16 ಕೇಸ್ ಇರುವ ರೌಡಿಶೀಟರ್ ‘ಕಾಂಗ್ರೆಸ್ ಹಾಲಿ ಕಾರ್ಪೋರೇಟರ್’ ಎಂದು ತಿಳಿದು ದಂಗಾದ ಎಸ್​​ಪಿ

16 ಕೇಸ್ ಇರುವ ರೌಡಿಶೀಟರ್ ‘ಕಾಂಗ್ರೆಸ್ ಹಾಲಿ ಕಾರ್ಪೋರೇಟರ್’ ಎಂದು ತಿಳಿದು ದಂಗಾದ ಎಸ್​​ಪಿ

ದಾವಣಗೆರೆ: ಹಾಲಿ ಕಾಂಗ್ರೆಸ್ ಕಾರ್ಪೋರೇಟರ್ ಮೇಲಿನ ಕೇಸ್ ಸಂಖ್ಯೆ ಕೇಳಿ ಎಸ್​ಪಿ ರಿಷ್ಯಂತ್ ದಂಗಾದ ಘಟನೆ ದಾವಣಗೆರೆಯ ಹೈಸ್ಕೂಲ್ ಮೈದಾನದಲ್ಲಿ ನಡೆಯುತ್ತಿದ್ದ ರೌಡಿ ಪರೇಡ್​ನಲ್ಲಿ ನಡೆದಿದೆ.

ರೌಡಿ ಶೀಟರ್ ಸೀನಪ್ಪ ( ಅಲಿಯಾಸ್ ಮೋಟಬಳ್ಳ ಸೀನ) ಪಾಲಿಕೆ ಸದಸ್ಯ ಅಂತ ಗೊತ್ತಿಲ್ಲದೆ ಎಷ್ಟು ಕೇಸ್ ಇದೆ ನಿನ್ನ ಮೇಲೆ ಎಂದು ಎಸ್​ಪಿ ಕೇಳಿದ್ದಾರೆ. ಈ ವೇಳೆ ರೌಡಿಶೀಟರ್ 16 ಕೇಸ್ ಇದೆ ಎಂದಿದ್ದಾರೆ. ಏನು ಕೆಲಸ ಮಾಡಿಕೊಂಡಿದೀಯಾ ಅಂತ ಎಸ್​ಪಿ ರಿಷ್ಯಂತ್ ಪ್ರಶ್ನೆ ಮಾಡಿದ್ದಾರೆ. ನಾನು ಹಾಲಿ ಪಾಲಿಕೆ ಕಾರ್ಪೋರೇಟರ್ ಎಂದು ಸೀನಪ್ಪ ಹೇಳಿದ್ದಾರೆ.

ರೌಡಿ ಶೀಟರ್ ಸೀನಪ್ಪ ಪಾಲಿಕೆ ಸದಸ್ಯ ಅನ್ನೋದನ್ನ ಕೇಳಿ ಎಸ್​ಪಿ ದಂಗಾಗಿ ಸುಮ್ಮನೆ ತೆರಳಿದ್ದಾರೆ ಎನ್ನಲಾಗಿದೆ. ನಗರದಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಎಸ್​ಪಿ ರೌಡಿ ಪೆರೇಡ್ ನಡೆಸುತಿದ್ದರು. ದಾವಣಗೆರೆಯ ಹೈಸ್ಕೂಲ್ ಮೈದಾನದಲ್ಲಿ ರೌಡಿಗಳ ಪರೇಡ್ ನಡೆಸುವ ವೇಳೆ ಘಟನೆ ನಡೆದಿದೆ.

Source: newsfirstlive.com Source link