ಕೋಟಿಗೊಬ್ಬನ ಜನ್ಮದಿನ ಚಂದನವನಕ್ಕೆ ಆಗುತ್ತಾ ಸುದಿನ..? ಸ್ಪೆಷಲ್ ರಿಪೋರ್ಟ್

ಕೋಟಿಗೊಬ್ಬನ ಜನ್ಮದಿನ ಚಂದನವನಕ್ಕೆ ಆಗುತ್ತಾ ಸುದಿನ..? ಸ್ಪೆಷಲ್ ರಿಪೋರ್ಟ್

ಒಂದೊಂದು ದಿನ ಒಬ್ಬಬರಿಗೆ ವಿಶೇಷ.. ಸೆಪ್ಟೆಂಬರ್ 2ನೇ ತಾರೀಕು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಗೂ ವಿಶೇಷ, ಅವರ ಅಭಿಮಾನಿಗಳಿಗೂ ವಿಶೇಷ.. ಆದ್ರೆ ಈ ಬಾರಿ ಕಿಚ್ಚನ ಜನ್ಮದಿನ ಸ್ಯಾಂಡಲ್ವುಡ್ ಆಗುತ್ತಾ ವಿಶೇಷ ಸುದಿನ ಅನ್ನೋ ಪ್ರಶ್ನೆಗಳು ಉದ್ಭವಿಸಿವೆ. ಹಿಂಗ್ಯಾಕೆ ಪ್ರಶ್ನೆ ಉದ್ಭವ ಆಗಿದೆ.

ಈಗಾಗಲೇ ಕಿಚ್ಚ ಸುದೀಪ್ ಅವರ ಅಭಿಮಾನಿ ವೃಂದದಲ್ಲಿ ದಿನಗಳ ಎಣಿಕೆ ಶುರುವಾಗಿದೆ. ‘‘ನಮ್ಮಣ್ಣ’’ ಜನ್ಮದಿನವನ್ನ ಹಬ್ಬದ ರೀತಿ ಆಚರಿಸೋ ಜೊತೆಗೆ ಅರ್ಥಪೂರ್ಣವಾಗಿ ಆಚರಿಸ ಬೇಕು ಅನ್ನೋ ಯೋಚನೆ ಯೋಜನೆಯಲ್ಲಿದ್ದಾರೆ ಆಲ್ ಇಂಡಿಯನ್ ಸುದೀಪ್ ಫ್ಯಾನ್ಸ್.. ಈ ಬಾರಿ ಸುದೀಪ್ ಅವರ 49ನೇ ಬರ್ತ್​ಡೇ ಸಲುವಾಗಿ ಕಿಚ್ಚ ಸುದೀಪ ಚಾರಿಟೇಬಲ್ ಸೊಸೈಟಿಯವರು ಅನೇಕ ಅರ್ಥಪೂರ್ಣ ಕಾರ್ಯಕ್ರಮಗಳನ್ನ ಹಮ್ಮಿಕೊಂಡಿದೆ. ಅವುಗಳು ಯಾವುವು ಅನ್ನೋದನ್ನ ಈ ಹಿಂದೆಯೇ ನಾವು ಹೇಳಿದ್ದಿವಿ. ಸೆಪ್ಟೆಂಬರ್ 2ನೇ ತಾರೀಕು ರಾಜ್ಯದ 30 ಜಿಲ್ಲೆಗಳಲ್ಲಿ ರಕ್ತದಾನ ಶಿಬಿರವನ್ನ ಹಮ್ಮಿಕೊಂಡಿದೆ ಕಿಚ್ಚ ಸುದೀಪ್ ಅಭಿಮಾನಿ ಬಳಗ..

blank

ಇನ್ನು ಸುದೀಪ್ ಅವರ ಬರ್ತ್ಡೇ ದಿನ ಸುದೀಪ್ ಅಭಿನಯ ಹೊಸ ಸಿನಿಮಾಗಳ ಘೋಷಣೆ ಆಗೋ ಸಾಧ್ಯತೆ ತುಂಬಾನೇ ಇದೆ.. ಜೋಗಿ ಪ್ರೇಮ್, ಹೆಬ್ಬುಲಿ ಕೃಷ್ಣ ಹಾಗೂ ತಮಿಳಿನ ವೆಂಕಟ್ ಪ್ರಭು ನಿರ್ದೇಶನದ ಯಾವುದಾದ್ರೊಂದು ಸಿನಿಮಾದಲ್ಲಿ ಸುದೀಪ್ ಹೆಸರು ಕಂಡ್ರು ಕಾಣಬಹುದು.. ಇದೆಲ್ಲ ಓಕೆ.. ಸುದೀಪ್ ಹುಟ್ಟಿದ ದಿನ ಸ್ಯಾಂಡಲ್ವುಡ್ಗೆ ಏನು ಆಗುತ್ತೆ ಲಾಭ.. ಸುದೀಪ್ ದಿನ ಕನ್ನಡ ಚಿತ್ರರಂಗಕ್ಕೆ ಸುದಿನ ಹೆಂಗ್ ಆಗುತ್ತೆ?

