ರೇಪ್ ಬಿಟ್ಟು ಹರಾಸ್‍ಮೆಂಟ್ ಕೇಸ್ ದಾಖಲಿಸಿದ್ದಾರೆ: ವಿ.ಎಸ್.ಉಗ್ರಪ್ಪ

ಮೈಸೂರು: ಅತ್ಯಾಚಾರ ನಡೆದ್ರೂ ಐಪಿಸಿ ಸೆಕ್ಷನ್ 376ರ ಅಡಿ ಯಾಕೆ ಕೇಸ್ ಯಾಕೆ ಹಾಕಲಿಲ್ಲ? ಗ್ಯಾಂಗ್ ರೇಪ್ ಮಾಡಿರುವುದು ಸ್ಪಷ್ಟವಾಗಿದೆ. ರೇಪ್ ಬಿಟ್ಟು ಹರಾಸ್‍ಮೆಂಟ್ ಕೇಸ್ ದಾಖಲಿಸಿದ್ದಾರೆ. ರಾಜ್ಯದ ಗೃಹಮಂತ್ರಿಗಳು, ಮುಖ್ಯಮಂತ್ರಿಗಳು ಏನು ಮಾಡುತ್ತಿದ್ದಾರೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಪ್ರಶ್ನಿಸಿ ವಾಗ್ದಾಳಿ ನಡೆಸಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ವಿ.ಎಸ್ ಉಗ್ರಪ್ಪ, ತಿಂಗಳಲ್ಲಿ ಮೈಸೂರಿನಲ್ಲಿ ಒಂದು ಶೂಟೌಟ್ ಆಗಿದೆ. ಮೂರು ಮರ್ಡರ್ ಗಳಾಗಿವೆ, ಮೂರು ದರೋಡೆ, 16 ಕಳ್ಳತನಗಳಾಗಿವೆ. ಸರಸ್ವತಿಪುರಂನಲ್ಲಿ ಇವತ್ತು ಬಾಲಕಿ ಅತ್ಯಾಚಾರ ಕೇಸ್ ದಾಖಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಏನು ಮಾಡುತ್ತಿದ್ದಾರೆ? ಅತ್ಯಾಚಾರ ನಡೆದ್ರೂ 376ರ ಅಡಿ ಕೇಸ್ ಯಾಕೆ ಹಾಕಲಿಲ್ಲ? ಗ್ಯಾಂಗ್ ರೇಪ್ ಮಾಡಿರುವುದು ಸ್ಪಷ್ಟವಾಗಿದೆ. ರೇಪ್ ಬಿಟ್ಟು ಹರಾಸ್‍ಮೆಂಟ್ ಕೇಸ್ ದಾಖಲಿಸಿದ್ದಾರೆ? ಹಿಂದೆ ವಿಬ್ ಗಯಾರ್ ಶಾಲೆಯಲ್ಲಿ ಪ್ರಕರಣ ಆಗಿತ್ತು ಆಗ ನೀವು ಏನಂತ ಬಾಯಿ ಬಡಿದುಕೊಳ್ತಿದ್ರಿ. ಈಗ ಮೈಸೂರಿನ ಹೊಣೆ ಯಾರು ಹೊರಬೇಕು ಎಂದು ಪ್ರಶ್ನಿಸಿ ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ಸಿನವರು ನನ್ನ ರೇಪ್ ಮಾಡಲು ಯತ್ನಿಸುತ್ತಿದ್ದಾರೆ: ಅರಗ ಜ್ಞಾನೇಂದ್ರ

ಮೈಸೂರಿನಲ್ಲಿ ಮಂಗಳವಾರ ನಡೆದಿರುವ ಕೃತ್ಯ ಅಮಾನವೀಯವಾದುದು. ದೆಹಲಿಯ ನಿರ್ಭಯಾ ಕೇಸ್ ರೀತಿಯಲ್ಲಿ, ತೆಲಂಗಾಣದ ರೆಡ್ಡಿ ಕೇಸ್ ರೀತಿಯಲ್ಲಿ ಹೀನ ಕೃತ್ಯವಿದು. ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನ ನಡೆದಿದೆ. ರಿಂಗ್ ರಸ್ತೆಯಲ್ಲಿ ಲಲಿತಾದ್ರಿ ಪಾರ್ಕ್ ಇದೆ. ಆ ಪಾರ್ಕ್‍ನಲ್ಲಿ ಯುವತಿ ಮತ್ತು ಅಕೆಯ ಸ್ನೇಹಿತ ಮಾತನಾಡುತ್ತಿರುತ್ತಾರೆ. ಅಲ್ಲಿಂದ ಯುವತಿ ಎಳೆದೋಯ್ದು ಕೃತ್ಯವೆಸಗಿದ್ದಾರೆ. ಸಂಜೆ 7:30 ರಿಂದ 10:30 ರವರೆಗೆ ನಡೆದಿದೆ. ನಂತರ ಆ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಹೆಣ್ಣುಮಗಳ ದೇಹದ ಮೇಲೆ ಗಂಭೀರ ಗುರುತುಗಳಿವೆ, ಗಾಯಗಳಾಗಿವೆ. ಪೈಶಾಚಿಕವಾಗಿ ಕೃತ್ಯವೆಸಗಿದ್ದಾರೆ. ಘಟನೆ ನಡೆದು 24 ಗಂಟೆಯಾದರೂ ಕೇಸ್ ದಾಖಲಾಗಿರಲಿಲ್ಲ ನಂತರ ಹಾಲನಹಳ್ಳಿ ಠಾಣೆಯಲ್ಲಿ ದೂರು ದಾಖಲಾಗುತ್ತದೆ. ಮೋದಿ ನಿರ್ಭಯ ಕೇಸ್ ವೇಳೆ ಏನು ಮಾಡಿದ್ರಿ? ನಂದಿತಾ ಸಾವು ಗೃಹ ಸಚಿವರ ಕ್ಷೇತ್ರದಲ್ಲಿ ನಡೆದಿತ್ತು ಆಗ ನೀವು ಏನು ಮಾಡಿದ್ದಿರಿ ಇದರ ಬಗ್ಗೆ ನೀವು ಉತ್ತರಿಸಿ ಎಂದು ಹರಿಹಾಯ್ದರು. ಇದನ್ನೂ ಓದಿ: ಬಿಜೆಪಿ ಸರ್ಕಾರದ ಕಳಪೆ ಕಾನೂನು ಸುವ್ಯವಸ್ಥೆಗೆ ಕನ್ನಡಿ ಮೈಸೂರು ಪ್ರಕರಣ: ಕಾಂಗ್ರೆಸ್

Source: publictv.in Source link