ಸಿಬ್ಬಂದಿ ಕಿಡ್ನಾಪ್​ ಮಾಡಿ ಹಣ ಕೊಡುವಂತೆ ಮಾಲೀಕನಿಗೆ ಡಿಮ್ಯಾಂಡ್; ಮುಂದೇನಾಯ್ತು?

ಸಿಬ್ಬಂದಿ ಕಿಡ್ನಾಪ್​ ಮಾಡಿ ಹಣ ಕೊಡುವಂತೆ ಮಾಲೀಕನಿಗೆ ಡಿಮ್ಯಾಂಡ್; ಮುಂದೇನಾಯ್ತು?

ಬೆಂಗಳೂರು: ಫುಡ್ ಫ್ಯಾಕ್ಟರಿ ಸಿಬ್ಬಂದಿ ಕಿಡ್ನಾಪ್ ಮಾಡಿ ಹಣ ಕೊಡುವಂತೆ ಮಾಲೀಕನಿಗೆ ಬೇಡಿಕೆ ಇಟ್ಟಿದ್ದ ಚಾಲಾಕಿಗಳನ್ನ ಮಹಾಲಕ್ಷ್ಮೀ ಲೇಔಟ್​ ಪೊಲೀಸರು ಬಂಧಿಸಿದ್ದಾರೆ.

ರೌಡಿ ಶೀಟರ್ ಕುಳ್ಳಿ ರಮೇಶ್, ಸಂತೋಷ್, ದುರ್ಗೇಶ್, ಹರೀಶ್, ಅರವಿಂದ್ ಮತ್ತು ವಿವೇಕ್ ಬಂಧಿತರು. ನಗರದ ಸಾಯಿ ಫುಡ್ ಪ್ರೈವೇಟ್ ಲಿಮಿಟೆಡ್​​ನ ಇಬ್ಬರು ಸಿಬ್ಬಂದಿಯನ್ನು ಕಿಡ್ನಾಪ್ ಮಾಡಿ ಬರೋಬ್ಬರಿ 20 ಲಕ್ಷ ಹಣ ಕೊಟ್ಟರೆ ಮಾತ್ರ ಬಿಡೋದಾಗಿ ಆರೋಪಿಗಳು ಮಾಲೀಕನಿಗೆ ಡಿಮ್ಯಾಂಡ್​ ಇಟ್ಟಿದ್ದರಂತೆ.

blank

ಸಾಯಿ ಫುಡ್ ವೆಹಿಕಲ್ ವಾಹನವನ್ನು ಅಡ್ಡಹಾಕಿ ವಾಹನ ಸಮೇತ ಕಿಡ್ನಾಪ್ ಮಾಡಿದ್ದ ಖದೀಮರು, ಲೋನ್ ಕಟ್ಟಬೇಕು ಎಂಬ ನೆಪವೊಡ್ಡಿ ನಡು ರಸ್ತೆಯಲ್ಲಿ ವಾಹನ ನಿಲ್ಲಿಸಿದ ಖತರ್ನಾಕ್​ ಖದೀಮರು ಸಿಬ್ಬಂದಿ ಸಹಿತ ವಾಹನವನ್ನು ಅಪಹರಣ ಮಾಡಿ ಪರಾರಿಯಾಗಿದ್ದಾರೆ. ನಂತರ ಮಾಲೀಕ ಶ್ರೀನಿವಾಸ್​ ಎಂಬುವವರಿಗೆ ಕರೆ ಮಾಡಿ 20 ಲಕ್ಷ ಕೊಟ್ಟರೆ ನಿಮ್ಮ ವಾಹನ ಮತ್ತು ಸಿಬ್ಬಂದಿ ಬಿಡೋದಾಗಿ ವಾರ್ನಿಂಗ್​ ನೀಡಿದ್ದರಂತೆ.

ಇದನ್ನೂ ಓದಿ: ‘ಲವ್​​ ಯು ರಚ್ಚು’ ಫೈಟರ್ ಸಾವು ಕೇಸ್: ಪೊಲೀಸ್ ವಿಚಾರಣೆಗೆ ಬಂದ ಅಜಯ್ ರಾವ್

ಇದರಿಂದ ಗಾಬರಿಯಾದ ಮಾಲೀಕ ಶ್ರೀನಿವಾಸ್​ ತಕ್ಷಣ ಮಾಹಾಲಕ್ಷ್ಮೀ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರಿಗೆ ಮಾಹಿತಿ ದೊರಕಿದೆ ಎಂದು ಅರಿತ ಆರೋಪಿಗಳು ವಾಹನ ಸಮೇತ ಸಿಬ್ಬಂದಿಯನ್ನು ಬಿಟ್ಟು ಪರಾರಿಯಾಗಿದ್ದಾರೆ ಎನ್ನಲಾಗಿದೆ.

 

ಆರೋಪಿಗಳು ಮಾಡಿದ್ದ ಪ್ಲಾನ್​ ಬೇರೆ, ನಡೆದಿದ್ದೆ ಬೇರೆ..!
ನ್ಯೂಸ್​9 ಕನ್ನಡ ಎಂಬ ಹೆಸರಿನ ಯೂಟ್ಯೂಬ್​ ಚಾನಲ್​ ಆಪರೇಟ್​ ಮಾಡ್ತಿದ್ದ ಆರೋಪಿಗಳು ಫುಡ್ ಕಂಪನಿಗೆ ತೆರಳಿ, ಎಕ್ಸಪೈರಿ ಆಗಿರುವ ಆಹಾರ ಪದಾರ್ಥಗಳನ್ನು ಮಾರಾಟ ಮಾಡ್ತಿರಾ ಎಂದು ಬೆದರಿಕೆ ಹಾಕುತ್ತಿದ್ದರು. ಈ ಬಗ್ಗೆ “ನಮ್ಮ ಯುಟ್ಯೂಬ್ ಚಾನಲ್​ನಲ್ಲಿ ಹಾಕ್ತೀವಿ” ಎಂದು ಹೆದರಿಸಿ ಹಣ ವಸೂಲಿ ಮಾಡುವ ಪ್ಲಾನ್​ ಮಾಡಿದ್ದಾಗಿ ತಿಳಿದು ಬಂದಿದೆ. ಫ್ಯಾಕ್ಟರಿಯಲ್ಲಿ ಎಕ್ಸ್​ಪೈರಿ ಆಗಿರೋ ಆಹಾರ ಪದಾರ್ಥಗಳು ಸಿಗದ ಕಾರಣ ಕಿಡ್ನಾಪ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಕುರಿತು ಓರ್ವ ರೌಡಿಶೀಟರ್​ ಸೇರಿ 6 ಜನರನ್ನು ಬಂಧಿಸಿದ ಪೊಲೀಸರು ಪ್ರಕರಣ ದಾಖಲಿಸಿ ವಿಚಾರಣೆ ನಡೆಸುತ್ತಿದ್ದಾರೆ..

ಇದನ್ನೂ ಓದಿ: ಅಕ್ರಮ ಭೂ ಪರಿವರ್ತನೆಗೆ ಮುಂದಾಗಿದ್ದ ಆರೋಪ; ಮಹಿಳಾ ಅಧಿಕಾರಿ ಮನೆ ಮೇಲೆ ACB ದಾಳಿ

Source: newsfirstlive.com Source link