ಬಲ ಇಲ್ಲದ ತನಿಖಾ ಸಂಸ್ಥೆಗಳು -ಸರ್ಕಾರಕ್ಕೆ ಹಿರಿಯ ಅಧಿಕಾರಿಗಳ ಸಲಹೆ ಏನು..?

ಬಲ ಇಲ್ಲದ ತನಿಖಾ ಸಂಸ್ಥೆಗಳು -ಸರ್ಕಾರಕ್ಕೆ ಹಿರಿಯ ಅಧಿಕಾರಿಗಳ ಸಲಹೆ ಏನು..?

ಬೆಂಗಳೂರು: ರಾಜ್ಯದಲ್ಲಿರುವ ಮೂರು ತನಿಖಾ ತಂಡಗಳು ಬಲವನ್ನ ಕಳೆದುಕೊಂಡಿದ್ದು, ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ. ಹೀಗಾಗಿ ಮೂರು ತನಿಖಾ ತಂಡಗಳಾದ ಐಎಸ್​ಡಿ (Internal Security Division), ಐಬಿ (Intelligence Bureau) ಹಾಗೂ SWAT (Special Weapons and Tactics) ಸಂಸ್ಥೆಗಳನ್ನ ಬಲಪಡಿಸಬೇಕು ಅನ್ನೋ ಒತ್ತಾಯಗಳು ಕೇಳಿಬಂದಿವೆ. ಈ ಮೂರು ತಿನಿಖಾ ಸಂಸ್ಥೆಗಳು ನಾಮಕಾವಸ್ತೆಗಷ್ಟೇ ಇವೆ, ಆದರೆ ಯಾವುದೇ ಮೂಲ ಸೌಕರ್ಯಗಳಿಲ್ಲ.

ಏನ್ ಸಮಸ್ಯೆ..?
ಹೀಗಾಗಿ ರಾಜ್ಯದಲ್ಲಿ ಅಕ್ರಮ ಚಟುವಟಿಕೆಗಳು ನಡೆಸೋರಿಗೆ ವರದಾನವಾಗಿದೆ ಅನ್ನೋ ಮಾತುಗಳು ಕೇಳಿಬಂದಿವೆ. ರಾಜ್ಯದಲ್ಲಿ 2016-21ರವರೆಗೆ NIA 15 ಕೇಸ್ ದಾಖಲಿಸಿದೆ. ಅದರಲ್ಲಿ 31 ಆರೋಪಿಗಳ ಹೆಡೆಮುರಿಕಟ್ಟಿದೆ. 15 ಪ್ರತ್ಯೇಕ ಪ್ರಕರಣದ ಆರೋಪಿಗಳನ್ನ ಜೈಲಿಗೆ ಕಳಿಸುವಲ್ಲಿ ಯಶಸ್ವಿಯಾಗಿದೆ. 305 ಆರೋಪಿಗಳ ವಿರುದ್ಧ ಆರೋಪ ಸಾಬೀತು ಪಡಿಸಿದೆ. ಈ ಮೂಲಕ ಕರ್ನಾಟಕ ಸ್ಲೀಪರ್ ಸೆಲ್ ಎಂಬುದು ಮತ್ತೆ ಸಾಬೀತಾಗಿದೆ‌.

ಆದರೆ ಉಗ್ರರ ವಿರುದ್ಧ ರಾಜ್ಯದ ತನಿಖಾ ಸಂಸ್ಥೆಗಳು ಅಷ್ಟೊಂದು ಸ್ಟ್ರಾಂಗ್ ಆಗಿಲ್ಲ. ಹೀಗಾಗಿ ಪ್ರತ್ಯೇಕ ತನಿಖಾ ಸಂಸ್ಥೆಯನ್ನ ಸ್ಥಾಪಿಸಿ ಅದಕ್ಕೆ NIA ಮಾದರಿಯಲ್ಲಿ ಟ್ರೈನಿಂಗ್ ನೀಡಬೇಕು ಅಂತಾ ಹಿರಿಯ ಅಧಿಕಾರಿಗಳು ಸರ್ಕಾರಕ್ಕೆ ಒತ್ತಾಯಿಸುತ್ತಿದ್ದಾರೆ.

