ಏರ್​ಪೋರ್ಟ್​​ ಬೆನ್ನಲ್ಲೇ ಕಾಬೂಲ್​​ನ ಹೋಟೆಲ್​​ನಲ್ಲಿ ಮತ್ತೊಂದು ಸ್ಫೋಟ

ಏರ್​ಪೋರ್ಟ್​​ ಬೆನ್ನಲ್ಲೇ ಕಾಬೂಲ್​​ನ ಹೋಟೆಲ್​​ನಲ್ಲಿ ಮತ್ತೊಂದು ಸ್ಫೋಟ

ಕಾಬೂಲ್​​ನಲ್ಲಿ ಸರಣಿ ಸ್ಫೋಟಗಳು ನಡೆಯುತ್ತಿದ್ದು, ಏರ್​ಪೋರ್ಟ್​ ಗೇಟ್​​ನಲ್ಲಿ ಸಂಭವಿಸಿದ ಸ್ಫೋಟ ಬೆನ್ನಲ್ಲೇ ಹೋಟೆಲ್​​ನಲ್ಲಿ ಮತ್ತೊಂದು ದುಷ್ಕೃತ್ಯ ನಡೆದಿದೆ.

ಇದನ್ನೂ ಓದಿ: ಕಾಬೂಲ್ ಏರ್​ಪೋರ್ಟ್​ನಲ್ಲಿ ಸ್ಫೋಟ; 13 ಮಂದಿ ದುರ್ಮರಣ

ಏರ್​ಪೋರ್ಟ್​ಗೆ ಹತ್ತಿರದಲ್ಲಿರುವ ಹೋಟೆಲ್ ಒಂದರಲ್ಲಿ ಸ್ಫೋಟ ಸಂಭವಿಸಿದೆ. ಆತ್ಮಾಹುತಿ ದಾಳಿಕೋರರು ವಿದ್ವಂಸಕ ಕೃತ್ಯ ನಡೆಸುತ್ತಿದ್ದಾರೆ ಅಂತಾ ಅಮೆರಿಕ ಅಧಿಕಾರಿಗಳು ಹೇಳಿವೆ. ಏರ್​ಪೋರ್ಟ್​ ಗೇಟ್ ಬಳಿ ಸಂಭವಿಸಿದ ಸ್ಫೋಟದಲ್ಲಿ 13 ಮಂದಿ ಸಾವನ್ನಪ್ಪಿದ್ದಾರೆ ಅಂತಾ ತಾಲಿಬಾನಿಗಳು ಘೋಷಣೆ ಮಾಡಿವೆ.

ಇದನ್ನೂ ಓದಿ: ಕಾಬೂಲ್ ಏರ್​ಪೋರ್ಟ್ ಬಳಿ ಭಾರೀ ಸ್ಫೋಟ; ಸಾವು ನೋವಿನ ಆತಂಕ

ಆದರೆ ಎರಡನೇ ಸ್ಫೋಟದ ಅನಾಹುತದ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಆದರೆ ಸ್ಫೋಟದ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ಇದನ್ನೂ ಓದಿ: ಕಾಬೂಲ್​ನಲ್ಲಿ ಮತ್ತೊಂದು ಸ್ಫೋಟದ ಎಚ್ಚರಿಕೆ! ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಪ್ರಯಾಣಿಕರಿಗೆ ಎಚ್ಚರಿಕೆ

 

Source: newsfirstlive.com Source link