ಅಕ್ರಮ ಭೂ ಪರಿವರ್ತನೆಗೆ ಮುಂದಾಗಿದ್ದ ಆರೋಪ; ಮಹಿಳಾ ಅಧಿಕಾರಿ ಮನೆ ಮೇಲೆ ACB ದಾಳಿ

ಅಕ್ರಮ ಭೂ ಪರಿವರ್ತನೆಗೆ ಮುಂದಾಗಿದ್ದ ಆರೋಪ; ಮಹಿಳಾ ಅಧಿಕಾರಿ ಮನೆ ಮೇಲೆ ACB ದಾಳಿ

ಬೆಂಗಳೂರು: ಅಕ್ರಮ ಭೂ ಪರಿವರ್ತನೆಗೆ ಮುಂದಾಗಿದ್ದ ಆರೋಪ ಹೊತ್ತಿರುವ ಡಿಡಿಎಲ್ಆರ್ ಕುಸುಮಲತಾ ಮನೆ ಮೇಲೆ ಎಸಿಬಿ ದಾಳಿ ನಡೆಸಿದೆ. ದಾಳಿ ವೇಳೆ ಅಕ್ರಮ ಭೂ ಪರಿವರ್ತನೆಗೆ ಸಂಬಂಧಿಸಿದಂತೆ ದಾಖಲಾತಿಗಳನ್ನು ಎಸಿಬಿ ವಶಕ್ಕೆ ಪಡೆದುಕೊಂಡಿದೆ ಅಂತಾ ತಿಳಿದುಬಂದಿದೆ.

ಡಿಡಿಎಲ್ಆರ್ ಕುಸುಮಲತಾ, ವಸಂತಪುರ ವಿಲೇಜ್ ಸರ್ವೇ ನಂ.17ರ 29 ಗುಂಟೆ ಖರಾಬು ಜಮೀನನ್ನು ತೆರಿಗೆಯಿಂದ ಪಾರು ಮಾಡಲು ಅಕ್ರಮವಾಗಿ ಭೂ ಪರಿವರ್ತನೆ ಮಾಡಲು ಮುಂದಾಗಿದ್ದರು ಅನ್ನೋ ಆರೋಪ ಇದೆ.

ಇದನ್ನೂ ಓದಿ: ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್: ಘಟನೆ ಖಂಡಿಸಿ ಮೈಸೂರಿನಲ್ಲಿ ಕಾವೇರಿದ ಪ್ರತಿಭಟನೆ

ಜಮೀನು ಮಾಲಿಕರಾದ ವೇಣುಗೋಪಾಲ್ ಮತ್ತು ಮಧ್ಯವರ್ತಿ ಶಾಂತಕಮಾರ್ ಜೊತೆ ಶಾಮೀಲಾಗಿ ಸರ್ಕಾರಕ್ಕೆ ತೆರಿಗೆ ವಂಚಿಸಲು, ಹಳೆಯ ಹೈಕೋರ್ಟ್ ಆದೇಶದ ಹೆಸರಿನಲ್ಲಿ ಭೂ ಪರಿವರ್ತನೆಗೆ ಕುಸುಮಲತಾ ಮುಂದಾಗಿದ್ದರಂತೆ.

ಲಕ್ಷಾಂತರ ರೂಪಾಯಿ ಲಂಚ ಪಡೆದು ಭೂ ಪರಿವರ್ತನೆ ಮಾಡುತ್ತಿರುವುದಾಗಿ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಎಸಿಬಿ ದಾಳಿ ನಡೆಸಿರುವುದಾಗಿ ಮಾಹಿತಿ ಲಭ್ಯವಾಗಿದೆ. ಇನ್ನು ದಾಳಿ ವೇಳೆ ಅಕ್ರಮ ಭೂ ಪರಿವರ್ತನೆ ಬಗ್ಗೆ ಎಸಿಬಿ ಮಹತ್ತರ ದಾಖಲೆಗಳನ್ನು ವಶಪಡಿಸಿಕೊಂಡಿದೆ ಎಂದು ನ್ಯೂಸ್​ಫಸ್ಟ್​ಗೆ ಮಾಹಿತಿ ಲಭ್ಯವಾಗಿದೆ.

blank

 

Source: newsfirstlive.com Source link