ಸಿದ್ದರಾಮಯ್ಯ, ರೇವಣ್ಣ, ನಾನು.. ಯಾರೇ ಗೃಹಸಚಿವರನ್ನ ರೇಪ್ ಮಾಡಿದ್ರೆ ಕೇಸ್ ಹಾಕಲಿ- ಡಿಕೆಎಸ್​ ಲೇವಡಿ

ಸಿದ್ದರಾಮಯ್ಯ, ರೇವಣ್ಣ, ನಾನು.. ಯಾರೇ ಗೃಹಸಚಿವರನ್ನ ರೇಪ್ ಮಾಡಿದ್ರೆ ಕೇಸ್ ಹಾಕಲಿ- ಡಿಕೆಎಸ್​ ಲೇವಡಿ

ಮೈಸೂರು: ಜಿಲ್ಲೆಯ ಚಾಮುಂಡಿ ಬೆಟ್ಟದಲ್ಲಿ ನಡೆದ ಯುವತಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದ ಗೃಹ ಸಚಿವ ಆರಗ ಜ್ಞಾನೇಂದ್ರ.. ಕಾಂಗ್ರೆಸ್​ನವರು ನನ್ನನ್ನು ರೇಪ್ ಮಾಡುತ್ತಿದ್ದಾರೆ ಎಂದು ಬೇಜವಾಬ್ಬಾರಿ ಹೇಳಿಕೆ ನೀಡಿದ್ದರು.

ಇದನ್ನೂ ಓದಿ: ಕಾಂಗ್ರೆಸ್​ನವರು ನನ್ನ ರೇಪ್ ಮಾಡೋಕೆ ಪ್ರಯತ್ನಿಸ್ತಿದ್ದಾರೆ -ಗೃಹ ಸಚಿವ ಆರಗ ಜ್ಞಾನೇಂದ್ರ

ಆರಗ ಜ್ಞಾನೇಂದ್ರ ಹೇಳಿಕೆಗೆ ಇದೀಗ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್.. ರೇಪ್ ಎನ್ನುವುದು ಹೋಮ್ ಮಿನಿಸ್ಟರ್​ಗೆ ಪ್ರಿಯವಾದ ಪದ ಎಂದಿದ್ದಾರೆ. ಮುಂದುವರೆದು ರೇಪ್ ಮಾಡಿದ ಕಾಂಗ್ರೆಸ್ ನಾಯಕರ ಮೇಲೆ ಕೇಸ್ ಹಾಕಲಿ. 376 ಅಡಿಯಲ್ಲಿ ಕೂಡಲೇ ಕೇಸ್ ದಾಖಲಿಸಲಿ. ಹೆಚ್ ಎಂ ರೇವಣ್ಣ ರೇಪ್ ಮಾಡಿದ್ದರೆ ಅವರ ಮೇಲೆ ಕೇಸ್ ಹಾಕಿ.. ನಾನು ರೇಪ್ ಮಾಡಿದ್ದರೆ ನನ್ನ ಮೇಲೆ ಕೇಸ್ ಹಾಕಲಿ.. ಸಿದ್ದರಾಮಯ್ಯ ರೇಪ್ ಮಾಡಿದ್ದರೆ ಕೇಸ್ ಹಾಕಲಿ.. ಗೃಹಸಚಿವರನ್ನು ರೇಪ್ ಮಾಡಿದವರಿಗೆ ಕೇಸ್ ಆಗಲಿ ಎಂದು ಗೃಹಸಚಿವರ ಹೇಳಿಕೆಗೆ ಡಿ.ಕೆ.ಶಿವಕುಮಾರ್ ಲೇವಡಿ ಮಾಡಿದ್ದಾರೆ.

Source: newsfirstlive.com Source link