ಕಾಬೂಲ್ ವಿಮಾನ ನಿಲ್ದಾಣದಲ್ಲಿ ಬಾಂಬ್ ಸ್ಫೋಟ – 11 ಮಂದಿ ಸಾವು

ಕಾಬೂಲ್: ಅಫ್ಘಾನಿಸ್ತಾನದಲ್ಲಿ ಒಂದು ಕಡೆ ತಾಲಿಬಾನಿಗಳ ಹಿಂಸೆ ನಡುವೆ, ಕಾಬೂಲ್ ವಿಮಾನ ನಿಲ್ದಾಣದ ಪ್ರವೇಶದ್ವಾರವೊಂದರಲ್ಲಿ ಆತ್ಮಾಹುತಿ ದಾಳಿ ಸಂಭವಿಸಿದೆ.

ಪ್ರಾಥಮಿಕ ವರದಿಗಳ ಪ್ರಕಾರ 11 ಮಂದಿ ಮೃತಪಟ್ಟಿದ್ದಾರೆ. ಸಾವು, ನೋವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.ತಾಲಿಬಾನಿ ಉಗ್ರರು ದಾಳಿ ನಡೆಸಲು ಸಂಚು ರೂಪಿಸಿದ್ದಾರೆ ಎಂದು ಬ್ರಿಟನ್ ಎಚ್ಚರಿಕೆ ನೀಡಿತ್ತು. ಅಮೆರಿಕ ಕೂಡ ಕಾಬೂಲ್ ಏರ್‍ಪೋರ್ಟ್‍ನಿಂದ ದೂರ ಇರುವಂತೆ ಎಚ್ಚರಿಸಿತ್ತು. ಈ ಬೆನ್ನಲ್ಲೇ ಆತ್ಮಾಹುತಿ ದಾಳಿ ನಡೆದಿದೆ.  ಇದನ್ನೂ ಓದಿ :ಜರ್ಮನಿಯಲ್ಲಿ ಪಿಜ್ಜಾ ಡೆಲಿವರಿ ಬಾಯ್ ಆದ ಅಫ್ಘಾನ್ ಮಾಜಿ ಸಚಿವ! 

ಯಾರೂ ದೇಶಬಿಟ್ಟು ಹೋಗಬೇಡಿ. ಮುಂದಿನ ದಿನಗಳಲ್ಲಿ ನಮ್ಮ ಸರ್ಕಾರ ರಚನೆಯಾಗಲಿದೆ ಎಂದು ತಾಲಿಬಾನಿಗಳು ಆಫ್ಘನ್ ಪ್ರಜೆಗಳಿಗೆ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಕಾಬೂಲ್‍ನಲ್ಲಿ 3 ಸಾವಿರ ರೂ.ಗೆ ಒಂದು ಬಾಟೆಲ್ ನೀರು, ಪ್ಲೇಟ್ ರೈಸ್‍ಗೆ 7,500 ರೂ.

ಸಾವಿರಾರು ಜನರು ವಿದೇಶಕ್ಕೆ ತೆರಳಲು ಕಾಬೂಲ್ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಾರೆ. ಭಾರೀ ಸಂಖ್ಯೆಯಲ್ಲಿ ಜನ ಸೇರುತ್ತಿರುವ ಹಿನ್ನೆಲೆಯಲ್ಲಿ ಭಯ ಹುಟ್ಟಿಸಲು ಉಗ್ರರು ಈ ಬಾಂಬ್ ದಾಳಿ ನಡೆಸಿದ್ದಾರೆ.

ಕಾಬೂಲ್ ವಿಮಾನ ನಿಲ್ದಾಣದಲ್ಲಿ ಬಾಂಬ್ ದಾಳಿ ಆಗಿರುವುದನ್ನು ಅಮೆರಿಕ ದೃಢಪಡಿಸಿದೆ. ಈ ಸಮಯದಲ್ಲಿ ಎಷ್ಟು ಮಂದಿ ಸಾವನ್ನಪ್ಪಿದ್ದಾರೆ ಎನ್ನುವುದು ತಿಳಿದು ಬಂದಿಲ್ಲ ಎಂದು ಪೆಂಟಗನ್ ತಿಳಿಸಿದೆ.

Source: publictv.in Source link