ಪಾರು ಟೀಮ್‌ನ ಬಿಂದಾಸ್‌ ಟ್ರಿಪ್‌.. ಮೈಸೂರು ಸುತ್ತಿ ಚಾಮುಂಡಿ ದರ್ಶನ ಪಡೆದ ಸುಂದರಿಯರು

ಪಾರು ಟೀಮ್‌ನ ಬಿಂದಾಸ್‌ ಟ್ರಿಪ್‌.. ಮೈಸೂರು ಸುತ್ತಿ ಚಾಮುಂಡಿ ದರ್ಶನ ಪಡೆದ ಸುಂದರಿಯರು

ಪಾರು ಸೀರಿಯಲ್​ನಲ್ಲಿ ಪಾರು, ಅನುಷ್ಕಾ ಫೈಟ್ ಯಾರಿಗೆ ತಾನೆ ನೆನಪಿಲ್ಲಾ ಹೇಳಿ.. ಅನುಷ್ಕಾ ​ಸೇರು ಅಂದ್ರೇ ಪಾರು ಸವಾ ಸೇರು ಅಂತಾರೆ.. ಆ ತರಹದ ಕಾಂಬಿನೇಷನ್​ ಅವರದ್ದು. ಸದ್ಯ ಅನುಷ್ಕಾರ ಪಾತ್ರ ಎಂಡ್​ ಆಗಿದ್ದು.. ಅವರ ತಂಗಿ ಅನನ್ಯಾಳ ಆಟ ಶುರುವಾಗಿದೆ.

blank

ಅಂದ್ಹಾಗೆ ಇವರ ಬಗ್ಗೆ ಈಗ್ಯಾಕೆ ಮಾತು ಅಂತಿರಾ..? ವಿಷಯ ಏನ್​ ಅಂದ್ರೆ ಮೊನ್ನೆ ಮೊನ್ನೆಯಷ್ಟೇ ಪಾರು ಸೀರಿಯಲ್​ 700 ಎಪಿಸೋಡ್​ ಕಂಪ್ಲೀಟ್​ ಮಾಡಿರುವ ಸಂಭ್ರಮದಲ್ಲಿತ್ತು. ಈಗ ಪಾರು ಸೀರಿಯಲ್​ನ ಮುದ್ದಾದ ಚೆಲುವೆಯರು ಕೊಂಚ ಬಿಡುವು ಮಾಡಿಕೊಂಡು ಮೈಸೂರಿನತ್ತ ಪ್ರಯಾಣ ಬೆಳಸಿದ್ದು, ತಾಯಿ ಚಾಮುಂಡೇಶ್ವರಿ ದರ್ಶನ ಪಡೆದಿದ್ದಾರೆ.

blank

 

ಪಾರು ಪಾತ್ರದ ಮೂಲಕ ಮನೆಮಾತಾಗಿರುವ ಮೋಕ್ಷಿತಾ ಪೈ, ಅನುಷ್ಕಾ ಪಾತ್ರ ನಿರ್ವಹಿಸಿದ್ದ ಮಾನ್ಸಿ ಜೋಶಿ ಸಖತ್​ ಕ್ಲೋಸ್​ ಫ್ರೆಂಡ್ಸ್ ಅಂದ್ರೆ ನೀವು ನಂಬಲೇಬೇಕು. ಇಬ್ಬರೂ ಆಗಾಗ ಜಾಲಿಯಾಗಿ ಟ್ರಿಪ್​ ಹೊರಡೋದು ಸಾಮಾನ್ಯ.. ಆದ್ರೆ ಈಗ ಪಾರು ತಂಡದ ಅನುಷ್ಕಾ ತಂಗಿ ಪಾತ್ರದಾರಿ ಖುಷಿ ಶಿವು, ಪಾರುವಿನ ತುಂಟ ತಮ್ಮ ಗಗನ್​ ದೀಪ್, ಧ್ವನಿ​ ಸೇರಿದಂತೆ ಸಹ ಕಲಾವಿದರು ಟ್ರಿಪ್​ ಎಂಜಾಯ್​ ಮಾಡಿರುವ ಬಗ್ಗೆ ಮೋಕ್ಷಿತಾ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

blank

ಇನ್ನು ಮೈಸೂರಿನ ಸೊಬಗನ್ನು ಸವಿದ ಮೋಕ್ಷಿತಾ ಆ್ಯಂಡ್​​ ಟೀಮ್​ ನಂತರ ಕೆಆರ್​ಎಸ್​ನ ಹಿನ್ನೀರು ಪ್ರದೇಶ ಮೀನಾಕ್ಷಿಪುರಕ್ಕೆ ಭೇಟಿ ನೀಡಿ ಕ್ವಾಲಿಟಿ ಟೈಮ್​ ಸ್ಪೆಂಡ್​ ಮಾಡಿದ್ದಾರೆ.

blank

ಒಟ್ನಲ್ಲಿ ಲಾಕ್​ಡೌನ್​ ಹಿನ್ನೆಲೆಯಲ್ಲಿ ಹೈದ್ರಾಬಾದ್​ನ ರಾಮೋಜಿ ಫಿಲ್ಮ ಸಿಟಿಯಲ್ಲಿ ಶೂಟಿಂಗ್​ ಮಾಡಿದ್ದರು ಪಾರು ತಂಡ.. ಅದೊಂತರಹ ಪ್ರವಾಸ.. ಆದ್ರೆ ಈಗ ಮತ್ತೆ ಒಂದೊಳ್ಳೆಯ ಸಮಯವನ್ನ ಸೀರಿಯಲ್​ ಕಲಾವಿದರು ಕಳೆದಿದ್ದು, ಧಾರಾವಾಹಿ ಹೊರತುಪಡಿಸಿ ಕೂಡ ಎಲ್ಲರೂ ಉತ್ತಮ ಬಾಂಧವ್ಯ ಹೊಂದಿರುವುದು ಅಭಿಮಾನಿಗಳಲ್ಲಿ ಖುಷಿ ಮೂಡಿಸಿದೆ.

Source: newsfirstlive.com Source link