ರಾಯಚೂರಲ್ಲಿ 59 ಬಾಲ ಕಾರ್ಮಿಕರ ರಕ್ಷಣೆ; ಮಕ್ಕಳ ಕಳ್ಳ ಸಾಗಾಣಿಕೆ ಕಾಯ್ದೆಯಡಿ ಕೇಸ್

ರಾಯಚೂರಲ್ಲಿ 59 ಬಾಲ ಕಾರ್ಮಿಕರ ರಕ್ಷಣೆ; ಮಕ್ಕಳ ಕಳ್ಳ ಸಾಗಾಣಿಕೆ ಕಾಯ್ದೆಯಡಿ ಕೇಸ್

ರಾಯಚೂರು: ಕೂಲಿ ಕೆಲಸಕ್ಕೆ ಕರೆದುಕೊಂಡು ಹೋಗುತ್ತಿದ್ದ 59 ಬಾಲ ಕಾರ್ಮಿಕರನ್ನ ರಕ್ಷಣೆ ಮಾಡಲಾಗಿದೆ. ವಾಹನಗಳಲ್ಲಿ ತುಂಬಿ ಅಕ್ರಮವಾಗಿ ಮಕ್ಕಳನ್ನ ಕೂಲಿ ಕೆಲಸಕ್ಕೆ ಸಾಗಿಸಲಾಗ್ತಿತ್ತು ಅನ್ನೋ ಆರೋಪ ಕೇಳಿಬಂದಿದೆ.

ಖಚಿತ ಮಾಹಿತಿ ಪಡೆದ ಅಧಿಕಾರಿಗಳು ಮಕ್ಕಳ ರಕ್ಷಣಾ ಇಲಾಖೆಯ ಜಿಲ್ಲಾಧಿಕಾರಿ ಮಂಜುನಾಥ್ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ. 5 ಗೂಡ್ಸ್ ವಾಹನಗಳಲ್ಲಿ ಮಕ್ಕಳನ್ನು ಕೃಷಿ ಕೂಲಿ ಕೆಲಸಕ್ಕೆ ಸಾಗಿಸಲಾಗ್ತಿತ್ತು. 5 ವಾಹನಗಳನ್ನ ಜಪ್ತಿ ಮಾಡಿ ಸಿರವಾರ ಠಾಣೆಯಲ್ಲಿ ಮಕ್ಕಳ ಕಳ್ಳ ಸಾಗಾಣಿಕೆ ಕಾಯ್ದೆಯಡಿ ಕೇಸ್ ದಾಖಲು ಮಾಡಲಾಗಿದೆ.

ಇನ್ನು 59 ಮಕ್ಕಳನ್ನ ಪೋಷಕರಿಗೆ ಅಧಿಕಾರಿಗಳು ಹಸ್ತಾಂತರಿಸಿದ್ದಾರೆ. ಜೊತೆಗೆಮಕ್ಕಳನ್ನ ಕೂಲಿ ಕೆಲಸಕ್ಕೆ ಕಳುಹಿಸದಂತೆ ಪೋಷಕರಿಗೆ ಎಚ್ಚರಿಕೆಯ್ನ ನೀಡಿದ್ದಾರೆ.

Source: newsfirstlive.com Source link