ಕಾಬೂಲ್ ಏರ್​ಪೋರ್ಟ್​ನಲ್ಲಿ ಸ್ಫೋಟ; 13 ಮಂದಿ ದುರ್ಮರಣ

ಕಾಬೂಲ್ ಏರ್​ಪೋರ್ಟ್​ನಲ್ಲಿ ಸ್ಫೋಟ; 13 ಮಂದಿ ದುರ್ಮರಣ

ಕಾಬೂಲ್​ ಏರ್​ಪೋರ್ಟ್​ನಲ್ಲಿ ಸಂಭವಿಸಿದ ಸ್ಫೋಟದಲ್ಲಿ 13 ಮಂದಿ ಸಾವನ್ನಪ್ಪಿದ್ದಾರೆ ಎಂದು ತಾಲಿಬಾನ್ ಸಂಘಟನೆ ತಿಳಿಸಿದೆ.

ತಾಲಿಬಾನ್ ನೀಡಿರುವ ಅಧಿಕೃತ ಮಾಹಿತಿ ಪ್ರಕಾರ ಒಟ್ಟು 13 ಮಂದಿ ಸ್ಫೋಟದಲ್ಲಿ ಸಾವನ್ನಪ್ಪಿದ್ದಾರೆ. ಸಾವನ್ನಪ್ಪಿದವರಲ್ಲಿ ಮಕ್ಕಳೂ ಕೂಡ ಸೇರಿದ್ದಾರೆ. ಅಲ್ಲದೇ ಸ್ಫೋಟದಲ್ಲಿ ತಾಲಿಬಾನ್ ಸೇನೆಯ ಹಲವು ಮಂದಿ ಕೂಡ ಗಾಯಗೊಂಡಿದ್ದಾರೆ ಅಂತಾ ತಾಲಿಬಾನ್ ಹೇಳಿಕೊಂಡಿದೆ.

ಕಾಬೂಲ್ ಏರ್​ಪೋರ್ಟ್​ ಗೇಟ್ ಬಳಿ ಸ್ಫೋಟ ಸಂಭವಿಸಿದೆ.

 

Source: newsfirstlive.com Source link