‘ಲವ್​​ ಯು ರಚ್ಚು’ ಫೈಟರ್ ಸಾವು ಕೇಸ್: ಪೊಲೀಸ್ ವಿಚಾರಣೆಗೆ ಬಂದ ಅಜಯ್ ರಾವ್

‘ಲವ್​​ ಯು ರಚ್ಚು’ ಫೈಟರ್ ಸಾವು ಕೇಸ್: ಪೊಲೀಸ್ ವಿಚಾರಣೆಗೆ ಬಂದ ಅಜಯ್ ರಾವ್

ರಾಮನಗರ: ‘ಲವ್​ ಯು ರಚ್ಚು’ ಸಿನಿಮಾ ಚಿತ್ರೀಕರಣದ ವೇಳೆ ನಡೆದ ದುರಂತ ಪ್ರಕರಣ ಸಂಬಂಧ ನಟ ಅಜಯ್ ರಾವ್ ಅವರು ಇಂದು ಬಿಡದಿ ಪೊಲೀಸ್ ಠಾಣೆಗೆ ಹಾಜರಾಗಿದ್ದಾರೆ.

ಆಗಸ್ಟ್​ 9 ರಂದು ‘ಲವ್​ ಯು ರಚ್ಚು’ ಚಿತ್ರೀಕರಣದ ವೇಳೆ ವಿದ್ಯುತ್ ಶಾಕ್ ತಗುಲಿ ಫೈಟರ್ ವಿವೇಕ್ ಸಾವನ್ನಪ್ಪಿದ್ದರು. ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಚಿತ್ರದ ನಾಯಕ ಅಜಯ್ ರಾವ್ ಅವರಿಗೆ ಬಿಡದಿ ಪೊಲೀಸ್ ಠಾಣೆ ಅಧಿಕಾರಿಗಳು ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು.

ಇದನ್ನೂ ಓದಿ: ರಚಿತಾ ರಾಮ್​ಗೆ ತರಾಟೆ ತೆಗೆದುಕೊಂಡಿದ್ಯಾಕೆ ಅಭಿಮಾನಿಗಳು..?!

blank

ಅದರಂತೆ ಇಂದು ಮಧ್ಯಾಹ್ನ ಅಜಯ್ ರಾವ್ ಅವರು ಬಿಡದಿ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದಾರೆ. ಬಿಡದಿಯ‌ ಜ್ಯೋಗಯ್ಯನಪಾಳ್ಯ ಗ್ರಾಮದಲ್ಲಿ‌ ಚಿತ್ರೀಕರಣ ನಡೆಯುತ್ತಿದ್ದಾಗ ಅವಘಡ ಸಂಭವಿಸಿತ್ತು. ಯಾವುದೇ ಅನುಮತಿ ಪಡೆಯದೇ ಚಿತ್ರೀಕರಣ ನಡೆಸುತ್ತಿದ್ದರು ಎನ್ನಲಾಗಿದೆ. ಈ ಸಂಬಂಧ ಡಿವೈಎಸ್ಪಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರು.

ಇದನ್ನೂ ಓದಿ:  ಫೈಟರ್​ ವಿವೇಕ್​ ಸಾವಿನ ದುರ್ಘಟನೆ ನಡೆದಾಗ ನಾನು ಸ್ಪಾಟ್​​ನಲ್ಲಿ ಇರಲಿಲ್ಲ -ರಚಿತಾ ರಾಮ್

ಇದನ್ನೂ ಓದಿ: ‘ಲವ್​​ ಯು ರಚ್ಚು’ ಫೈಟರ್ ಸಾವು ಕೇಸ್: ಪೊಲೀಸ್ ವಿಚಾರಣೆಗೆ ಬಂದ ರಚಿತಾ ರಾಮ್

Source: newsfirstlive.com Source link