ಯಶ್​ ವಾಟ್​ ನೆಕ್ಸ್ಟ್​ ಪ್ರಶ್ನೆಗೆ ಉತ್ತರ ಕೊಡ್ತಾರಾ ಟಿಟೌನ್​ ಸ್ಟಾರ್​ ಡೈರೆಕ್ಟರ್​?

ಯಶ್​ ವಾಟ್​ ನೆಕ್ಸ್ಟ್​ ಪ್ರಶ್ನೆಗೆ ಉತ್ತರ ಕೊಡ್ತಾರಾ ಟಿಟೌನ್​ ಸ್ಟಾರ್​ ಡೈರೆಕ್ಟರ್​?

ರಾಕಿಂಗ್ ಸ್ಟಾರ್ ಯಶ್.. ಬಾಕ್ಸ್​ ಆಫೀಸ್​ಗೆ ರಾಕಿ ಭಾಯ್.. ಈ ಹೆಸರನ್ನ ಕನ್ನಡದವರಿಂದ ಹಿಡಿದು ಅಕ್ಕಪಕ್ಕದವರು ಕನವರಿಸುತ್ತಿದ್ದಾರೆ..  ಸಿನಿಮಾ ಮಾಡಿದ್ರೆ ಈ ಹೀರೋಗೊಂದು ಸಿನಿಮಾ ಮಾಡಬೇಕು ಅನ್ಕೊಂಡು ಕಥೆಯನ್ನ ಎಷ್ಟೋ ಡೈರೆಕ್ಟರ್ ತೆರೆ ಮರೆಯಲ್ಲೆ ಕಥೆಯನ್ನ ಬರೆಯುತ್ತಿದ್ದಾರೆ.. ಆದ್ರೆ ಟಾಲಿವುಡ್ ಆ ಒಬ್ಬ ಡೈರೆಕ್ಟರ್ ಯಶ್​ಗಾಗಿ ಒಂದು ಕಥೆ ಬರೆದು ಒಂದ್ಲೈನ್ ಹೇಳಿ ಮೆಚ್ಚುಗೆ ಪಡೆದುಕೊಂಡು ಬಿಟ್ಟಿದ್ದಾರಂತೆ.

ಸಿನಿಮಾ ರಂಗ ಅನ್ನೋದೆ ಹಂಗೆ ಕಂಡ್ರಿ.. ಗೆಲ್ಲೋ ಕುದುರೆಯ ಹಿಂದೆ ಓಡೋರೆ ಹೆಚ್ಚು.. ಈಗ ಕೆಜಿಎಫ್ ಕಿಂಗ್ ರಾಕಿ ಭಾಯ್ ಯಶ್ ಎಂದರೆ ಎಲ್ಲರಿಗೂ ಅಚ್ಚು ಮೆಚ್ಚು.. ಟಾಲಿವುಡ್ ಸ್ಟಾರ್ ನಿರ್ದೇಶಕರೊಬ್ಬರು ರಾಕಿಂಗ್ ಸ್ಟಾರ್ ಯಶ್ ಹಿಂದೆ ಬಿದ್ದಿದ್ದಾರೆ.. ಯಶ್​ಗೆ ಒಂದು ಕಥೆ ಮಾಡ್ಕೋಂಡು ಇದ್ನ ಮಾಡಿದ್ರೇ ಯಶ್ಗೆ ಮಾಡಬೇಕು ಅನ್ಕೊಂಡು ಒಂದೆಳೆ ಕಥೆಯನ್ನ ರಾಕಿ ಭಾಯ್ಗೆ ಹೇಳಿ ಇಂಪ್ರೇಸ್ ಮಾಡಿದ್ದಾರೆ..

blank

ಟಾಲಿವುಡ್ ಡೈರೆಕ್ಟರ್ ಕಥೆಗೆ ಮಾರು ಹೋದ್ರಾ ಯಶ್..?
ತೆಲುಗು ನಿರ್ದೇಶಕ ಕಥೆ ಮೆಚ್ಚಿ ಕಾಲ್ ಶೀಟ್ ಕೊಡ್ತಾರಾ..?

