ರಾಯಚೂರು ಸಹಾಯಕ ಆಯುಕ್ತರ ಕಚೇರಿ ಸಿಬ್ಬಂದಿ ನಿಗೂಢ ನಾಪತ್ತೆ

ರಾಯಚೂರು ಸಹಾಯಕ ಆಯುಕ್ತರ ಕಚೇರಿ ಸಿಬ್ಬಂದಿ ನಿಗೂಢ ನಾಪತ್ತೆ

ರಾಯಚೂರು: ಜಿಲ್ಲೆಯಲ್ಲಿ ಸಹಾಯಕ ಆಯುಕ್ತರ ಕಚೇರಿ ಪ್ರಥಮ ದರ್ಜೆ ಸಹಾಯಕನ ನಿಗೂಢ ನಾಪತ್ತೆ ಪ್ರಕರಣವೊಂದು ಬೆಳಕಿಗೆ ಬಂದಿದೆ.

ಪ್ರಥಮ ದರ್ಜೆ ಸಹಾಯಕ ಪ್ರಕಾಶ್ ಬಾಬು (42) ನಾಪತ್ತೆಯಾದ ಸಿಬ್ಬಂದಿ. ಇದೇ ಆಗಸ್ಟ್​ 23ರಂದು ಕಚೇರಿಗೆ ಬಂದಿದ್ದ ಪ್ರಕಾಶ್ ಬಾಬು, ಕಚೇರಿಗೆ ಬಂದು ಮನೆಗೆ ಹಿಂದಿರುಗದೆ ಏಕಾಏಕಿ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.

ಮನೆಯಿಂದ ತಂದಿದ್ದ ಬುಲೆಟ್ ಬೈಕ್, ಹಾಗೂ ಕಚೇರಿಯ ಕೀಗಳನ್ನ ಬಿಟ್ಟು ನಾಪತ್ತೆಯಾಗಿರುವುದಾಗಿ, ಮಾಹಿತಿ ಲಭ್ಯವಾಗಿದೆ. ಕಚೇರಿಯಿಂದ ಹೊರಡುವಾಗ ಕ್ಯಾರಿ ಬ್ಯಾಗ್ ತೆಗೆದುಕೊಂಡು ಹೋಗಿರುವುದಾಗಿ ಮಾಹಿತಿ ಲಭ್ಯವಾಗಿದೆ. ನಾಪತ್ತೆ ಹಿನ್ನೆಲೆ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆತಂಕಕ್ಕೊಳಗಾದ ಪ್ರಕಾಶ್ ಬಾಬು ಪತ್ನಿ ಅಂಬಿಕಾ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ: ರಾಯಚೂರಲ್ಲಿ 59 ಬಾಲ ಕಾರ್ಮಿಕರ ರಕ್ಷಣೆ; ಮಕ್ಕಳ ಕಳ್ಳ ಸಾಗಾಣಿಕೆ ಕಾಯ್ದೆಯಡಿ ಕೇಸ್

ನಾಪತ್ತೆಯಾಗಿ ಮೂರು ದಿನ ಕಳೆದರೂ ಪ್ರಕಾಶ್ ಬಾಬು ಸುಳಿವು ಸಿಕ್ಕಿಲ್ಲ. ಹೀಗಾಗಿ ಪ್ರಕರಣ ದಾಖಲಿಸಿಕೊಂಡಿರುವ ಪಶ್ಚಿಮ ಠಾಣೆಯ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಗಾಬರಿಗೊಂಡ ಕುಟುಂಬಸ್ಥರು ಎಸಿ ಕಚೇರಿ ಮುಂದೆ ಬೀಡುಬಿಟ್ಟಿದ್ದಾರೆ.

Source: newsfirstlive.com Source link