ಕಾಬೂಲ್ ಏರ್​ಪೋರ್ಟ್ ಬಳಿ ಭಾರೀ ಸ್ಫೋಟ; ಸಾವು ನೋವಿನ ಆತಂಕ

ಕಾಬೂಲ್ ಏರ್​ಪೋರ್ಟ್ ಬಳಿ ಭಾರೀ ಸ್ಫೋಟ; ಸಾವು ನೋವಿನ ಆತಂಕ

ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್​ ಏರ್​ಪೋರ್ಟ್​ ಬಳಿ ಭಾರೀ ಸ್ಫೋಟ ಸಂಭವಿಸಿದೆ. ಸ್ಫೋಟದಲ್ಲಿ ಸಾವು, ನೋವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.

ಇನ್ನು ಸ್ಫೋಟ ಸಂಭವಿಸಿರುವ ಬಗ್ಗೆ ಪೆಂಟಗಾನ್ ವಕ್ತಾರ ಜಾನ್ ಕಿರ್ಬೆ ಅವರು ಅಧಿಕೃತ ಮಾಹಿತಿ ನೀಡಿದ್ದಾರೆ. ಕಾಬೂಲ್ ಏರ್​ಪೋರ್ಟ್​ನಲ್ಲಿ ಸ್ಫೋಟ ಸಂಭವಿಸಿರುವ ಬಗ್ಗೆ ನಾವು ಅಧಿಕೃತಗೊಳಿಸುತ್ತಿದ್ದೇವೆ. ಸಾವು ನೋವಿನ ಬಗ್ಗೆ ನಿಖರ ಮಾಹಿತಿ ಇಲ್ಲ. ಹೆಚ್ಚುವರಿ ಮಾಹಿತಿಯನ್ನ ಶೀಘ್ರದಲ್ಲಿಯೇ ನೀಡಲಾಗುವುದು ಅಂತಾ ತಿಳಿಸಿದ್ದಾರೆ.

ಸ್ಫೋಟಕ್ಕೂ ಮುನ್ನ ಕಾಬೂಲ್​ನಿಂದ ಇಟಲಿ ಮಿಲಿಟರಿ ಪಡೆ ತನ್ನ ನಾಗರಿಕರನ್ನ ಕರೆದುಕೊಂಡು ಹೊರಟಿತ್ತು. ಈ ವೇಳೆ ತಾಲಿಬಾನಿ ಉಗ್ರರು ಪ್ಲೇನ್ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ ಅಂತಾ ವರದಿಯಾಗಿತ್ತು. ಅದೃಷ್ಟವಶಾತ್ ವಿಮಾನಕ್ಕೆ ಯಾವುದೇ ಹಾನಿ ಆಗಿರಲಿಲ್ಲ.

ಇದನ್ನೂ ಓದಿ:BREAKING ಕಾಬೂಲ್​​ನಿಂದ ಹೊರಟಿದ್ದ ಇಟಲಿ ಮಿಲಿಟರಿ ವಿಮಾನದ ಮೇಲೆ ಫೈರಿಂಗ್..!

Source: newsfirstlive.com Source link