ಒಂದು ಹಿಟ್ ಸಿನಿಮಾ , ಒಂದು ದೊಡ್ಡ ಮಹತ್ವಾಕಾಂಕ್ಷೆಯ ದೂರ ದೃಷ್ಟಿ ಎಷ್ಟರ ಮಟ್ಟಿಗೆ ಒಬ್ಬ ವ್ಯಕ್ತಿಯನ್ನ ತಂದು ನಿಲ್ಲಿಸುತ್ತೆ ನೋಡಿ.. ತಾನು ಬೆಳೆದು ಸ್ಟಾರ್ ಆಗಬೇಕು , ತನ್ನ ಜೊತೆ ತನ್ನ ಕನ್ನಡ ಸಿನಿ ರಂಗವೂ ದೇಶಿಯ ಮಟ್ಟದಲ್ಲಿ ದರ್ಬಾರ್ ಮಾಡಬೇಕು ಅನ್ನೋ ಮಹಾದಾಸೆಯಿಂದ ಬೆಂಗಳೂರಿನ ಮೆಜೆಸ್ಟಿಕ್​ಗೆ ಬಂದಿಳಿದು ಗಾಂಧಿನಗರಕ್ಕೆ ನಡೆದುಕೊಂಡು ಬಂದವರು ರಾಕಿಂಗ್ ಸ್ಟಾರ್ ಯಶ್.. ನಾನೊಂದಿನ ಗಾಂಧಿನಗರದಲ್ಲಿ ಕಟೌಟ್ ಆಗಬೇಕು ಅಂದುಕೊಂಡವರು ಇವತ್ತು ಆಲ್ ಇಂಡಿಯಾ ಕಟೌಟ್ ಆಗಿದ್ದಾರೆ .. ಕೆಜಿಎಫ್ ಅನ್ನೋ ಬಂಗಾರದ ಬೆಳ್ಳಿ ಸಿನಿಮಾವನ್ನ ಕಳೆದ 5ವರ್ಷದಿಂದ ಶ್ರಮ ಶ್ರದ್ಧೆ ತಪಸಿನಿಂದ ಮಾಡಿ ಈಗ ಕೆಜಿಎಫ್ ಎರಡನೇ ಅಧ್ಯಾಯದ ಅಂತ್ಯದಲ್ಲಿ ಬಂದು ನಿಂತಿದ್ದಾರೆ..

ಯಶ್ ವಾಟ್ ನೆಕ್ಸ್ಟ್ ಅಂತ ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲ ಇಡೀ ಇಂಡಿಯಾದಲ್ಲೇ ಸದ್ದಿಲ್ಲದೆ ಚರ್ಚೆಯಾಗುತ್ತಿದೆ.. ಯಶ್ ಮುಂದಿನ ಹೆಜ್ಜೆಯನ್ನ ದೊಡ್ಡ ನಿರ್ಮಾಪಕರಿಂದ ಹಿಡಿದು ಸ್ಟಾರ್ ಡೈರೆಕ್ಟರ್ಸ್ ತನಕ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.. ಯಶ್, ನಿರ್ದೇಶಕ ನರ್ತನ್ ಜೊತೆಗೆ ಸಿನಿಮಾ ಮಾಡ್ತಾರೆ ಅನ್ನೊ ಸುದ್ದಿ ಇದ್ದರು. ಇನ್ನು ಕೂಡ ಟ್ರ್ಯಾಕ್ಗೆ ಬಂದಿಲ್ಲ.. ಈ ಗ್ಯಾಪ್ನಲ್ಲಿ ಬೇರೆ ಮುಂದಿನ ವರ್ಷಕ್ಕೆ ಕೆಜಿಎಫ್ ಚಾಪ್ಟರ್ 2 ರಿಲೀಸ್ ಎಂದು ಫಿಕ್ಸ್ ಆಗಿದೆ.. ಇನ್ನೂ ಎಂಟು ತಿಂಗಳ ಗ್ಯಾಪ್ನಲ್ಲಿ ಏನ್ ಮಾಡ್ತಾರೆ..? ಇದು ಕೂಡ ನಿಗೂಢ.. ತೆಲುಗಿನ ಆ ಡೈರೆಕ್ಟರ್ ಮಾತ್ರ ಯಶ್​ಗಾಗಿ ಕಥೆ ಬರೆದು ಒಂದು ಲೈನ್ ಕೂಡ ಹೇಳಿ ಮೆಚ್ಚಿಸಿದ್ದಾರೆ.. ಹಾಗಾದ್ರೆ ಯಾರವರು ಅನ್ನೋ ಪ್ರಶ್ನೆಗೆ ಉತ್ತರ ಬೋಯಪಾಟಿ ಶ್ರೀನು..

blank

ಯಶ್ ಮೇಲೆ ಕಣ್ಣಿಟ್ಟಿರೋ ಬೊಯಪಾಟಿ ಶ್ರೀನು..!
ಕಥೆ ಬರೆದು ಕಾದಿದ್ದಾರೆ ಟಿಟೌನ್ ಸ್ಟಾರ್ ಡೈರೆಕ್ಟರ್..!

