NewsfirstExclusive: ನನ್ನನ್ನ ಯಾರು ಮುಟ್ಟೋಕೆ ಆಗಲ್ಲ -ಜಗದೀಶ್​ ಶೆಟ್ಟರ್​

NewsfirstExclusive: ನನ್ನನ್ನ ಯಾರು ಮುಟ್ಟೋಕೆ ಆಗಲ್ಲ -ಜಗದೀಶ್​ ಶೆಟ್ಟರ್​

ಮಾಜಿ ಸಿಎಂ ಯಡಿಯೂರಪ್ಪ ಅವರ ಸಂಪುಟದಲ್ಲಿ ಪ್ರಬಲ ಖಾತೆ ಹೊಂದಿದ್ದ ಮಾಜಿ ಮುಖ್ಯಮಂತ್ರಿ ಜಗದೀಶ್​ ಶೆಟ್ಟರ್​ ಯಡಿಯೂರಪ್ಪ ನಿರ್ಗಮಿಸಿದಂತೆ ಬೊಮ್ಮಾಯಿ ಸಂಪುಟದಲ್ಲಿ ಖಾತೆ ಬೇಡ ಎಂದು ಸೈಲೆಂಟ್​ ಆಗಿ ಬಿಟ್ಟಿದ್ದರು. ಈ ಕುರಿತು ಅವರು ನೂತನ ಸಿಎಂ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಖಾತೆ ಅಲಂಕರಿಸದೆ ಇರುವುದು, ಇತ್ತೀಚಿನ ರಾಜಕಾರಣದ ತಲ್ಲಣಗಳ ಕುರಿತು, ನ್ಯೂಸ್​ಫಸ್ಟ್​ನ ಪೊಲಿಟಿಕಲ್ ಬ್ಯೂರೋ ಚೀಫ್ ವಿನಾಯಕ ಗಂಗೊಳ್ಳಿ ಜೊತೆ  ನಡೆಸಿದ ವಿಶೇಷ ಸಂದರ್ಶನದ ಹೈಲೈಟ್ಸ್ ಇಲ್ಲಿದೆ.

ಸಚಿವ ಸ್ಥಾನದ ತ್ಯಾಗದ ಹಿಂದೆ ಇದೆಯಾ ಬೆಲ್ಲದ್​ ದೂರ ಮಾಡುವ ತಂತ್ರ

ನನ್ನ ವೈಯಕ್ತಿಕವಾದ ಕಾರಣಗಳಿಂದ ಮಂತ್ರಿಸ್ಥಾನದ ಹಿಂದೆ ದೂರ ಸರಿದಿದ್ದೇನೆ ಹೊರತು, ಇನ್ನೊಬ್ಬರನ್ನು ಹಿಂದೆ ಸರಿಸುವ ಉದ್ದೇಶ ಇಲ್ಲ.ಅಂತಹ ಯೋಚಬೆಯೂ ನನ್ನಲಿಲ್ಲ ಎಂದಿದ್ದು, ಕ್ಷೇತ್ರದಲ್ಲಿನ ಯಾವುದೇ ತಲ್ಲಣಗಳಿಗೆ ನಾನು ಹೆದರಲ್ಲ, ಇಲ್ಲಿವರೆಗೂ ಜಗದೀಶ್​ ಶೆಟ್ಟರ್​ನ್ನು ಯಾರೂ ಕೂಡ ಮುಟ್ಟಿಲ್ಲ, ಮುಟ್ಟೋಕು ಸಾಧ್ಯವಿಲ್ಲ ಎಂದರು..

ಶಂಕರ್​ ಪಾಟೀಲ್​ ಮುನೇನಕೊಪ್ಪ ಶೆಟ್ಟರ್​ ಉತ್ತರಾಧಿಕಾರಿ?

