ಏಳು ವರ್ಷದ ಪ್ರೇಮ ವೈಫಲ್ಯ.. ಹತಾಶ ಪ್ರೇಮಿಯಿಂದ ಪ್ರೇಯಸಿಯ ಕಗ್ಗೊಲೆ ಶಂಕೆ

ಏಳು ವರ್ಷದ ಪ್ರೇಮ ವೈಫಲ್ಯ.. ಹತಾಶ ಪ್ರೇಮಿಯಿಂದ ಪ್ರೇಯಸಿಯ ಕಗ್ಗೊಲೆ ಶಂಕೆ

ಶಿವಮೊಗ್ಗ: ನಂಜಪ್ಪ ಲೈಫ್ ಕೇರ್​ನ ನರ್ಸಿಂಗ್ ವಿದ್ಯಾರ್ಥಿನಿ ಕವಿತಾ ನಾಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಕವಿತಾ (21) ರಿಪ್ಪನ್ ಪೇಟೆ ಸಮೀಪದ ಬಾಳೆಕೊಡ್ಲು ಕಾಡಿನ‌ ಪರಿಸರದಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಈ ಹಿಂದೆ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಾಗಿತ್ತು. ಇದು ವ್ಯವಸ್ಥಿತ ಕೊಲೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಅಸಲಿಗೆ ಪ್ರಿಯಕರನೇ ಇಲ್ಲಿ ಕೊಲೆ ಮಾಡಿ ಪ್ರತೀಕಾರ ತೀರಿಸಿಕೊಂಡಿರುವ ಬಗ್ಗೆ ಶಂಕೆ ವ್ಯಕ್ತವಾಗುತ್ತಿದೆ.

ಘಟನೆ ಹಿನ್ನೆಲೆ:
ಭಟ್ಕಳ ಸಾಗರ ಗಡಿಭಾಗದ ಬಾನುಕುಳಿ ಗ್ರಾಮದ ಸಮೀಪದ ಕವಿತಾ ಹಾಗೂ ರಿಪ್ಪನ್ ಪೇಟೆ ಸನಿಹದ ತಳಲೆ ಗ್ರಾಮದ ಶಿವಮೂರ್ತಿ ಕಳೆದ ಏಳು ವರ್ಷದಿಂದ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಬಿಎಸ್​ಸಿ ನರ್ಸಿಂಗ್ ಓದಲು ಕವಿತಾ ಶಿವಮೊಗ್ಗದ ನಂಜಪ್ಪ ಲೈಫ್ ಕೇರ್​ಗೆ ಸೇರಿದ್ದಳು. ಇತ್ತೀಚೆಗೆ ಶಿವು ಜೊತೆ ಕವಿತ ಅಂತರ ಕಾಪಾಡಿಕೊಂಡಿದ್ದಳು. ಕವಿತಾ ನಡೆ ಶಿವುಗೆ ಹಲವು ಅನುಮಾನ ಹುಟ್ಟಿ ಹಾಕಿತ್ತು. ಕವಿತಾ ಭದ್ರಾವತಿ ನಗರದ ಬೇರೊಬ್ಬ ಯುವಕನನ್ನು ಪ್ರೀತಿಸುತ್ತಿದ್ದಳು. ನನ್ನನ್ನು ಏಳು ವರ್ಷ ಲವ್ ಮಾಡಿ ಬೇರೊಬ್ಬ ಯುವಕನನ್ನು ಕವಿತಾ ಪ್ರೀತಿಸುತ್ತಿದ್ದಕ್ಕೆ ಶಿವು ಕುಪಿತನಾಗಿದ್ದ ಎನ್ನಲಾಗಿದೆ.

ಮೊನ್ನೆ ನಂಜಪ್ಪ ಲೈಫ್ ಕೇರ್ ಹಾಸ್ಟೆಲ್ ನಿಂದ ಪುಸಲಾಯಿಸಿ ಕವಿತಾಳನ್ನು ಕರೆದುಕೊಂಡು ರಿಪ್ಪನ್ ಪೇಟೆಯ ಬಾಳೆಕೊಡ್ಲು ಕಾಡಿನ ಪರಿಸರಕ್ಕೆ ಕರೆದೊಯ್ದು ಕೊಲೆ ಮಾಡಿದ್ದಾನೆ ಅಂತಾ ಹೇಳಲಾಗಿದೆ. ಇತ್ತ, ಹಾಸ್ಟೆಲ್​ನಿಂದ ಹೋದ ಕವಿತಾ ರಾತ್ರಿಯಾದರೂ ವಾಪಸ್ಸಾಗದಿರುವುದಕ್ಕೆ ನರ್ಸಿಂಗ್ ಕಾಲೇಜಿನ ಮ್ಯಾನೆಜ್ ಮೆಂಟ್ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿತ್ತು. ವಿಪರ್ಯಾಸವೆಂದರೆ ಇಂದು ಕೊಳೆಯುವ ಸ್ಥಿತಿಯಲ್ಲಿ ಕವಿತಾ ಶವ ಪತ್ತೆಯಾಗಿದೆ.

ಘಟನೆ ಬೆಳಕಿಗೆ ಬರುತ್ತಿದ್ದಂತೆ ಇತ್ತ ಶಿವು, ತಾನು ಡೆತ್ ನೋಟ್ ಬರೆದಿಟ್ಟು, ವಿಷ ಸೇವಿಸಿದ್ದಾನೆ. ಆರೋಪಿ ಶಿವು ಗೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಡೆತ್ ನೋಟ್​ನಲ್ಲಿ ಕವಿತಾ ಬೇರೊಬ್ವ ಯುವಕನನ್ನು ಪ್ರೀತಿಸುತ್ತಿದ್ದಳು ಎಂಬುದನ್ನು ಶಿವು ಬರೆದಿದ್ದಾನೆ. ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Source: newsfirstlive.com Source link