ತಾಲಿಬಾನಿಗಳಿಂದ ಮತ್ತೊಂದು ಪೈಶಾಚಿಕ ಕೃತ್ಯ; ಪತ್ರಕರ್ತನ ಮೇಲೆ ಮಾರಣಾಂತಿಕ ಹಲ್ಲೆ

ತಾಲಿಬಾನಿಗಳಿಂದ ಮತ್ತೊಂದು ಪೈಶಾಚಿಕ ಕೃತ್ಯ; ಪತ್ರಕರ್ತನ ಮೇಲೆ ಮಾರಣಾಂತಿಕ ಹಲ್ಲೆ

ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಅಟ್ಟಹಾಸ ಮುಂದುವರೆದಿದೆ. ಸರ್ಕಾರ ರಚನೆಗೂ ಮೊದಲೇ ಶರಿಯಾ ಕಾನೂನು ಜಾರಿಗೊಳಿಸಿರುವ ತಾಲಿಬಾನಿಗಳು ಪ್ರಾಣ ಉಳಿಸಿಕೊಳ್ಳಲು ದೇಶ ತೊರೆಯುತ್ತಿರುವ ಜನರನ್ನು ಸಹ ತಡೆಹಿಡಿಯಲು ಮುಂದಾಗಿದ್ದಾರೆ.

ಈ ಮಧ್ಯೆ ಸ್ವತಂತ್ರ ಸುದ್ದಿಸಂಸ್ಥೆಯೊಂದರ ಪತ್ರಕರ್ತನ ಮೇಲೆ ತಾಲಿಬಾನಿಗಳು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ. ಈ ಕುರಿತು ಸ್ವತಃ ಪತ್ರಕರ್ತ ಜಿಯಾರ್ ಖಾನ್ ಯಾದ್ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.

ನಾನು ವರದಿ ಮಾಡುವಾಗ ತಾಲಿಬಾನಿಗಳು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ಕ್ಯಾಮೆರಾಗಳು, ತಾಂತ್ರಿಕ ಸಾಧನಗಳು ಮತ್ತು ನನ್ನ ಪರ್ಸನಲ್ ಫೋನ್​ನ್ನೂ ಹೈಜಾಕ್ ಮಾಡಿದ್ದಾರೆ. ಶಸ್ತ್ರಾಸ್ತ್ರ ತುಂಬಿದ ವಾಹನದಿಂದ ಇಳಿದ ತಾಲಿಬಾನಿಗಳು ನನ್ನನ್ನ ಗನ್​ಪಾಯಿಂಟ್​ನಲ್ಲಿ ಹಲ್ಲೆ ನಡೆಸಿದ್ದಾರೆ. ಅವರು ಇದ್ದಕ್ಕಿದ್ದಂತೆ ಯಾಕೆ ಹೀಗೆ ಮಾಡಿದರು ಎಂದು ನನಗೆ ಈಗಲೂ ಅರ್ಥವಾಗಿಲ್ಲ. ತಾಲಿಬಾನ್ ನಾಯಕರಿಗೆ ಈ ವಿಷಯ ರವಾನಿಸಲಾಗಿದೆ ಎಂದು ಟ್ವೀಟ್​ನಲ್ಲಿ ಹೇಳಿದ್ದಾರೆ.

Source: newsfirstlive.com Source link