ಮಾಹಿತಿಗಷ್ಟೇ ಸೀಮಿತ
ರಾಜ್ಯದ ಪಡೆಗಳು ಮತ್ತು ಅದಕ್ಕಿರುವ ಸವಾಲುಗಳನ್ನ ನೋಡೋದಾದ್ರೆ, ಸದ್ಯ ರಾಜ್ಯದಲ್ಲಿ ಮೂರು ಪಡೆಗಳಿವೆ. ಐಎಸ್ಡಿ, ಐಬಿ, ಸ್ವ್ಯಾಟ್ ಎಂಬ ಮೂರು ಪಡೆಗಳಿವೆ. ಇವು ಗೌಪ್ಯ ಮಾಹಿತಿ ಸಂಗ್ರಹಕ್ಕಷ್ಟೇ ಸೀಮಿತವಾಗಿವೆ. ಪೂರ್ಣ ಪ್ರಮಾಣದ ತನಿಖಾ ಬಲವಿಲ್ಲ, ಸೌಕರ್ಯ ಇಲ್ಲ. ಸ್ವತಂತ್ರವಾಗಿ ತನಿಖೆ ನಡೆಸಲು ಸಾಧ್ಯವಾಗ್ತಿಲ್ಲ. ಎರಡ್ಮೂರು ಪಡೆಗಳ ಬದಲು, ಒಂದೇ ಪಡೆ ಸ್ಥಾಪಿಸಿ ಎಲ್ಲವನ್ನ ವಿಲೀನ ಮಾಡಬೇಕು. ಐಎಸ್ಎಡಿ ಘಟಕಕ್ಕೆ ಬಲ ನೀಡಿ ಸೌಕರ್ಯ ನೀಡಬೇಕು. ಹೈದರಾಬಾದ್ ಮುಂಬೈನಂತೆ ಎಟಿಎಸ್ ಕಮಾಂಡೋ ತರಬೇತಿ ನೀಡಬೇಕು. ಕಂಪ್ಯೂಟರ್, ಸ್ಯಾಟಲೈಟ್ ಬಳಕೆಯ ತರಬೇತಿ ನೀಡಬೇಕು.

ಮಹಾರಾಷ್ಟ್ರ, ಗುಜರಾತ್, ಆಂಧ್ರಪ್ರದೇಶದಂತೆ ಸಂಪೂರ್ಣ ಸಾಮರ್ಥ್ಯವುಳ್ಳ ಭ್ರಷ್ಟಾಚಾರ ನಿಗ್ರಹ ದಳ ರಾಜ್ಯಕ್ಕೆ ಬೇಕಿದೆ. ಹಿರಿಯ ಅಧಿಕಾರಿಗಳ ಪ್ರಕಾರ ಮಹಾರಾಷ್ಟ್ರ ಎಟಿಎಸ್ ಬಲವಾಗಿದೆ. ದೇಶದಲ್ಲಿರುವ ಎಲ್ಲಾ ಉಗ್ರರ ಗುಂಪುಗಳ ಮಾಹಿತಿ ಕಲೆಹಾಕಿದೆ. ಅವರ ಆ್ಯಕ್ಟಿವಿಟೀಸ್​ಗಳನ್ನ ನಿರಂತರವಾಗಿ ಅಧ್ಯಯನ ಮಾಡ್ತಿದೆ. ಇದೇ ರೀತಿ ರಾಜ್ಯದಲ್ಲೂ ಸಕ್ರಿಯ ಪಡೆಬೇಕು.

ಸೂಕ್ಷ್ಮ ಪ್ರದೇಶಗಳಿಗಷ್ಟೇ ಸೀಮಿತ
ಬೆಂಗಳೂರಿಗಾಗಿ ಸ್ವ್ಯಾಟ್ ಟೀಂ ರಚನೆಯಾಗಿದೆ. ಬೆಂಗಳೂರು ಭದ್ರತೆಗಾಗಿ, ನಕ್ಸಲ್, ಬಯೋತ್ಪಾದನೆ ಚಟುವಟಿಕೆಗಾಗಿ ಇದು ರಚನೆಯಾಗಿದೆ. ಮೊದಲ ಹಂತದಲ್ಲಿ ಸಿಎಆರ್ ಘಟಕಗಳಿಂದ 8 ಆರ್​ಎಸ್​ಐ ಮತ್ತು 120 ಸಿಬ್ಬಂದಿ ಆಯ್ಕೆ ಮಾಡಲಾಗಿತ್ತು. ನಾಲ್ಕು ತಂಡಗಳಾಗಿ ರಚಿಸಿ, ಆಧುನಿಕ ಸಲಕರಣೆ ನೀಡಿ ಸನ್ನದ್ಧಗೊಳಿಸಿತ್ತು. ಆದ್ರೆ ಈ ಪಡೆ ಕೇವಲ ಸೂಕ್ಷ್ಮ ಪ್ರದೇಶಗಳಲ್ಲಿ ಮಾರ್ಕ್ ಡ್ರಿಲ್ ಮಾಡೋಕಷ್ಟೆ ಸೀಮಿತವಾಗಿದೆ. ಇನ್ಯಾವುದೇ ರೀತಿಯಲ್ಲಿ ಇದಕ್ಕೆ ತನಿಖಾ ಬಲ ನೀಡಿಲ್ಲ.

Source: newsfirstlive.com Source link