ಮಳೆ ನಡುವೆಯೇ ಅಲೆಮಾರಿಗಳ ಗುಡಿಸಲು ತೆರವು; ನಗರಸಭೆ ವಿರುದ್ಧ ಆಕ್ರೋಶ

ಮಳೆ ನಡುವೆಯೇ ಅಲೆಮಾರಿಗಳ ಗುಡಿಸಲು ತೆರವು; ನಗರಸಭೆ ವಿರುದ್ಧ ಆಕ್ರೋಶ

ತುಮಕೂರು: ಜಿಲ್ಲೆಯಲ್ಲಿ ಬಿಟ್ಟುಬಿಡದೇ ಸುರಿಯುತ್ತಿರುವ ಧಾರಾಕಾರ ಮಳೆಯ ನಡುವೆಯೇ, ಮಾನವೀಯತೆ ಮರೆತು ಅಲೆಮಾರಿಗಳ ಗುಡಿಸಲು ತೆರವುಗೊಳಿಸಿದ ಸಗರಸಭೆಯ ವಿರುದ್ಧ ಸಾರ್ವಜನಿಕರು ಗರಂ ಆಗಿದ್ದಾರೆ.

ನಗರದ ಹಾಸನ ಸರ್ಕಲ್ ನ ರೈಲ್ವೆ ಹಳಿ ಪಕ್ಕದಲ್ಲಿ ಅಲೆಮಾರಿ ಜನಾಂಗದವರು ಚಿಕ್ಕಪುಟ್ಟ ಗುಡಿಸಲುಗಳಲ್ಲಿ ವಾಸವಾಗಿದ್ದು, ಧಾರಕಾರ ಮಳೆಯೇ ನಡುವೆಯೇ ಜೆಸಿಬಿಗಳ ಮೂಲಕ ಗುಡಿಸಲುಗಳನ್ನು, ಪೊಲೀಸರ ಸರ್ಪಗಾವಲಿನಲ್ಲಿ ತೆರವುಗೊಳಿಸಿದ ಪರಿಣಾಮ ಮಹಿಳೆ, ಮಕ್ಕಳು ಸೇರಿ ಹತ್ತಾರು ಕುಟುಂಬಗಳು ಬೀದಿಗೆ ಬಿದ್ದಿವೆ..

 

ಇದನ್ನೂ ಓದಿ: ಹಿರಿಯ ನಟ ದೊಡ್ಡಣ್ಣಗೆ ಅನಾರೋಗ್ಯ; ಆಸ್ಪತ್ರೆಗೆ ದಾಖಲು

ಜೆಸಿಬಿಗಳ ಮೂಲಕ ತೆರವು ಕಾರ್ಯಾಚರಣೆ ಆರಂಭಿಸಿರುವ ನಗರಸಭೆ, ಮಳೆ ನಡುವೆ ಅಲೆಮಾರಿಗಳನ್ನು ಬೀದಿಗೆ ತಳ್ಳಿದ್ದಾರೆ. ತಾತ್ಕಾಲಿಕ ಸೂರು ಕಲ್ಪಿಸದೇ ಗುಡಿಸಲು ತೆರವುಗೊಳಿಸಿದಕ್ಕೆ ಸಾರ್ವಜನಿಕರು ನಗರಸಭೆಯ ಈ ಕಾರ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದು, ನಗರಸಭೆ ಅಧಿಕಾರಿಗಳ ವಿರುದ್ಧ ಗರಂ ಆಗಿದ್ದಾರೆ..

blank

ಇದನ್ನೂ ಓದಿ:  ಮೈಸೂರಲ್ಲಿ ಗ್ಯಾಂಗ್ ರೇಪ್​​: ‘ಆ’ ದಿನ ಅಲ್ಲಿ ಏನೆಲ್ಲಾ ನಡೆಯಿತು..?

Source: newsfirstlive.com Source link