ಕಾಂಗ್ರೆಸ್​ನವರು ನನ್ನ ರೇಪ್ ಮಾಡೋಕೆ ಪ್ರಯತ್ನಿಸ್ತಿದ್ದಾರೆ -ಗೃಹ ಸಚಿವ ಆರಗ ಜ್ಞಾನೇಂದ್ರ

ಕಾಂಗ್ರೆಸ್​ನವರು ನನ್ನ ರೇಪ್ ಮಾಡೋಕೆ ಪ್ರಯತ್ನಿಸ್ತಿದ್ದಾರೆ -ಗೃಹ ಸಚಿವ ಆರಗ ಜ್ಞಾನೇಂದ್ರ

ಬೆಂಗಳೂರು: ಮೈಸೂರಿನಲ್ಲಿ ನಡೆದ ಯುವತಿ ಮೇಲಿನ ಸಾಮೂಹಿಕ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ರಾಜ್ಯ ಗೃಹ ಸಚಿವ ಅರಗ ಜ್ಞಾನೇಂದ್ರ.. ಅತ್ಯಾಚಾರಕ್ಕೆ ಒಳಗಾಗಿರುವ ಯುವತಿ ಅಲ್ಲಿಗೆ ಹೋಗಬಾರದಿತ್ತು ಅಂತಾ ಹೇಳಿಕೆ ನೀಡಿದ್ದಾರೆ.

ಮೈಸೂರಿನ ಚಾಮುಂಡಿ ಬೆಟ್ಟದ ಸಮೀಪ ನಡೆದಿರುವ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳ ಜೊತೆ ಮಾತನಾಡಿದ ಅರಗ ಜ್ಞಾನೇಂದ್ರ, ಮೊದಲನೆಯದಾಗಿ ಯುವತಿ ಅಲ್ಲಿಗೆ ಹೋಗಬಾರದು. ಯುವತಿ ಸಂಜೆ 7.30ರ ಸುಮಾರಿಗೆ ಅಲ್ಲಿಗೆ ಹೋಗಿದ್ದಾರೆ. ಅದೂ ನಿರ್ಜನ ಪ್ರದೇಶಕ್ಕೆ. ಯಾರನ್ನೂ ನಾವು ಎಲ್ಲಿಗೂ ಹೋಗಬೇಡಿ ಅಂತಾ ಹೇಳೋಕೆ ಆಗಲ್ಲ, ಅಲ್ಲದೇ ನಾವು ತಡಿಯೋಕೆ ಆಗುವುದಿಲ್ಲ.

ಮುಂದುವರಿದು ಮಾತನಾಡಿದ ಗೃಹ ಸಚಿವರು, ಈ ಕಾಂಗ್ರೆಸ್​ನವರು ನನ್ನ ರೇಪ್ ಮಾಡುತ್ತಿದ್ದಾರೆ. ಗೃಹ ಸಚಿವರನ್ನ ರೇಪ್ ಮಾಡೋಕೆ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

Source: newsfirstlive.com Source link