ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್: ಘಟನೆ ಖಂಡಿಸಿ ಮೈಸೂರಿನಲ್ಲಿ ಕಾವೇರಿದ ಪ್ರತಿಭಟನೆ

ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್: ಘಟನೆ ಖಂಡಿಸಿ ಮೈಸೂರಿನಲ್ಲಿ ಕಾವೇರಿದ ಪ್ರತಿಭಟನೆ

ಮೈಸೂರು: ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನ ಖಂಡಿಸಿ ಮೈಸೂರು ವಕೀಲರ ಸಂಘ, ವಿದ್ಯಾರ್ಥಿ ಸಂಘಟನೆ, ಕಾಂಗ್ರೆಸ್ ಇಂದು ಪ್ರತಿಭಟನೆ ನಡೆಸಿವೆ.

ಇದನ್ನೂ ಓದಿ: ಸಿದ್ದರಾಮಯ್ಯ, ರೇವಣ್ಣ, ನಾನು.. ಯಾರೇ ಗೃಹಸಚಿವರನ್ನ ರೇಪ್ ಮಾಡಿದ್ರೆ ಕೇಸ್ ಹಾಕಲಿ- ಡಿಕೆಎಸ್​ ಲೇವಡಿ

ಬಿಜೆಪಿ ಸರ್ಕಾರದಿಂದ ಜನರಿಗೆ ರಕ್ಷಣೆ ಕೊಡಲು ಆಗುತ್ತಿಲ್ಲ. ಇಂತಹ ಘಟನೆ ನಡೆದಿದೆ ಎಂದರೆ ಇದರಲ್ಲಿ ಅಧಿಕಾರಿಗಳ ವಿಫಲತೆ ಕಂಡು ಬರುತ್ತಿದೆ‌. ಪೊಲೀಸರು ತನಿಖೆಯ ಚುರುಕು ಮಾಡಬೇಕು. ಈ ಘಟನೆಯ ವಿಷಯ ತಿಳಿದ ಕೂಡಲೇ ಗೃಹ ಸಚಿವರು ಬರಬೇಕಿತ್ತು. ಬಂದು ನೊಂದು ಕುಟುಂಬದವರಿಗೆ ಸಾಂತ್ವನ ಹೇಳಬೇಕಿತ್ತು. ಆದರೆ ಇನ್ನೂ ಸಹ ಗೃಹ ಸಚಿವರು ಸ್ಥಳಕ್ಕೆ ಭೇಟಿ ನೀಡಿಲ್ಲ. ಇದರಲ್ಲಿ ಅವರ ವಿಫಲತೆ ಎದ್ದು ಕಾಣುತ್ತದೆ. ಆದ್ದರಿಂದ ಗೃಹ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ:ಸಿದ್ದರಾಮಯ್ಯ, ರೇವಣ್ಣ, ನಾನು.. ಯಾರೇ ಗೃಹಸಚಿವರನ್ನ ರೇಪ್ ಮಾಡಿದ್ರೆ ಕೇಸ್ ಹಾಕಲಿ- ಡಿಕೆಎಸ್​ ಲೇವಡಿ

Source: newsfirstlive.com Source link