ಎರಡು ತಿಂಗಳ ಹಿಂದಷ್ಟೇ ಮದುವೆ.. ವರದಕ್ಷಿಣೆಗಾಗಿ ಪತಿಯಿಂದಲೇ ಪತ್ನಿಯ ಹತ್ಯೆ

ಎರಡು ತಿಂಗಳ ಹಿಂದಷ್ಟೇ ಮದುವೆ.. ವರದಕ್ಷಿಣೆಗಾಗಿ ಪತಿಯಿಂದಲೇ ಪತ್ನಿಯ ಹತ್ಯೆ

ಧಾರವಾಡ: ವರದಕ್ಷಿಣೆ ಕಿರುಕುಳ ಆರೊಪದ ಮೇಲೆ ಪತಿಯಿಂದಲೇ ಪತ್ನಿ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಈ ಘಟನೆ ಹುಬ್ಬಳ್ಳಿಯಲ್ಲಿ ರಾಘವೇಂದ್ರ ಕಾಲೋನಿಯಲ್ಲಿ ನಡೆದಿದೆ.

ಮಂಜುಳಾ ಗಂಜಿಗಟ್ಟಿ (30) ಮೃತ ದುರ್ದೈವಿ. ವರದಕ್ಷಿಣೆ ಕಿರುಕುಳ ನೀಡಿ ಪತಿಯಿಂದಲೇ ಪತ್ನಿ ಹತ್ಯೆ ಮಾಡಿರುವ ಆರೋಪ ಕೇಳಿ ಬಂದಿದೆ. ಪತಿ ಕರಿಬಸಪ್ಪ ಹಾಗೂ ಕುಂಬದವರಿಂದ ತಮ್ಮ ಮಗಳನ್ನು ವರದಕ್ಷಿಣೆ ನೀಡುವಂತೆ ಕಿರುಕುಳ ನೀಡಿ ಹತ್ಯೆ ಮಾಡಿದ್ದಾರೆ ಎಂದು ಮೃತಳ ಹೆತ್ತವರಿಂದ ಆರೋಪ ಕೇಳಿ ಬಂದಿದೆ. ಎರಡು ತಿಂಗಳ ಹಿಂದಷ್ಟೇ ಮದುವೆಯಾಗಿತ್ತು ಎಂಬ ಮಾಹಿತಿ ನ್ಯೂಸ್​ಫಸ್ಟ್​ಗೆ ಲಭ್ಯವಾಗಿದೆ.

ಇದನ್ನೂ ಓದಿ:  ಏಳು ವರ್ಷದ ಪ್ರೇಮ ವೈಫಲ್ಯ.. ಹತಾಶ ಪ್ರೇಮಿಯಿಂದ ಪ್ರೇಯಸಿಯ ಕಗ್ಗೊಲೆ ಶಂಕೆ

Source: newsfirstlive.com Source link