ನಿರೂಪಕ ಅಕುಲ್ ಬಾಲಾಜಿಗೆ ‘ಪುನರ್ವಿವಾಹ’ದ ಯೋಗ..!

ನಿರೂಪಕ ಅಕುಲ್ ಬಾಲಾಜಿಗೆ ‘ಪುನರ್ವಿವಾಹ’ದ ಯೋಗ..!

ಕನ್ನಡ ಕಿರುತೆರೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಅಕುಲ್​ ಬಾಲಾಜಿ ಕಾರ್ಯಕ್ರಮಗಳ ಹೊಸ್ಟ್​ಗೆ ಮಾತ್ರ ಸೀಮಿತವಾಗದೇ ಸಾಕಷ್ಟು ಸೀರಿಯಲ್​ಗಳಲ್ಲಿ ಅಭಿನಯಿಸಿದ್ದು, ಇತ್ತಿಚೀಗೆ ಅವ್ರು ನಟನೆ ಮಾಡಿರುವ ತೆಲುಗು ಸೀರಿಯಲ್ ಕನ್ನಡಕ್ಕೆ ಬರುತ್ತಿರುವ ಬಗ್ಗೆ ಮಾಹಿತಿ ನೀಡಿದ್ವಿ.

ಹೌದು, ಅಕುಲ್​ ಬಾಲಾಜಿ ಹಾಗೂ ರೂಪಾ ಲೀಡ್​ ರೋಲ್​ನಲ್ಲಿರುವ ಊಹಲು ಗುಸುಗುಸುಲಾಡೆ ಸೀರಿಯಲ್ ತೆಲುಗಿನಲ್ಲಿ ಯಶಸ್ವಿಯಾಗಿ ಪ್ರಸಾರವಾಗುತ್ತಿದ್ದು, ಈಗ ಪುನರ್​ ವಿವಾಹ ಟೈಟಲ್​ ಮೂಲಕ ಅಗಸ್ಟ್​ 30 ರಂದು ಕನ್ನಡಿಗರ ಮನೆಗೂ ಲಗ್ಗೆ ಇಡಲು ಸಜ್ಜಾಗಿದೆ..

blank

ಅಂದ್ಹಾಗೆ, ಪುನರ್​ ವಿವಾಹ ಅಂದ ತಕ್ಷಣ ಈ ಹಿಂದೆ ಝೀ ಕನ್ನಡದ ಸೂಪರ್ ಹಿಟ್​​ ಸೀರಿಯಲ್​ಗಳ ಪಟ್ಟಿಗೆ ಸೇರಿದ್ದ ಪುನರ್​ ವಿವಾಹ ಧಾರಾವಾಹಿ ನೆನಪಾಗುತ್ತೆ. ಜಗನ್​ ಹಾಗೂ ಅನುಷಾ ನಾಯಕ್​ ಲೀಡ್​ನಲ್ಲಿದ್ದರು. ಈ ಧಾರಾವಾಹಿಯ ಕಥೆಗೆ ಸಾಮ್ಯತೆ ಹೊಂದುವಂತಿದೆ ಈ ಹೊಸ ಪುನರ್​ ವಿವಾಹ.

ಅಕುಲ್​ ಕಥೆಯ ನಾಯಕ ಅಭಿರಾಮ್​ ಪಾತ್ರಕ್ಕೆ ಬಣ್ಣ ಹಚ್ಚಿದರೇ ನಾಯಕಿ ವಸುಂದರಾ ಪಾತ್ರಕ್ಕೆ ರೂಪಾ ಬಣ್ಣಹಚ್ಚಿದ್ದಾರೆ. ಇನ್ನೂ ಹೆಂಡತಿಯ ಅಗಲಿಕೆಯ ನೋವಿನಲ್ಲಿರುವ ಅಭಿರಾಮ್​ಗೆ ಇಬ್ಬರು ಹೆಣ್ಣುಮಕ್ಕಳು ಇರುತ್ತಾರೆ. ಇತ್ತ ನಾಯಕಿ ವಸುಂದರಾಗೆ ಒಬ್ಬ ಮಗ ಇದ್ದು, ಗಂಡನನ್ನು ಕಳೆದುಕೊಂಡು ಒಂಟಿಯಾಗಿ ಜೀವನ ನಡೆಸುತ್ತಿರುತ್ತಾರೆ. ಇಬ್ಬರ ಬದುಕು ಅತಂತರವಾಗಿ ಸಾಗುತ್ತಿದ್ದಾಗ ಕಾರಣಾಂತರಗಳಿಂದ ಇಬ್ಬರು ಮದುವೆಯಾಗುತ್ತಾರೆ. ಆ 3 ಮಕ್ಕಳು ಇವರಿಬ್ಬರ ಬಂಧನ ಹೇಗೆ ಸಾಗುತ್ತದೆ ಎಂಬುವುದೇ ಈ ಧಾರವಾಹಿಯ ಮುಖ್ಯ ಎಳೆ.

ಝೀ ತೆಲುಗುಲ್ಲಿ ಪ್ರಸಾರವಾಗುತ್ತಿರುವ ಊಹಲು ಗುಸುಗುಸುಲಾಡೆ ಸೀರಿಯಲ್​ ಕನ್ನಡಕ್ಕೆ ಡಬ್​ ಆಗುತ್ತಿದ್ದು, ಈ ಸೀರಿಯಲ್​ನಲ್ಲಿ ಕನ್ನಡಿಗರೇ ಹೆಚ್ಚಾಗಿ ಅಭಿನಯಿಸಿದ್ದಾರೆ. ಝೀ ಕನ್ನಡದ ಮೂಲಕ ಅಕುಲ್ ಅಂಡ್ ಟೀಮ್ ಅನ್ನ ಕಣ್ತುಂಬಿಕೊಳ್ಳಬಹುದು. ಒಟ್ಟಿನಲ್ಲಿ ಪುನರ್​ ವಿವಾಹ ಸೀರಿಯಲ್​ ಇದೇ ಅಗಸ್ಟ್​ 30 ರಂದು ಝೀ ಕನ್ನಡದಲ್ಲಿ ಲಾಂಚ್​ ಆಗುತ್ತಿದ್ದು, ಅಕುಲ್​ ಮತ್ತು ಪುನರ್​ ವಿವಾಹ ತಂಡಕ್ಕೆ ನಮ್ಮ ಕಡೆಯಿಂದ ಆಲ್​ ದಿ ಬೆಸ್ಟ್​.

Source: newsfirstlive.com Source link