ಅಫ್ಘಾನ್​ನಲ್ಲಿರುವ ಭಾರತೀಯರ ಸುರಕ್ಷತೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಭೆ

ಅಫ್ಘಾನ್​ನಲ್ಲಿರುವ ಭಾರತೀಯರ ಸುರಕ್ಷತೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಭೆ

ನವದೆಹಲಿ: ತಾಲಿಬಾನ್​​​​ ವಶಕ್ಕೆ ಪಡೆದ ಅಫ್ಘಾನಿಸ್ತಾನದ ವಿಚಾರದಲ್ಲಿ ಭಾರತ ಯಾವ ನಿಲುವಿಗೆ ಬರಬೇಕು ಎಂದು ಚರ್ಚಿಸಲು ಇಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸರ್ವ ಪಕ್ಷಗಳ ನಾಯಕರ ಸಭೆ ಕರೆದಿತ್ತು. ಸಂಸದೀಯ ವ್ಯವಹಾರಗಳ ಸಚಿವಾಲಯ ಕರೆದ ಈ ಸಭೆ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅಧ್ಯಕ್ಷತೆಯಲ್ಲಿ ನಡೆಯಿತು.

ಕೇಂದ್ರ ಸರ್ಕಾರ ಸರ್ವ ಪಕ್ಷಗಳ ನಾಯಕರೊಂದಿಗೆ ಸಭೆ ನಡೆಸಿದ ಬಳಿಕ ಸಚಿವ ಎಸ್.ಜೈಶಂಕರ್ ಮಾಧ್ಯಮದವರೊಂದಿಗೆ ಮಾತಾಡಿದರು. ಸರ್ಕಾರ ಅಪ್ಘಾನಿಸ್ತಾನದಲ್ಲಿ ಸಿಲುಕಿರುವ ಎಲ್ಲಾ ಭಾರತೀಯರನ್ನು ಕರೆದುಕೊಂಡು ಬರಲು ಬದ್ಧವಾಗಿದೆ. ಇದಕ್ಕಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಉನ್ನತ ಸಭೆಗಳನ್ನು ಕರೆಯಲು ಸಿದ್ಧರಿದ್ದೇವೆ. ಮುಂದಿನ ದಿನಗಳಲ್ಲಿ ನಾವು ಇನ್ನಷ್ಟು ಸಭೆಗಳನ್ನು ಮಾಡಲಿದ್ದೇವೆ ಎಂದರು.

ಎಲ್ಲಾ ಪಕ್ಷದ ನಾಯಕರಿಗೂ ಅಫ್ಘಾನಿಸ್ತಾನದಲ್ಲಿ ಉಂಟಾದ ಅರಾಜಕೀಯತೆ ಬಗ್ಗೆ ವಿವರಿಸಿದ್ದಾರೆ. ನಮ್ಮ ಸರ್ಕಾರದ ಉದ್ದೇಶ ಅಫ್ಘಾನಿಸ್ತಾನದಲ್ಲಿ ಸಿಲುಕಿರುವವರನ್ನು ಭಾರತಕ್ಕೆ ಕರೆ ತರುವುದು. ಇದಕ್ಕಾಗಿ ಬೇಕಾದ ಎಲ್ಲಾ ತಯಾರಿಗಳನ್ನು ಮಾಡಿಕೊಂಡಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: ರೈತರಿಗೆ ಸಿಹಿಸುದ್ದಿ ನೀಡಿದ ಮೋದಿ; ಕಬ್ಬಿನ ಕನಿಷ್ಠ ಬೆಂಬಲ ಬೆಲೆ ಕ್ವಿಂಟಾಲ್‌ಗೆ ₹290 ನಿಗದಿ

ಅಫ್ಘಾನಿಸ್ತಾನದ ವಿಚಾರದಲ್ಲಿ ಎಲ್ಲಾ ಪಕ್ಷಗಳ ನಿಲವು ಒಂದೆ. ತಾಲಿಬಾನ್​​ ವಿರುದ್ಧ ನಾವಿದ್ದೇವೆ. ನಮಗೆ ಅಫ್ಘಾನಿಸ್ತಾನದ ಸ್ನೇಹ ಮುಖ್ಯ, ಎಲ್ಲರನ್ನೂ ಕಾಪಾಡಲು ಪ್ರಯತ್ನಿಸುತ್ತೇವೆ ಎಂದು ಹೇಳಿದರು.

ಆಪರೇಷನ್​​ ದೇವಿ ಶಕ್ತಿ ಮುಂದುವರಿಯಲಿದೆ. ಇದುವರೆಗೂ ಆರು ಬಾರಿ ಭಾರತೀಯ ಸೇನೆ ವಿಮಾನದಲ್ಲಿ ನಮ್ಮ ದೇಶದವರೊಂದಿಗೆ ಅಫ್ಘಾನಿಸ್ತಾರನ್ನು ಕರೆದುಕೊಂಡು ಬಂದಿದ್ದೇವೆ. ಇನ್ನು ಒಂದಷ್ಟು ಜನರನ್ನು ಕಾಪಾಡಬೇಕಿದೆ ಎಂದರು.

Source: newsfirstlive.com Source link