ಕೃಷಿ ಹೊಂಡದಲ್ಲಿ ಕಾಲು ಜಾರಿ ಬಿದ್ದ ಅಮ್ಮ – ರಕ್ಷಣೆಗೆ ಮುಂದಾದ ಮಗನೂ ಸಾವು

ಚಿಕ್ಕಬಳ್ಳಾಪುರ: ಕೃಷಿ ಹೊಂಡದಲ್ಲಿ ಆಕಸ್ಮಿಕ ಕಾಲು ಜಾರಿ ಬಿದ್ದು ತಾಯಿಯನ್ನ ರಕ್ಷಿಸಲು ಹೋಗಿ, ತಾಯಿ ಹಾಗೂ ಮಗ ಇಬ್ಬರು ಸಾವನ್ನಪ್ಪಿರುವ ದಾರುಣ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಸಂತೇಕಲ್ಲಹಳ್ಳಿಯಲ್ಲಿ ನಡೆದಿದೆ.

42 ವರ್ಷದ ತಾಯಿ ತೇಜೋವತಿ ಹಾಗೂ 24 ವರ್ಷದ ಮಗ 24 ಚಂದ್ರೇಗೌಡ ಮೃತ ದುರ್ದೈವಿಗಳು. ಗ್ರಾಮದ ಗೋವಿಂದಪ್ಪನವರ ಕೃಷಿಹೊಂಡದಲ್ಲಿ ಘಟನೆ ನಡೆದಿದೆ. ಗೋವಿಂದಪ್ಪನವರ ಕೃಷಿ ಹೊಂಡಕ್ಕೆ ಹೊಂದಿಕೊಂಡಂತೆ ಮೃತರ ಜಮೀನು ಇದೆ. ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ತೇಜೋವತಿ ಕೃಷಿಹೊಂಡದಲ್ಲಿ ನೀರು ಕುಡಿಯಲು ಹೋಗಿ ಈ ವೇಳೆ ಕಾಲು ಜಾರಿ ಆಕಸ್ಮಿಕ ಕೃಷಿ ಹೊಂಡಕ್ಕೆ ಬಿದ್ದಿದ್ದಾರೆ. ಇದನ್ನೂ ಓದಿ: ನಂದಿಬೆಟ್ಟದ ಬಳಿ ಭೂಕುಸಿತ – ಕಲ್ಲು ಗಣಿಗಾರಿಕೆಯ ಬ್ಲಾಸ್ಟಿಂಗ್‍ಗೆ ಬೆದರಿದ್ವಾ ಪಂಚಗಿರಿಗಳು?

ಈ ವೇಳೆ ತಾಯಿಯ ರಕ್ಷಣೆಗೆ ಧಾವಿಸಿದ ಮಗ ಚಂದ್ರೇಗೌಡ ಸಹ ಇಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಇದನ್ನೂ ಓದಿ: 1ರಿಂದ 8ನೇ ತರಗತಿ ಶಾಲೆಗಳ ಆರಂಭ – ಆ 30 ರಂದು ಸಿಎಂ ನೇತೃತ್ವದಲ್ಲಿ ಸಭೆ

Source: publictv.in Source link