#BIGBREAKING: 140 ಸಿಖ್ ಯಾತ್ರಿಕರನ್ನು ಅಫ್ಘಾನಿಸ್ತಾನದಲ್ಲಿ ತಡೆದ ತಾಲಿಬಾನ್

#BIGBREAKING: 140 ಸಿಖ್ ಯಾತ್ರಿಕರನ್ನು ಅಫ್ಘಾನಿಸ್ತಾನದಲ್ಲಿ ತಡೆದ ತಾಲಿಬಾನ್

ಅಫ್ಘಾನಿಸ್ತಾನವನ್ನು ತಾಲಿಬಾನಿಗಳು ವಶಪಡಿಸಿಕೊಂಡ ಬೆನ್ನಲ್ಲೇ ಅಲ್ಲಿ ಕೆಲಸಕ್ಕೆಂದು ತೆರಳಿದ್ದವರು ಹಾಗೂ ವಾಸವಾಗಿದ್ದವರು ಇದೀಗ ತಮ್ಮ ತಮ್ಮ ದೇಶಗಳಿಗೆ ವಾಪಸ್ಸಾಗುತ್ತಿದ್ದಾರೆ. ಇದೇ ರೀತಿ ಭಾರತಕ್ಕೆ ವಾಪಸ್ಸಾಗಲು ಕಾಬೂಲ್ ವಿಮಾನ ನಿಲ್ದಾಣದತ್ತ ತೆರಳುತ್ತಿದ್ದ ಸಿಖ್ ಸಮುದಾಯದವರನ್ನ ತಾಲಿಬಾನಿಗಳು ಸೆರೆಹಿಡಿದಿರುವ ಘಟನೆ ನಡೆದಿದೆ.

ಇದನ್ನೂ ಓದಿ: ಕಾಬೂಲ್​ನಲ್ಲಿ ಪತ್ರಕರ್ತನ ಮೇಲೆ ತಾಲಿಬಾನಿಗಳಿಂದ ಮಾರಣಾಂತಿಕ ಹಲ್ಲೆ

ಸಿಖ್ ಗುರು ತೇಜ್​ ಬಹದ್ದೂರ್ ಜೀ ಯವರ 400 ನೇ ಜನ್ಮ ಜಯಂತಿ ಹಿನ್ನೆಲೆ 140 ಮಂದಿ ಸಿಖ್ಖರು ಭಾರತಕ್ಕೆ ವಾಪಸ್ಸಾಗಲು ಕಾಬೂಲ್ ಏರ್​ಪೋರ್ಟ್​ನತ್ತ ತೆರಳಿದ್ದರು. ಈ ವೇಳೆ ತಾಲಿಬಾನಿಗಳು ಸಿಖ್ಖರು ಇದ್ದ ಬಸ್​​ನ್ನು ತಡೆದಿದ್ದಾರೆ. ಅಲ್ಲದೇ ಭಾರತಕ್ಕೆ ತೆರಳದಂತೆ ಹೇಳಿದ್ದಾರೆ ಎನ್ನಲಾಗಿದೆ. ಈ ವೇಳೆ ಸಿಖ್ಖರು ತಾಲಿಬಾನಿಗಳಿಗೆ ತಮ್ಮ ಯಾತ್ರೆಗೆ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಪಾಕ್​ನತ್ತ ದೌಡಾಯಿಸಿದ ಆಫ್ಘನ್​ನ ಸಾವಿರಾರು ಜನರು; ಸ್ಪಿನ್ ಬೊಲ್ಡಾಕ್ ಗಡಿಯಲ್ಲಿ ಶೋಚನೀಯ ಸ್ಥಿತಿ

Source: newsfirstlive.com Source link