ಗಂಡು ಮಗುವಿಗೆ ಜನ್ಮ ನೀಡಿದ ನಟಿ ನುಸ್ರತ್​​​ ಜಹಾನ್ -‘ಮಗು ನಂದಲ್ಲ’ ಎಂದ ಹಳೇ ಗಂಡ

ಗಂಡು ಮಗುವಿಗೆ ಜನ್ಮ ನೀಡಿದ ನಟಿ ನುಸ್ರತ್​​​ ಜಹಾನ್ -‘ಮಗು ನಂದಲ್ಲ’ ಎಂದ ಹಳೇ ಗಂಡ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್​ ಸಂಸದೆ ಮತ್ತು ಬೆಂಗಾಳಿ ನಟಿ ನುಸ್ರತ್​​​ ಜಹಾನ್ ತಾಯಿಯಾಗಿ ಭಾರೀ ಸುದ್ದಿಯಲ್ಲಿದ್ದಾರೆ. ನುಸ್ರತ್‌ ಜಹಾನ್‌ ಕೋಲ್ಕತ್ತಾದ ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಮತ್ತು ಮಗ ಇಬ್ಬರು ಆರೋಗ್ಯವಾಗಿದ್ದಾರೆ ಎಂದು ವೈದ್ಯಕೀಯ ಮೂಲಗಳು ತಿಳಿಸಿದೆ.

31 ವರ್ಷದ ನುಸ್ರತ್ ಜಹಾನ್​​ಗೆ ಬುಧವಾರ ಮಧ್ಯರಾತ್ರಿಯೇ ಹೆರಿಗೆ ನೋವು ಶುರುವಾಗಿದೆ. ಬಳಿಕ ಕೂಡಲೇ ತಡರಾತ್ರಿ ಜಹಾನ್​​ನನ್ನು ಗೆಳೆಯ ಯಶ್​​ ದಾಸ್​ ಗುಪ್ತಾ ಎಂಬುವರು ಕೋಲ್ಕತ್ತಾದ ಖಾಸಗಿ ಆಸ್ಪತ್ರೆಗೆ ಸೇರಿಸಿದ್ದಾರೆ. ಇದಾದ ಕೆಲವೇ ಹೊತ್ತಲ್ಲಿ ನುಸ್ರತ್​​​​ ಹೆರಿಗೆಯಾಗಿದೆ.

blank

ಇನ್ನು, ಆಸ್ಪತ್ರೆಗೆ ದಾಖಲಾದ ನುಸ್ರತ್‌ ಮಮತಾ ಬ್ಯಾನರ್ಜಿ ಸರ್ಕಾರ ಬಿಗಿ ಪೊಲೀಸ್​​ ಭದ್ರತೆ ಆಯೋಜಿಸಿದೆ. ಹೀಗಿರುವಾಗಲೇ ನುಸ್ರತ್​​​ ಮಗುವಿಗೆ ತಂದೆ ಯಾರು ಎಂಬ ಚರ್ಚೆ ನಡೆಯುತ್ತಿದೆ. ಈ ಮಧ್ಯೆ ನ್ಯೂಸ್​ ಒಂದಕ್ಕೆ ಪ್ರತಿಕ್ರಿಯಿಸಿರುವ ನುಸ್ರತ್ ಅವರ ಮಾಜಿ ಪತಿ, ಈ ಮಗುವಿಗೂ ನನಗೂ ಸಂಬಂಧ ಇಲ್ಲ ಅಂತಾ ಹೇಳಿದ್ದಾರೆ.

ಇದನ್ನೂ ಓದಿ: ನುಸ್ರತ್​ ಜಹಾನ್​ ಬೇಬಿ ಬಂಪ್​ ಫೋಟೋ ವೈರಲ್​; ಇನ್ನಾದ್ರೂ ಬಹಿರಂಗ ಪಡಿಸ್ತಾರಾ ಸೀಕ್ರೆಟ್​​.?

ಇತ್ತೀಚೆಗೆ ನಿಖಿಲ್ ಜೈನ್‌ನಿಂದ ನುಸ್ರತ್​​​​ ಡಿವೋರ್ಸ್​ ಪಡೆದಿದ್ದರು. ಇದಾದ ಬಳಿಕ ನುಸ್ರತ್​​​​​ ಯಶ್​​ ದಾಸ್​​​ ಗುಪ್ತಾ ಅವರೊಂದಿಗೆ ಸಂಬಂಧ ಹೊಂದಿದ್ದರು ಎಂದು ಹೇಳಲಾಗುತ್ತಿದೆ.

blank

ನುಸ್ರತ್‌ ಜಹಾನ್‌ ಮಗುವಿಗೆ ಜನ್ಮ ನೀಡಿದ ಕೂಡ ಹಲವರು ಶುಭ ಹಾರೈಸಿದ್ದಾರೆ. ನಟಿ ಮತ್ತು ರಾಜಕಾರಣಿ ಮಿಮಿ ಚಕ್ರವರ್ತಿ ತಾಯಿಯಾದ ನುಸ್ರತ್‌ ಜಹಾನ್‌ಗೆ ಶುಭಾಶಯ ತಿಳಿಸಿದ್ದಾರೆ.

Source: newsfirstlive.com Source link