ಹುಬ್ಬಳ್ಳಿ – ಧಾರವಾಡದಲ್ಲಿ ಸೀನಿಯಾರಿಟಿ ಲೆಕ್ಕಚಾರದಲ್ಲಿ ಇನ್ನೊಬ್ಬರು ಯಾರಾದ್ರೂ ಇದ್ದರೆ ಅದು ಮುನೇನಕೊಪ್ಪನವರು ಮಾತ್ರ.. ಜಗದೀಶ್​ ಶೆಟ್ಟರ್​ ನಂತ್ರ ಯಾರಾದ್ರೂ ಸೀನಿಯರ್​ ಇದ್ದರೆ ಅದು ಶಂಕರ್​ ಪಾಟೀಲ್​ ಅವರೆ. ಅವರು ಎರಡು ಬಾರಿ ಚುನಾಯಿತರಾಗಿದ್ದಾರೆ, ಮಹಾದಾಯಿ ಹೋರಾಟದಲ್ಲಿ ಸಕ್ರೀಯರಾಗಿದ್ದಾರೆ ಅವರ ಕೆಪ್ಯಾಸಿಟಿಗೆ ಮಂತ್ರಿ ಸ್ಥಾನ ದಕ್ಕಿದೆ. ಎಂದು ಹೇಳುವ ಮೂಲಕ ಮುಂದಿನ ತಮ್ಮ ಉತ್ತರಾಧಿಕಾರಿ ಶಂಕರ್​ ಪಾಟೀಲ್​​ ಮುನೇನಕೊಪ್ಪನವರೇ ಎಂದು ಪರೋಕ್ಷ ಸುಳಿವು ನೀಡಿದ್ದಾರೆ..

ಇದನ್ನೂ ಓದಿ: ಮೈಸೂರು ಮೇಯರ್ ಚುನಾವಣೆ; ಕೈ ಸೇರ್ತೀನಿ ಎಂದ ಜಿಟಿಡಿಗೆ ಟಾಂಗ್ ಕೊಟ್ಟ ದಳಪತಿಗಳು

ಬೊಮ್ಮಾಯಿಯವರಿಗೆ ಆರ್​ಎಸ್​ಎಸ್​ ಧ್ವಜ ವಂದನೆ ಗೊತ್ತಾ?

ಸಿಎಂ ಬೊಮ್ಮಾಯಿಯವರಿಗೆ ಆರ್​ಎಸ್​ಎಸ್​ ಧ್ವಜ ವಂದನೆ ಗೊತ್ತಾ ಎಂಬ ಬಸನಗೌಡ ಪಾಟೀಲ್​ ಯತ್ನಾಳ್​ ಹೇಳಿಕೆ ಕುರಿತು ಮಾತನಾಡಿದ ಅವರು, ಯತ್ನಾಳ್​ ಹೇಳಿಕೆಗೆ ಮಾನ್ಯ ಮುಖ್ಯಮಂತ್ರಿಗಳೇ ಉತ್ತರ ಕೊಡಬೇಕು, ಸಿಎಂಗೆ ಕೇಳಿದ ಪ್ರಶ್ನೆಗೆ ಜಗದೀಶ್​ ಶೆಟ್ಟರ್​ ಉತ್ತರ ಕೊಡಲು ಹೇಗೆ ಸಾಧ್ಯ ಎಂದು ಜಾರಿಕೊಂಡಿದ್ದಾರೆ.. ಇನ್ನು ದೇಶದಲ್ಲಿ ಆರ್​ಎಸ್​ಎಸ್​ ಕಳೆದ 50 ವರ್ಷಗಳಿಂದ ದೇಶಕ್ಕಾಗಿ ನಿಸ್ವಾರ್ಥ ಭಾವದಿಂದ ಕೆಲಸ ಮಾಡುತ್ತಿದ್ದಾರೆ, ಅವರು ಎಂದು ಅಧಿಕಾರಕ್ಕಾಗಿ ಬಡಿದಾಡಿದವರಲ್ಲ. ಅವರು ಈಡೀ ದೇಶಕ್ಕೆ ತ್ಯಾಗ ಮಾಡಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.

Source: newsfirstlive.com Source link