ಫೈಟರ್ ಸಾವು ಕೇಸ್​​​; ನಟ ಅಜಯ್ ರಾವ್​ಗೆ ಸಿಕ್ತು ನಿರೀಕ್ಷಣಾ ಜಾಮೀನು

ಫೈಟರ್ ಸಾವು ಕೇಸ್​​​; ನಟ ಅಜಯ್ ರಾವ್​ಗೆ ಸಿಕ್ತು ನಿರೀಕ್ಷಣಾ ಜಾಮೀನು

ರಾಮನಗರ: ಲವ್ ಯೂ ರಚ್ಚು ಚಿತ್ರೀಕರಣದ ದುರಂತ ಪ್ರಕರಣದಲ್ಲಿ 6 ಜನರಿಗೆ ರಾಮನಗರ ಜಿಲ್ಲಾ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ರ್ದೇಶಕ ಶಂಕರ್, ಕ್ರೇನ್ ಆಪರೇಟರ್ ಮಹದೇವ್, ಸಾಹಸ ನಿರ್ದೇಶಕ ವಿನೋದ್ ಕುಮಾರ್​​ಗೆ ಜಾಮೀನು ಮಂಜೂರಾಗಿದೆ. ನಟ ಅಜಯ್ ರಾವ್, ಪ್ರೊಡಕ್ಷನ್ ಮ್ಯಾನೇಜರ್ ಫರ್ನಾಂಡೀಸ್, ನಿರ್ಮಾಪಕ ಗುರುದೇಶಪಾಂಡೆಗೆ ನಿರೀಕ್ಷಣಾ ಜಾಮೀನು ಸಿಕ್ಕಿದೆ.

ಇದನ್ನೂ ಓದಿ: ‘ಲವ್​​ ಯು ರಚ್ಚು’ ಫೈಟರ್ ಸಾವು ಕೇಸ್: ಪೊಲೀಸ್ ವಿಚಾರಣೆಗೆ ಬಂದ ಅಜಯ್ ರಾವ್

ರಾಮನಗರ ಅಧಿಕ ಮತ್ತು ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ಸಿದ್ದಲಿಂಗ ಪ್ರಭು ಅವರು ಜಾಮೀನು ನೀಡಿ ಆದೇಶ ಹೊರಡಿಸಿದ್ದಾರೆ. ಇನ್ನು ಪ್ರಕರಣ ಸಂಬಂಧ ವಿನೋದ್ ಕುಮಾರ್, ಶಂಕರ್, ಮಹದೇವ್ ರಾಮನಗರ ಜಿಲ್ಲಾ ಕಾರಾಗೃಹದಲ್ಲಿದ್ದರು. ಇವರು ಇಂದು ಅಥವಾ ನಾಳೆ ಬಿಡುಗಡೆಯಾಗುವ ಸಾಧ್ಯತೆ ಇದೆ.

ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿದ್ದ ನಟ ಅಜಯ್ ರಾವ್ ಅವರು ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಇನ್ನು ನಿರ್ಮಾಪಕ ಗುರುದೇಶಪಾಂಡೆ, ಪ್ರೊಡೆಕ್ಷನ್ ಮ್ಯಾನೇಜರ್ ಫರ್ನಾಂಡಿಸ್ ನಾಪತ್ತೆಯಾಗಿದ್ದಾರೆ. ಇವರೆಲ್ಲಾ ಬಂಧನದ ಭೀತಿ ಎದುರಿಸುತ್ತಿದ್ದ ಇವರೆಲ್ಲಾ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಇದನ್ನೂ ಓದಿ:ನಿರೂಪಕ ಅಕುಲ್ ಬಾಲಾಜಿಗೆ ‘ಪುನರ್ವಿವಾಹ’ದ ಯೋಗ..!

Source: newsfirstlive.com Source link