ಪ್ಯಾಟ್​ ಕಮಿನ್ಸ್​​ ಜಾಗಕ್ಕೆ ಕೆಕೆಆರ್​ ತಂಡಕ್ಕೆ ನ್ಯೂಜಿಲೆಂಡ್​ ವೇಗಿ..!

ಪ್ಯಾಟ್​ ಕಮಿನ್ಸ್​​ ಜಾಗಕ್ಕೆ ಕೆಕೆಆರ್​ ತಂಡಕ್ಕೆ ನ್ಯೂಜಿಲೆಂಡ್​ ವೇಗಿ..!

IPL​ನ ಉಳಿದ 31 ಪಂದ್ಯಗಳಿಗೆ ಕೋಲ್ಕತ್ತಾ ನೈಟ್ ರೈಡರ್ಸ್​​ ಫ್ರಾಂಚೈಸಿ ಜೊತೆಗೆ ನ್ಯೂಜಿಲೆಂಡ್​ ವೇಗಿ ಟಿಮ್ ಸೌಥಿ ಒಪ್ಪಂದ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕೆಕೆಆರ್ ತನ್ನ ಅಧಿಕೃತ ಟ್ವಿಟರ್​​​​​ನಲ್ಲಿ ಖಚಿತಪಡಿಸಿದೆ.

ಎರಡನೇ ಹಂತದ ಐಪಿಎಲ್​ಗೆ ವೇಗಿ ಪ್ಯಾಟ್​​​ ಕಮಿನ್ಸ್​ ದೂರ ಉಳಿಯುವ ಕಾರಣ, ಅವರ ಜಾಗಕ್ಕೆ ಸೌಥಿ ಕೆಕೆಆರ್​ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ಆದರೆ ಸಹಿ ಹಾಕಿದ ನಿಖರವಾದ ಮೊತ್ತ ಎಷ್ಟೆಂಬುದು ತಿಳಿದು ಬಂದಿಲ್ಲ. ಸತತ ಆರು ವರ್ಷಗಳ ಕಾಲ ಐಪಿಎಲ್‌ನಲ್ಲಿ ಪಾಲ್ಗೊಂಡಿದ್ದ ಸೌಥಿ, 2020ರ ಹರಾಜಿನಲ್ಲಿ ಮಾರಾಟವಾಗಿರಲಿಲ್ಲ.

32 ವರ್ಷದ ಬಲಗೈ ವೇಗಿ ಈ ಹಿಂದೆ ಚೆನ್ನೈ ಸೂಪರ್ ಕಿಂಗ್ಸ್, ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಿದ್ದಾರೆ. 2019ರಲ್ಲಿ ಕೊನೆಯದಾಗಿ ಐಪಿಎಲ್​ ಆಡಿದ್ದ ಸೌಥಿ, ಇದೀಗ ಮತ್ತೊಮ್ಮೆ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಪ್ಯಾಟ್​​ ಕಮಿನ್ಸ್ ಅವರನ್ನು 2019 ಐಪಿಎಲ್ ಹರಾಜಿನಲ್ಲಿ ಕೆಕೆಆರ್​​ ಫ್ರಾಂಚೈಸಿ 15.5 ಕೋಟಿಗೆ ಖರೀದಿ ಮಾಡಿತ್ತು. ಯುಎಇನಲ್ಲಿ ನಡೆಯುವ ಐಪಿಎಲ್​ಗೆ ಸಿದ್ಧತೆ ಮತ್ತು ಕ್ವಾರಂಟೀನ್​ ಭಾಗವಾಗಿ KKR ಇಂದು ಯುಎಇಗೆ ತೆರಳಿದೆ.

 

Source: newsfirstlive.com Source link