ದ.ಕನ್ನಡದಲ್ಲಿ ನಕಲಿ RTPCR ರಿಪೋರ್ಟ್ ಹಾವಳಿ.. ಕೇರಳ ಮೂಲದ ನಾಲ್ವರ ಬಂಧನ

ದ.ಕನ್ನಡದಲ್ಲಿ ನಕಲಿ RTPCR ರಿಪೋರ್ಟ್ ಹಾವಳಿ.. ಕೇರಳ ಮೂಲದ ನಾಲ್ವರ ಬಂಧನ

ದಕ್ಷಿಣ ಕನ್ನಡ: ನೆರೆ ರಾಜ್ಯಗಳಾದ ಮಹಾರಾಷ್ಟ್ರ ಮತ್ತು ಕೇರಳ ರಾಜ್ಯಗಳಲ್ಲಿ ಕೊರೊನಾ ಸೋಂಕು ಹೆಚ್ಚಾದ ಬೆನ್ನಲ್ಲೇ ಇದೀಗ ರಾಜ್ಯದ ಗಡಿ ಜಿಲ್ಲೆಯಾದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಏರಿಕೆ ಕಂಡಿದೆ. ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ ಗಡಿಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರೂ ಆತಂಕಕ್ಕೀಡು ಮಾಡುವ ಸಂಗತಿಯೊಂದು ಈ ಹಿಂದೆ ಬೆಳಕಿಗೆ ಬಂದಿತ್ತು.

ಇದನ್ನೂ ಓದಿ: ಹಿರಿಯ ನಟ ದೊಡ್ಡಣ್ಣಗೆ ಅನಾರೋಗ್ಯ; ಆಸ್ಪತ್ರೆಗೆ ದಾಖಲು

ಕೇರಳದಿಂದ ರಾಜ್ಯಕ್ಕೆ ಬರುವವರು ನಕಲಿ RTPCR ನೆಗೆಟಿವ್​ ವರದಿ ತರುತ್ತಿರುವ ಶಂಕೆ ವ್ಯಕ್ತವಾಗಿದೆ. ನಕಲಿ ವರದಿ ತಂದಿರುವ ಶಂಕೆಯಡಿ ಪೊಲೀಸರು ಕೆಲವರನ್ನು ಬಂಧಿಸಿದ್ದಾರೆ. ಕೇರಳದಿಂದ ಕರ್ನಾಟಕಕ್ಕೆ ನಕಲಿ RTPCR ಸರ್ಟಿಫಿಕೇಟ್ ತಂದಿದ್ದ ಕಾಸರಗೋಡು ಜಿಲ್ಲೆಯ ನಾಲ್ವರನ್ನು ಉಳ್ಳಾಲ ಪೊಲೀಸರು ತಲಪಾಡಿ ಗಡಿಭಾಗದಲ್ಲಿ ಬಂಧಿಸಿದ್ದಾರೆ.

ಇನ್ನೋವಾ ಕಾರಲ್ಲಿ ಆಗಮಿಸಿದ್ದ ಕಾಸರಗೋಡು ಜಿಲ್ಲೆಯ ಚೆರ್ವತ್ತೂರು ನಿವಾಸಿ ಆದಿಲ್, ಕಡಪುರ ನಿವಾಸಿ ಇಸ್ಮಾಯಿಲ್, ಬೈಕ್ ನಲ್ಲಿ ಬಂದಿದ್ದ ಚೆರ್ವತ್ತೂರು ನಿವಾಸಿ ಹನೀನ್, ಬಸ್ ನಲ್ಲಿ ಬಂದಿದ್ದ ಚೆಂಗಳ ನಿವಾಸಿ ಅಬ್ದುಲ್ ತಮೀಮ್ ಎಂಬಾತರನ್ನು ಪೊಲೀಸರು ಬಂಧಿಸಿದ್ದು, ಬಂಧಿತರು ಕೇರಳದಿಂದ ನಕಲಿ RTPCR ನೆಗೆಟಿವ್ ವರದಿ ತಂದಿದ್ದಾರೆ ಎಂಬ ಶಂಕೆಯಡಿ ವಿಚಾರಣೆ ನಡೆಸಿದ್ದಾಗಿ ನ್ಯೂಸ್​ಫಸ್ಟ್​ಗೆ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ: ಟಾಲಿವುಡ್​ಗೂ ತಟ್ಟಿದ ಡ್ರಗ್ಸ್ ಕಂಟಕ; ರಣಾ ದಗ್ಗುಬಾಟಿ, ರಕುಲ್ ಪ್ರೀತಿ ಸೇರಿ 10 ಮಂದಿಗೆ ಸಮನ್ಸ್

Source: newsfirstlive.com Source link