ಅಬ್ಬಾ! ಮೈ ನವಿರೇಳಿಸುತ್ತೆ ‘ಕನ್ನಡತಿ’ ಕಿರಣ್ ​ರಾಜ್​ರ ಈ ಡೆಡ್ಲಿ ಸ್ಟಂಟ್..!​

ಅಬ್ಬಾ! ಮೈ ನವಿರೇಳಿಸುತ್ತೆ ‘ಕನ್ನಡತಿ’ ಕಿರಣ್ ​ರಾಜ್​ರ ಈ ಡೆಡ್ಲಿ ಸ್ಟಂಟ್..!​

23 ಹಂತಸ್ತಿನ ಮಹಡಿ.. ಸುಮಾರು ಒಂದು ಸಾವಿರ ಅಡ್ಡಿ ಎತ್ತರದ ಅಪಾರ್ಟ್ ಮೆಂಟ್ ಮೇಲೆ ಕನ್ನಡತಿ ಸೀರಿಯಲ್ ಖ್ಯಾತಿಯ ನಟ ಕಿರಣ್ ರಾಜ್ ನಿಂತಿದ್ರು.. ಚೂರು ಯಾಮಾರಿದ್ರು ಡೈರೆಕ್ಟ್ ಕೈಲಾಸ.. ಆದ್ರೆ ಕಿರಣ್ ರಾಜ್ ಧೈರ್ಯ ಮೆಚ್ಚಲೇ ಬೇಕು..!

blank

ಕಿರುತೆರೆ ಲೋಕದಲ್ಲಿ ಕನ್ನಡತಿ ಧಾರಾವಾಹಿ ಮೂಲಕ ಮನೆ ಮಗನಾಗಿರೋರು ಕಿರಣ್ ರಾಜ್, ಮಾಡೆಲಿಂಗ್ ಲೋಕದಲ್ಲಿ ಹೆಜ್ಜೆ ಇಟ್ಟು ಸೀರಿಯಲ್ ಪ್ರಪಂಚ, ಸಿನಿಮಾ ಜಗತ್ತು ಎರಡರಲ್ಲೂ ಬ್ಯುಸಿ ಇರೋ ನಟ ಇವ್ರು.. ಈಗ ಕಿರಣ್ ರಾಜ್ ಒಂದು ಸಿನಿಮಾದಲ್ಲಿ ಜೀವವನ್ನೆ ಪಣಕ್ಕಿಟ್ಟು ಒಂದು ರಿಸ್ಕಿ ಆ್ಯಕ್ಷನ್ ಒಂದನ್ನ ಮಾಡಿದ್ದಾರೆ..

ಇದನ್ನೂ ಓದಿ: ಗಂಡು ಮಗುವಿಗೆ ಜನ್ಮ ನೀಡಿದ ನಟಿ ನುಸ್ರತ್​​​ ಜಹಾನ್ -‘ಮಗು ನಂದಲ್ಲ’ ಎಂದ ಹಳೇ ಗಂಡ

23 ಅಂತಸ್ತಿನ ಮಹಡಿ ಮೇಲಿಂದ ಕಿರಣ್ ರಾಜ್ ಜಂಪ್!
ಸುಮಾರು 23 ಅಂತಸ್ತಿನ ದೊಡ್ಡ ಅಪಾರ್ಟ್​​ಮೆಂಟ್​ ಅದು. ನೂರಾರು ಸಿನಿಮಾಗಳಿಗೆ ಸ್ಟಂಟ್ ಡೈರೆಕ್ಷನ್ ಮಾಡಿರೋ ಡಿಫರೆಂಟ್ ಡ್ಯಾನಿ ಸಾರಥ್ಯದಲ್ಲಿ ಮಹಡಿ ಮೇಲಿಂದ ನಟ ಕಿರಣ್ ರಾಜ್ ಬಿಳೋ ಸೀನ್ ಒಂದನ್ನ ಕಂಪೋಸ್ ಮಾಡಲಾಗುತ್ತಿತ್ತು. ಅಷ್ಟಕ್ಕೂ ಇದು ಯಾವ ಸಿನಿಮಾ ಅನ್ನೋ ಪ್ರಶ್ನೆಗೆ ಉತ್ತರ ಬಡ್ಡೀಸ್.

blank

ಕಿರಣ್ ರಾಜ್ ಕಿರುತೆರೆಯ ಸೀರಿಯಲ್ ಜೊತೆಗೆ ಸಿನಿಮಾಗಳಲ್ಲೂ ಬ್ಯುಸಿ ಇದ್ದಾರೆ. ಕಿರಣ್ ರಾಜ್ ನಟಿಸುತ್ತಿರೋ ಸಿನಿಮಾ ಬಡ್ಡೀಸ್. ರಾಮಕೃಷ್ಣ ಶೆಟ್ಟಿ, ಭರತ್ ಶೆಟ್ಟಿ ನಿರ್ಮಾಣದಲ್ಲಿ ಗುರುವೇಂದ್ರ ಶೆಟ್ಟಿ ನಿರ್ದೇಶನದಲ್ಲಿ ಬಡ್ಡೀಸ್ ಸಿನಿಮಾ ಮೂಡಿ ಬರುತ್ತಿದೆ. ಆ್ಯಕ್ಷನ್ ಸೀನ್ ಒಂದನ್ನ ಸ್ಟೆಂಟ್ ಮಾಸ್ಟರ್ ಡಿಫರೆಂಟ್ ಡ್ಯಾನಿ ಕಲ್ಪನೆಯಲ್ಲಿ ಶೂಟ್ ಮಾಡಲಾಗುತ್ತಿತ್ತು. ಬಹು ಅಂತಸ್ತಿನ ಮಹಡಿ ಮೇಲಿಂದ ಕಿರಣ್ ರಾಜ್ ಇಳಿಯೋ ದೃಶ್ಯವನ್ನ ಚಿತ್ರತಂಡ ಚಿತ್ರೀಕರಿಸಿದೆ.

blank

ಸೀರಿಯಲ್ ಲೋಕದಲ್ಲಿ ಈಗಾಗಲೇ ತನ್ನದೆಯಾದ ಛಾಪನ್ನ ಮೂಡಿಸಿರೋ ಕಿರಣ್ ರಾಜ್ ಸಿಲ್ವರ್ ಸ್ಕ್ರೀನ್​ನಲ್ಲಿ ಒಂದು ಬ್ರೇಕ್​ಗಾಗಿ ಕಷ್ಟ ಪಡುತ್ತಿದ್ದಾರೆ. ಬಹದ್ದೂರ್ ಗಂಡು ಹಾಗೂ ಬಡ್ಡೀಸ್ ಸಿನಿಮಾಗಳ ಮೂಲಕ ಸಿರಿಗನ್ನಡ ಪ್ರೇಕ್ಷಕರ ಮನ ಗೆಲ್ಲಲು ಕಿರಣ್ ರಾಜ್ ಶ್ರಮಿಸುತ್ತಿದ್ದಾರೆ..

blank

Source: newsfirstlive.com Source link