ಮೈಸೂರು-ಬೆಂಗಳೂರು ದಶಪಥ ರಸ್ತೆ ಕ್ರೆಡಿಟ್; ಪ್ರತಾಪ್​ ಸಿಂಹರನ್ನ ಓಪನ್​ ಡಿಬೇಟ್​ಗೆ ಕರೆದ ಕಾಂಗ್ರೆಸ್

ಮೈಸೂರು-ಬೆಂಗಳೂರು ದಶಪಥ ರಸ್ತೆ ಕ್ರೆಡಿಟ್; ಪ್ರತಾಪ್​ ಸಿಂಹರನ್ನ ಓಪನ್​ ಡಿಬೇಟ್​ಗೆ ಕರೆದ ಕಾಂಗ್ರೆಸ್

ಬೆಂಗಳೂರು: ಮೈಸೂರು-ಬೆಂಗಳೂರು ದಶಪಥ ರಸ್ತೆ ಕ್ರೆಡಿಟ್ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮೈಸೂರು ಸಂಸದ ಪ್ರತಾಪ್ ಸಿಂಹಗೆ ಓಪನ್ ಡಿಬೇಟ್​ಗೆ ಕರೆದಿದ್ದು ಡೇಟ್​ನ್ನೂ ಕೂಡ ಫಿಕ್ಸ್ ಮಾಡಿದೆ. ಸೆಪ್ಟೆಂಬರ್ 5ರ ಬೆಳಗ್ಗೆ 11 ಗಂಟೆಗೆ ಜಿಲ್ಲಾ ಪತ್ರಕರ್ತರ ಭವನದಲ್ಲಿ ಸಂವಾದಕ್ಕೆ ಆಹ್ವಾನಿಸಲಾಗಿದೆ.

ದಾಖಲೆ ಸಮೇತ ಸಂವಾದಕ್ಕೆ ಪ್ರತಾಪ್ ಸಿಂಹ ಆಗಮಿಸುವಂತೆ ಕಾಂಗ್ರೆಸ್ ಒತ್ತಾಯಿಸಿದೆ. ಕಾಂಗ್ರೆಸ್​ನಿಂದ ಮಾಜಿ ಸಚಿವ ಡಾ.ಎಚ್.ಸಿ ಮಹದೇವಪ್ಪ, ಮಾಧ್ಯಮ ವಕ್ತಾರ ಎಂ.ಲಕ್ಶ್ಮಣ್ ಚರ್ಚೆಯಲ್ಲಿ ಭಾಗಿಯಾಗುತ್ತೇವೆ. ಪ್ರತಾಪ್ ಸಿಂಹರೇ ನೇರವಾಗಿ ಚರ್ಚೆಗೆ ಬರಬೇಕು. ನಮ್ಮಲ್ಲಿ ಕಾಮಗಾರಿಗೆ ಸಂಬಂಧಿಸಿದ ಎಲ್ಲ ದಾಖಲೆಗಳೂ ಇವೆ. ನಿಮ್ಮಲ್ಲಿರುವ ದಾಖಲೆಗಳನ್ನು ತನ್ನಿ, ನೀವು ನಮ್ಮ ಡೇಟ್ ಬರಲು ಸಾಧ್ಯವಾಗಲಿಲ್ಲ ಅಂದ್ರೆ ನೀವೇ ಡೇಟ್ ಫಿಕ್ಸ್ ಮಾಡಿ, ನಾವು ಬರಲು ಸಿದ್ಧ ಎಂದು ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ನಾಯಕರು ಹೇಳಿಕೆ ನೀಡಿದ್ದಾರೆ.

Source: newsfirstlive.com Source link