ಪಾಕ್​ನತ್ತ ದೌಡಾಯಿಸಿದ ಆಫ್ಘನ್​ನ ಸಾವಿರಾರು ಜನರು; ಸ್ಪಿನ್ ಬೊಲ್ಡಾಕ್ ಗಡಿಯಲ್ಲಿ ಶೋಚನೀಯ ಸ್ಥಿತಿ

ಪಾಕ್​ನತ್ತ ದೌಡಾಯಿಸಿದ ಆಫ್ಘನ್​ನ ಸಾವಿರಾರು ಜನರು; ಸ್ಪಿನ್ ಬೊಲ್ಡಾಕ್ ಗಡಿಯಲ್ಲಿ ಶೋಚನೀಯ ಸ್ಥಿತಿ

ಅಫ್ಘಾನಿಸ್ತಾನವನ್ನ ತಾಲಿಬಾನಿಗಳು ವಶಪಡಿಸಿಕೊಂಡ ಬೆನ್ನಲ್ಲೇ ಅಫ್ಘಾನಿಸ್ತಾನದ ಪ್ರಜೆಗಳು ಏರ್​ಪೋರ್ಟ್​ಗಳಿಗೆ ಮುಗಿಬಿದ್ದು ವಿದೇಶಗಳಿಗೆ ತೆರಳಲು ಹರಸಾಹಸ ಪಡುತ್ತಿದ್ದಾರೆ. ಈ ಮಧ್ಯೆ ಇತ್ತ ನೆರೆ ರಾಷ್ಟ್ರ ಪಾಕಿಸ್ತಾನದತ್ತ ಅಫ್ಘನ್ ಜನರು ಸಾವಿರ ಸಾವಿರ ಸಂಖ್ಯೆಯಲ್ಲಿ ತೆರಳಲು ಮುಂದಾಗಿರುವ ಘಟನೆ ಬೆಳಕಿಗೆ ಬಂದಿದೆ.

ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಆದ ವಿಡಿಯೋವೊಂದರಲ್ಲಿ ಸಾವಿರಾರು ಸಂಖ್ಯೆಯಲ್ಲಿ ತಾಲಿಬಾನಿಗಳ ಆಡಳಿತದಿಂದ ದೂರವುಳಿಯಲು ಪಾಕ್​ನತ್ತ ತೆರಳಲು ಪ್ರಯತ್ನಿಸುತ್ತಿರುವ ದೃಶ್ಯ ಸೆರೆಯಾಗಿದೆ. ಅಫ್ಘಾನಿಸ್ತಾನ ಹಾಗೂ ಪಾಕಿಸ್ತಾನ ನಡುವಿನ ಗಡಿ ಪ್ರದೇಶ ಸ್ಪಿನ್ ಬೊಲ್ಡಾಕ್ ಗಡಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಅಫ್ಘನ್ ಜನಗಳು ಸೇರಿದ್ದಾರೆ. ಇತ್ತ ಕಾಬೂಲ್ ಏರ್​ಪೋರ್ಟ್​ನಲ್ಲಿ ಕಂಡುಬಂದ ದೃಶ್ಯಕ್ಕಿಂತಲೂ ಕೆಟ್ಟ ಸನ್ನಿವೇಶ ಗಡಿಯಲ್ಲಿ ನಿರ್ಮಾಣವಾಗಿದೆ ಎಂದು ಹೇಳಲಾಗಿದೆ.

Source: newsfirstlive.com Source link