ಯಶ್ ಹಿಂದೆ ಟಾಲಿವುಡ್ನ ಸ್ಟಾರ್ ಡೈರೆಕ್ಟರ್ಗಳಲ್ಲೊಬ್ಬರಾದ ಬೊಯಪಾಟಿ ಶ್ರೀನು ಬಿದ್ದಿದ್ದಾರೆ.. ಯಶ್ಗೊಂದು ಪ್ಯಾನ್ ಇಂಡಿಯ ಸಿನಿಮಾ ಮಾಡಬೇಕು ಎಂದು ಕೊಂಡಿದ್ದಾರೆ ಅನ್ನೋ ಸಮಾಚಾರವನ್ನ ನಾವೇ ನಿಮಗೆ ಒಂದು ತಿಂಗಳ ಹಿಂದೆ ಹೇಳಿದ್ವಿ.. ಈಗ ಅದರ ಮುಂದುವರೆದ ಭಾಗ.. ಯಶ್ ಗಾಗಿ ಒಂದು ಕಥೆ ಮಾಡಿ ಒಂದು ಲೈನ್ ಹೇಳಿ ಇಂಪ್ರೇಸ್ ಮಾಡಿದ್ದಾರಂತೆ ಬೊಯಪಾಟಿ ಶ್ರೀನು.. ಯಶ್ಗಾಗಿ ಒಂದು ಕಥೆಯನ್ನ ಬೊಯಪಾಟಿ ಮಾಡಿದ್ರಲ್ಲೊಂದು ಟ್ವಿಸ್ಟ್ ಆಂಡ್ ಟರ್ನ್ ಇದೆ.. ಅದೇನಪ್ಪ ಅಂದ್ರೆ ಜೂನಿಯರ್ ಮೆಗಾಸ್ಟಾರ್ ರಾಮ್ ಚರಣ್ ಗಾಗಿ ಮಾಡಿದ್ದ ಕಥೆಯನ್ನ ಯಶ್ಗಾಗಿ ಮಾಡಲು ಹೊರಟ್ಟಿದಾರೆ ಲೆಜೆಂಡ್ ಖ್ಯಾತಿಯ ನಿರ್ದೇಶಕ ಬೊಯಪಾಟಿ ಶ್ರೀನು..

ಯಶ್ ಪಾಲಿಗೆ ರಾಮ್ ಚರಣ್ ರಿಜೆಕ್ಟ್ ಮಾಡಿದ್ದ ಸ್ಟೋರಿ..!
ರಾಮ್ ಚರಣ್ ಜೊತೆಗೆ ನಿರ್ದೇಶಕ ಬೊಯಪಾಟಿ ಶ್ರೀನು ಒಂದು ಮಾಡಲು ಹೋದಾಗ ಒಂದು ಕಥೆಯನ್ನ ಹೇಳ್ತಾರೆ.. ಆ ಕಥೆ ಕೇಳಿದ ಮಗಧೀರ ಹೀರೋ ತುಂಬಾ ಕಮರ್ಶಿಯಲ್ ಕಥೆ ಇದು, ಬೇಡ ಬೇರೆ ಕಥೆ ಇದ್ರೆ ಹೇಳಿ ಅಂದ್ರು.. ಆಗ ಅಗಿದ್ದೇ ವಿನಯ ವಿಧೇಯ ರಾಮ ಸಿನಿಮಾ.. ಆದ್ರೇನ್ ಮಾಡೋದು ರಾಮ್ ಚರಣ್ ಗೆಸು ಟುಸ್ ಆಯ್ತು , ವಿನಯ ವಿಧೇಯ ರಾಮ ಸಿನಿಮಾ ಪ್ಲಾಫ್ ಆಯ್ತು.. ಈಗ ರಾಮ್ ಚರಣ್ ಒಲ್ಲೆ ಎಂದ ಕಥೆಯನ್ನ ಯಶ್ಗೆ ಹೇಳಿ ಒಪ್ಪಿಸಿದ್ದಾರೆ ಬೊಯಪಾಟಿ ಶ್ರೀನು ಎನ್ನುತ್ತಿದೆ ಟಾಲಿವುಡ್ ಮಯಾ ನಗರಿ..
ಆಲ್ ಮೋಸ್ಟ್ ಆಲ್ ಕೆಜಿಎಫ್ ಚಾಪ್ಟರ್ 2 ಸಿನಿಮಾದ ಕೆಲಸ ಕಾರ್ಯಗಳನ್ನ ಯಶ್ ಮುಗಿಸಿದ್ದಾರೆ.. ಚಾಪ್ಟರ್ 2 ರಿಲೀಸ್ ಆಗಲು ಇನ್ನೂ 8 ತಿಂಗಳು ಬಾಕಿ ಇದೆ.. ಈ ಗ್ಯಾಪ್ನಲ್ಲಿ ಯಶ್ ಯಾವುದಾದ್ರೊಂದು ಸಿನಿಮಾ ಒಪ್ಪಿಕೊಳ್ಳಲೇ ಬೇಕು.. ಆದ್ರೆ ಯಶ್ ಅವರ ನಡೆ ಯಾವ ಕಡೆ ಅನ್ನೋದು ನಿಗೂಢ.

Source: newsfirstlive.com Source link