ಕಾಬೂಲ್​ನಲ್ಲಿ ಮತ್ತೊಂದು ಸ್ಫೋಟದ ಎಚ್ಚರಿಕೆ! ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಪ್ರಯಾಣಿಕರಿಗೆ ಎಚ್ಚರಿಕೆ

ಕಾಬೂಲ್​ನಲ್ಲಿ ಮತ್ತೊಂದು ಸ್ಫೋಟದ ಎಚ್ಚರಿಕೆ! ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಪ್ರಯಾಣಿಕರಿಗೆ ಎಚ್ಚರಿಕೆ

ಕಾಬೂಲ್​ ಏರ್​ಪೋರ್ಟ್​​ ಗೇಟ್​​ನಲ್ಲಿ ಸಂಭವಿಸಿದ ಸ್ಫೋಟದಲ್ಲಿ ಅಮೆರಿಕ ಸೇನೆ 3 ಸಿಬ್ಬಂದಿ ಗಾಯಗೊಂಡಿದ್ದಾರೆ ಅಂತಾ ವರದಿಯಾಗಿದೆ. ಜೊತೆಗೆ ಇನ್ನೂ ಹಲವಾರು ಮಂದಿ ಗಾಯಗೊಂಡಿದ್ದು, ಅವರನೆಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಮತ್ತೊಂದು ಆತಂಕದ ವಿಚಾರ ಏನಂದರೆ ಕಾಬೂಲ್ ಏರ್​ಪೋರ್ಟ್​ನಲ್ಲಿ ಮತ್ತೊಂದು ಸ್ಫೋಟ ಸಂಭವಿಸುವ ಎಚ್ಚರಿಕೆ ಸಿಕ್ಕಿದೆ. ಕೂಡಲೇ ಕಾಬೂಲ್​ ಏರ್​ಪೋರ್ಟ್​ ಬಳಿಯಿರುವ ಎಲ್ಲಾ ನಾಗರೀಕರೂ ಈ ಕೂಡಲೇ ಅಲ್ಲಿಂದ ಸುರಕ್ಷಿತ ಸ್ಥಳಕ್ಕೆ ಹೋಗಬೇಕು ಅಂತಾ ಎಚ್ಚರಿಸಲಾಗಿದೆ ಅಂತಾ ವರದಿಯಾಗಿದೆ.

ಇನ್ನು ಸ್ಫೋಟ ಸಂಭವಿಸಿರುವ ಬಗ್ಗೆ ಪೆಂಟಗಾನ್ ವಕ್ತಾರ ಜಾನ್ ಕಿರ್ಬೆ ಅವರು ಅಧಿಕೃತ ಮಾಹಿತಿ ನೀಡಿದ್ದಾರೆ. ಕಾಬೂಲ್ ಏರ್​ಪೋರ್ಟ್​ನಲ್ಲಿ ಸ್ಫೋಟ ಸಂಭವಿಸಿರುವ ಬಗ್ಗೆ ನಾವು ಅಧಿಕೃತಗೊಳಿಸುತ್ತಿದ್ದೇವೆ. ಸಾವು ನೋವಿನ ಬಗ್ಗೆ ನಿಖರ ಮಾಹಿತಿ ಇಲ್ಲ. ಹೆಚ್ಚುವರಿ ಮಾಹಿತಿಯನ್ನ ಶೀಘ್ರದಲ್ಲಿಯೇ ನೀಡಲಾಗುವುದು ಅಂತಾ ತಿಳಿಸಿದ್ದಾರೆ.

ಇದನ್ನೂ ಒದಿ: ಕಾಬೂಲ್ ಏರ್​ಪೋರ್ಟ್ ಬಳಿ ಭಾರೀ ಸ್ಫೋಟ; ಸಾವು ನೋವಿನ ಆತಂಕ

Source: newsfirstlive.com Source link