ಮೈಸೂರಲ್ಲಿ ಗ್ಯಾಂಗ್ ರೇಪ್​​: ‘ಆ’ ದಿನ ಅಲ್ಲಿ ಏನೆಲ್ಲಾ ನಡೆಯಿತು..?

ಮೈಸೂರಲ್ಲಿ ಗ್ಯಾಂಗ್ ರೇಪ್​​: ‘ಆ’ ದಿನ ಅಲ್ಲಿ ಏನೆಲ್ಲಾ ನಡೆಯಿತು..?

ಮೈಸೂರು: ಸಾಂಸ್ಕೃತಿಕ ನಗರಿ ಎನ್ನಿಸಿಕೊಂಡಿರುವ ಮೈಸೂರಿನಲ್ಲಿ ವಿದ್ಯಾರ್ಥಿನಿಯೋರ್ವಳ ಮೇಲೆ ಗ್ಯಾಂಗ್ ರೇಪ್ ನಡೆದಿರುವ ಪ್ರಕರಣ ಬೆಳಕಿಗೆ ಬಂದಿದೆ. ಮೈಸೂರಿನ‌ ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ನಿನ್ನೆರಾತ್ರಿ ಘಟನೆ ನಡೆದಿದೆ ಎನ್ನಲಾಗಿದೆ.

ಇದನ್ನೂ ಓದಿ: ಸಿದ್ದರಾಮಯ್ಯ, ರೇವಣ್ಣ, ನಾನು.. ಯಾರೇ ಗೃಹಸಚಿವರನ್ನ ರೇಪ್ ಮಾಡಿದ್ರೆ ಕೇಸ್ ಹಾಕಲಿ- ಡಿಕೆಎಸ್​ ಲೇವಡಿ

blank

ಈ ಸಂಬಂಧ ತನಿಖೆಯನ್ನ ಆರಂಭಿಸಿರುವ ಮೈಸೂರು ಪೊಲೀಸರು, ಶಂಕಿತ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ಇನ್ನು ದಿನಾಂಕ 24 ಮಂಗಳವಾರ ಸಂಜೆ ಏನು ನಡೀತು ಅನ್ನೋ ಮಾಹಿತಿ ನ್ಯೂಸ್​ಫಸ್ಟ್​ಗೆ ಲಭ್ಯವಾಗಿದೆ.

ಅಂದು ಸಂಜೆ ನಡೆದಿದ್ದು ಏನು..?

 • ಸಂಜೆ 6.20ಕ್ಕೆ ಪಿಜಿಯಿಂದ ಹೊರ ಬಂದ ಸಂತ್ರಸ್ತೆ
 • ಬಳಿಕ ಗೆಳೆಯನ ಜೊತೆ ಬೈಕ್‌ನಲ್ಲಿ ರೌಂಡ್ಸ್
 • 7 ಘಂಟೆ ವೇಳೆಗೆ ಲಲಿತಾದ್ರಿಪುರ ನಿರ್ಜ‌ನ ಪ್ರದೇಶಕ್ಕೆ ಭೇಟಿ
 • ಪರಸ್ಪರ ಮಾತುಕತೆ ನಡೆಸುತ್ತಿದ್ದ ಸಂತ್ರಸ್ತೆ, ಗೆಳೆಯ
 • 7.30ರ ಸುಮಾರಿಗೆ ಪಾನಮತ್ತರಾಗಿ ಬಂದ ಆರು ಜನರ ಗುಂಪು
 • ಯಾಕೆ ಇಲ್ಲಿ ಇದ್ದೀರ, ಏನು ಕೆಲಸ ಎಂದು ಪ್ರಶ್ನೆ
 • ಮೊಬೈಲ್‌ನಲ್ಲಿ ವಿಡಿಯೋ ಮಾಡಲು ಮುಂದಾದ ಆರೋಪಿಗಳು
 • ಹೆದರಿದ ಪ್ರೇಮಿಗಳಿಂದ ಕೂಗಾಟ, ಚೀರಾಟ
 • ಗೆಳೆಯನಿಗೆ ಥಳಿಸಿ ಕೈಕಾಲು ಕಟ್ಟಿ ಹಾಕಿದ ದುಷ್ಕರ್ಮಿಗಳು
 • ಬಳಿಕ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ
 • ಅತ್ಯಾಚಾರ ವಿಡಿಯೋ ಮೊಬೈಲ್‌ನಲ್ಲಿ ಸೆರೆ ಹಿಡಿದ ಆರೋಪಿಗಳು
 • ಬಳಿಕ ಪೊಲೀಸರಿಗೆ ದೂರು ನೀಡದಂತೆ ಬೆದರಿಕೆ
 • 9 ಘಂಟೆ ವೇಳೆಗೆ ಗೆಳೆಯನಿಂದ ಸಂತ್ರಸ್ತೆಯನ್ನ ಆಸ್ಪತ್ರೆಗೆ ದಾಖಲು
 • ಸುದ್ದಿ ತಿಳಿದ ಅಲನಹಳ್ಳಿ ಪೊಲೀಸರ ಭೇಟಿ, ತನಿಖೆ ಆರಂಭ

ಇದನ್ನೂ ಓದಿ:ಸಿದ್ದರಾಮಯ್ಯ, ರೇವಣ್ಣ, ನಾನು.. ಯಾರೇ ಗೃಹಸಚಿವರನ್ನ ರೇಪ್ ಮಾಡಿದ್ರೆ ಕೇಸ್ ಹಾಕಲಿ- ಡಿಕೆಎಸ್​ ಲೇವಡಿ

Source: newsfirstlive.com Source link