಮೊದಲ ಇನ್ನಿಂಗ್ಸ್​​ನಲ್ಲಿ 4, 2ನೇ ಇನ್ನಿಂಗ್ಸ್​ನಲ್ಲಿ 12.., 2ನೇ ಟೆಸ್ಟ್​ನಲ್ಲಿ ಕ್ರಮವಾಗಿ 9 ಮತ್ತು 45 ರನ್.. ಇದೀಗ ಲೀಡ್ಸ್​​ ಟೆಸ್ಟ್​​ನ ಮೊದಲ ಇನ್ನಿಂಗ್ಸ್​​​ನಲ್ಲೂ 1 ರನ್​ಗಳಿಗೆ ಆಟ ಎಂಡ್​​..! ಟೆಸ್ಟ್​​ ಸ್ಪೆಷಲಿಸ್ಟ್​​ ಎನಿಸಿಕೊಂಡಿರೋ ಪೂಜಾರರ ಕಳೆದ 5 ಇನ್ನಿಂಗ್ಸ್​ಗಳ ಪ್ರದರ್ಶನ ಇದು. ಇನ್ನಿಂಗ್ಸ್​ನಿಂದ ಇನ್ನಿಂಗ್ಸ್​​ಗೆ ಕಳಪೆ ಆಟವನ್ನೇ ಮುಂದುವರೆಸಿರೋ ಪೂಜಾರ ಇದೀಗ ಟೀಕಾಕಾರರಿಗೆ ಆಹಾರವಾಗಿದ್ದಾರೆ.

ವರ್ಷದಿಂದ ವರ್ಷಕ್ಕೆ ಇಳಿಮುಖವಾಗ್ತಿದ್ರೂ ಚಾನ್ಸ್​ ಯಾಕೆ..?
ಹೌದು..! 2019 ಜನವರಿ 3ರಂದು ಸಿಡ್ನಿಯಲ್ಲಿ ಶತಕ ಸಿಡಿಸಿದ್ದ ಪೂಜಾರ, ಈ ಬಳಿಕ ಶತಕದ ಬರ ಎದುರಿಸ್ತಿದ್ದಾರೆ. ಕಳೆದ 35 ಇನ್ನಿಂಗ್ಸ್​ಗಳಿಂದ ಕೇವಲ 26.82ರ ಸರಾಸರಿಯಲ್ಲಿ ರನ್ ಕಲೆ ಹಾಕಿರುವ ಪೂಜಾರ 9 ಅರ್ಧಶತಕ ದಾಖಲಿಸಿದ್ದಾರೆ. ಈ ಹಿಂದಿನ ಲಾರ್ಡ್ಸ್​​ ಟೆಸ್ಟ್​​ನ 4ನೇ ಇನ್ನಿಂಗ್ಸ್​ ಹೊರತುಪಡಿಸಿದ್ರೆ, ಕಳೆದ 12 ಇನ್ನಿಂಗ್ಸ್​ಗಳಲ್ಲಿ ಪೂಜಾರ 20 ರನ್​ಗಳ ಗಡಿಯನ್ನೂ ದಾಟಿಲ್ಲ. ಅದಲ್ಲದೇ ತಂಡಕ್ಕೆ ಸ್ಲೋ ಬ್ಯಾಟಿಂಗ್ ಹೊರೆ ಬೇರೆ. ಇದೇ ಈಗ ವೈಫಲ್ಯದಲ್ಲಿರೋ ಪೂಜಾರಗೆ ಚಾನ್ಸ್​ ನೀಡ್ತಿರೋದು ಯಾಕೆ ಅನ್ನೋ ಪ್ರಶ್ನೆ ಹುಟ್ಟಿಗೆ ಕಾರಣವಾಗಿದೆ.

Source: newsfirstlive.com Source link