‘ಯೆಲ್ಲೋ ಬೋರ್ಡ್​’ನಿಂದ ಹೊರ ಬಂತು ಮತ್ತೊಂದು ಮೆಲೋಡಿಯಸ್​ ಸಾಂಗ್​

‘ಯೆಲ್ಲೋ ಬೋರ್ಡ್​’ನಿಂದ ಹೊರ ಬಂತು ಮತ್ತೊಂದು ಮೆಲೋಡಿಯಸ್​ ಸಾಂಗ್​

ಕಿಚ್ಚ ಸುದೀಪ್ ಅವರ ಸ್ನೇಹ ಬಳಗದ ಪ್ರಮುಖ ಪ್ರತಿಭಾವಂತ ಸದಸ್ಯರಲ್ಲೊಬ್ಬರು ಪ್ರದೀಪ್.. ಟೈಗರ್ ಸಿನಿಮಾದ ನಂತರ ನೈಜ ಘಟನೆಯ ಕಥೆಯ ‘ಯೆಲ್ಲೋ ಬೋರ್ಡ್’ಸಿನಿಮಾದ ಮೂಲಕ ಪ್ರೇಕ್ಷಕರನ್ನ ಸೆಳೆಯಲು ಬರುತ್ತಿದ್ದಾರೆ.. ಈಗಾಗಲೇ ಟೀಸರ್ ಮತ್ತು ಸಾಂಗ್​ನಿಂದ ಗಮನ ಸೇಳೆದಿದ್ದ ‘ಯೆಲ್ಲೋ ಬೋರ್ಡ್’ ಟೀಮ್ ಈ ಬಾರಿ ರೊಮ್ಯಾಟಿಕ್ ಗೀತೆಯಿಂದ ಚಿತ್ರಪ್ರೇಮಿಗಳನ್ನ ಇಂಪ್ರೇಸ್ ಮಾಡುತ್ತಿದೆ..

ಓಲಾ , ಉಬರ್ ಹೆಸರಿನಲ್ಲಿ ನಾಡಿನ ಸಾವಿರಾರು ಯುವಕರು ಸ್ವಂತ ಕಾರು ಖರೀದಿ ಮಾಡಿ ಕಷ್ಟ ಪಟ್ಟು ದುಡಿಯುತ್ತಿದ್ದಾರೆ.. ಅವರಲ್ಲೇ ನಾನಾ ರೀತಿಯ ಮನಮುಟ್ಟು ಕಥೆ ಕವನಗಳಿವೆ.. ಈ ವಿಚಾರವನ್ನ ಅರೆತಿರುವ ಯುವ ನಟ ಪ್ರದೀಪ್ ‘ಯೆಲ್ಲೋ ಬೋರ್ಡ್’ ಕಾರ್ ಏರಿದ್ದಾರೆ.. ಅರ್ತಾಥ್ ‘ಯೆಲ್ಲೋ ಬೋರ್ಡ್’ ಸಿನಿಮಾದ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.

blank

ಇದನ್ನೂ ಓದಿ: ಶಿವಪೂಜೆಯೊಂದಿಗೆ ಕನಸಿನ ಮನೆಗೆ ಕಾಲಿಟ್ಟ ಸ್ವರಾ ಭಾಸ್ಕರ್​; ಹೊಸ ಅವತಾರಕ್ಕೆ ಎಲ್ಲಾ ಶಾಕ್..!

ಪ್ರದೀಪ್.. ಜಾಲಿಡೇಡ್, ಟೈಗರ್ ಸಿನಿಮಾಗಳ ಮೂಲಕ ಸುದೀಪ್ ಅವರ ಜೊತೆ ಕ್ರಿಕೆಟ್ ಆಡುವುದ್ರ ಮೂಲಕ ಕನ್ನಡಿಗರಿಗೆ ಪರಿಚಯವಾದವರು.. ಟೈಗರ್ ಸಿನಿಮಾದ ಮಿಂಚಿದ್ದ ಪ್ರದಿ ಈ ಬಾರಿ ‘ಯೆಲ್ಲೋ ಬೋರ್ಡ್’ ಕ್ಯಾಬ್ ಏರಿದ್ದಾರೆ.. ಯೆಲ್ಲೋ ಬೋರ್ಡ್.. ಬೆಂಗಳೂರಿನ ಕ್ಯಾಬ್ ಡ್ರೈವರ್ ಕಥೆ.. ಬೆಂಗಳೂರಿನ ರಸ್ತೆಯಲ್ಲಿ ಅತಿ ಹೆಚ್ಚು ಕಾಣಿಸುವ ಕ್ಯಾಬ್ ಚಾಲಕರ ಬಗ್ಗೆ ಮಾಡಿರುವ ಸಿನಿಮಾ ಇದು.. ಆಗೊಂದು ಇಗೊಂದು ಹಾಡುಗಳಿಂದ ಪ್ರೇಕ್ಷಕರನ್ನ ಸೆಳೆದಿತ್ತು ಯೆಲ್ಲೋ ಬೋರ್ಡ್ ಟೀಮ್.. ಈಗ ಮೆಲೋಡಿ ಹಾಡೊಂದನ್ನ ಹೊರ ಬಿಟ್ಟಿದೆ.

blank

ಪ್ರದೀಪ್​ಗೆ ಜೋಡಿಯಾಗಿ ಅಹಲ್ಯಾ ಸುರೇಶ್ ಯೆಲ್ಲೋ ಬೋರ್ಡ್ನಲ್ಲಿ ಕಂಗೊಳಿಸಿದ್ದಾರೆ.. ಅದ್ವಿಕ್ ಸಂಗೀತ ಸಂಯೋಜನೆಯ ವಿಶ್ವಜೀತ್ ರಾವ್ ಸಾಹಿತ್ಯದ ಸೋನು ನಿಗಮ್ ಗಾಯನದ ಹಾಡೊಂದನ್ನ ಹೊರ ಬಿಟ್ಟಿದೆ ಯೆಲ್ಲೋ ಬೋರ್ಡ್ ಫಿಲ್ಮ್ ಟೀಮ್..
ವಿನ್ ಟೇಜ್ ಬ್ಯಾನರ್ ನಡಿ ಯುವ ನಿರ್ದೇಶಕ ತ್ರಿಲೋಕ್ ರೆಡ್ಡಿ ಕಲ್ಪನೆಯಲ್ಲಿ ಈ ನ್ಯಾಚುರಲ್ ಮೂವಿ ಮೂಡಿಬಂದಿದೆ.. ಹಾಡುಗಳ ಮೂಲಕ ಗಮನ ಸೇಳೆಯುತ್ತಿರುವ ಯೆಲ್ಲೋ ಬೋರ್ಡ್ ಅತಿ ಶೀಘ್ರದಲ್ಲೇ ಪ್ರೇಕ್ಷಕರ ಮುಂದೆ ಬಂದು ನಿಲ್ಲಲಿದೆ..

ಇದನ್ನೂ ಓದಿ: ನುಸ್ರತ್​ ಜಹಾನ್​ ಬೇಬಿ ಬಂಪ್​ ಫೋಟೋ ವೈರಲ್​; ಇನ್ನಾದ್ರೂ ಬಹಿರಂಗ ಪಡಿಸ್ತಾರಾ ಸೀಕ್ರೆಟ್​​.?

Source: newsfirstlive.com Source link