ಮೈಸೂರು ಮೇಯರ್ ಚುನಾವಣೆ; ಜೆಡಿಎಸ್​​ ನಡೆಯಿಂದ ಕಾಂಗ್ರೆಸ್​​ಗೆ ಸಿಕ್ಕ ಅಸ್ತ್ರಗಳೇನು?

ಮೈಸೂರು ಮೇಯರ್ ಚುನಾವಣೆ; ಜೆಡಿಎಸ್​​ ನಡೆಯಿಂದ ಕಾಂಗ್ರೆಸ್​​ಗೆ ಸಿಕ್ಕ ಅಸ್ತ್ರಗಳೇನು?

ಮೈಸೂರು: ಮೈಸೂರು ಮೇಯರ್​​ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿಗೆ ಜೆಡಿಎಸ್​  ಬಾಹ್ಯ ಬೆಂಬಲ ನೀಡಿದೆ. ಕಾಂಗ್ರೆಸ್​ಗೆ ಕೈಕೊಟ್ಟು ಜೆಡಿಎಸ್​ ಬಿಜೆಪಿಗೆ ಮೇಯರ್ ಸ್ಥಾನ ಬಿಟ್ಟುಕೊಟ್ಟಿದೆ ಎನ್ನಲಾಗಿದೆ. ಹೀಗಾಗಿ ತಮಗೆ ಬೆಂಬಲ ನೀಡುವುದಾಗಿ ಹೇಳಿ ಬಿಜೆಪಿಗೆ ಮೇಯರ್​ ಸ್ಥಾನ ಬಿಟ್ಟುಕೊಟ್ಟ ಜೆಡಿಎಸ್​​ ವಿರುದ್ಧ ಕಾಂಗ್ರೆಸ್​ಗೆ ಪ್ರಬಲ ಅಸ್ತ್ರಗಳು ಸಿಕ್ಕಿದಂತಾಗಿವೆಯಂತೆ.

ಮುಂದಿನ ಚುನಾವಣೆಯಲ್ಲಿ ಕೆಳಗಿನ ಅಸ್ತ್ರಗಳನ್ನು ಬಳಸಿ ಜೆಡಿಎಸ್​​​ ವಿರುದ್ಧ ಕಾಂಗ್ರೆಸ್​ ಪ್ರಚಾರ ಮಾಡಲಿದೆಯಂತೆ. ಜಾತ್ಯಾತೀತ ತತ್ವಕ್ಕೆ JDS ಎಳ್ಳುನೀರು ಬಿಟ್ಟಿದೆ. JDS ಪಕ್ಷ BJPಯ B ಟೀಮ್ ಎಂಬುದು ಸಾಬೀತಾಗಿದೆ. JDS ನಂಬಿಕೆಗೆ ಅರ್ಹವಾದ ಪಕ್ಷವಲ್ಲ ಎಂದು ಹೇಳುವುದು.

ಕಾಂಗ್ರೆಸ್ ಜೊತೆಗಿನ ಮೇಯರ್ ಒಪ್ಪಂದವನ್ನು ಮೈಸೂರಿನಲ್ಲಿ ಮುರಿದಿದೆ. ಮುಂಬರುವ ದಿನಗಳಲ್ಲಿ JDSಪಕ್ಷ BJP ಜೊತೆ ಮೈತ್ರಿ ಮಾಡ್ಕೊಂಡ್ರೂ ಅಚ್ಚರಿ ಇಲ್ಲ. 2023ರ ಸಾರ್ವತ್ರಿಕ ಚುನಾವಣೆಗೆ ಕಾಂಗ್ರೆಸ್ ಪಕ್ಷ ಮೈಸೂರು ಮೇಯರ್ ಚುನಾವಣೆಯಲ್ಲಿನ ದಳಪತಿಗಳ ನಡೆಯನ್ನ ರಾಜ್ಯದ ಜನರ ಬಳಿಗೆ ತೆಗೆದುಕೊಂಡು ಹೋಗಲು ಪ್ಲಾನ್​​ ಮಾಡಿಕೊಂಡಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಭವಿಷ್ಯದ ಮೈತ್ರಿಗೆ ಮುನ್ನುಡಿ ಬರೀತಾ ದಳ-ಕಮಲ ?

Source: newsfirstlive.com Source link