ಕಿಚ್ಚನ ಜನ್ಮದಿನ ಸ್ಯಾಂಡಲ್ವುಡ್ಗೆ ಆಗುತ್ತಾ ಸುದಿನ..?
ಕಿಚ್ಚನ ಬರ್ತ್ಡೇಗೆ ಕನ್ನಡ ಚಿತ್ರರಂಗಕ್ಕೆ ಸಿಗುತ್ತಾ ಗಿಫ್ಟ್..?

ಯೆಸ್.. ಕಿಚ್ಚನ ಜನ್ಮದಿನ ಸ್ಯಾಂಡಲ್ವುಡ್ಗೆ ಆಗುತ್ತಾ ಸುದಿನ? ಅನ್ನೋ ಪ್ರಶ್ನೆಗೆ ಸದ್ಯಕ್ಕೆ ಸಿನಿಮಾ ಪಂಡಿತರದಲ್ಲಿ ಮೂಡಲಾರಂಭಿಸಿದೆ.. ಸ್ಯಾಂಡಲ್ವುಡ್ಗೆ ಕಿಚ್ಚನ ಬರ್ತ್ಡೆ ದಿನ ಹೆಂಗೆ ಸುದಿನ ಅಥವಾ ಗಿಫ್ಟ್ ಸಿಗುತ್ತೆ ಅನ್ನೋ ವಿಚಾರಕ್ಕೆ ಒಂದು ಸೂಕ್ಷ್ಮ ದೂರ ದೃಷ್ಟಿ ಇದೆ.. ಸದ್ಯ ಚಿತ್ರರಂಗ ಚೇತರಿಕೆಯ ನಿರೀಕ್ಷೆಯಲ್ಲಿದೆ.. ಶೂಟಿಂಗಳೆಲ್ಲ ಶುರುವಾಗಿದ್ದರು ಸಿನಿಮಾ ಪ್ರದರ್ಶನಗಳು ಇನ್ನೂ ಕೂಡ ಪೂರ್ಣ ಪ್ರಮಾಣದಲ್ಲಿ ಶುರುವಾಗಿಲ್ಲ.. ಶೇಖಡ 50ರಷ್ಟು  ಸೀಟು ಭರ್ತಿಗೆ ಮಾತ್ರ ಅವಕಾಶ ಇರೋದ್ರಿಂದ ಚಿತ್ರಮಂದಿರಗಳು ನಷ್ಟದಲ್ಲಿ  ನಡೆಯುತ್ತಿವೆ.. ಬಿಡುಗಡೆಗೆ ಸಿದ್ಧವಿರೋ ಅನೇಕ ಸ್ಟಾರ್ಸ್ ಸಿನಿಮಾಗಳು ನೂರ ರಷ್ಟು ಸೀಟು ಭರ್ತಿಯ ಆದೇಶವನ್ನ ಎದುರು ನೋಡ್ತಿವೆ..

ನೂತನ ಮುಖ್ಯಮಂತ್ರಿಗಳಾಗಿರೋ ಬಸವರಾಜ ಬೊಮ್ಮಾಯಿ ಅವರು ಚಿತ್ರರಂಗದ ಕೋರಿಕೆಯನ್ನ ಸ್ವೀಕರಿಸಿದ್ದು ಸೆಪ್ಟೆಂಬರ್ 2ನೇ ತಾರೀಖ್ನಿಂದ 100 ಪರ್ಸೆಂಟ್ ಸೀಟು ಭರ್ತಿಗೆ ಅವಕಾಶ ಕಲ್ಪಿಸೋ ಸಾಧ್ಯತೆ ಇದೆ.. ಒಂದು ವೇಳೆ ರಾಜ್ಯ ಸರ್ಕಾರ ಸೆಪ್ಟೆಂಬರ್ 2ನೇ ತಾರೀಖ್ನಿಂದಲೇ ಪೂರ್ಣ ಪ್ರಾಮಾಣದ ಚಿತ್ರಮಂದಿಗಳು ಪ್ರೇಕ್ಷಕರನ್ನ ತುಂಬಿಸೋ ಅವಕಾಶ ಕೊಟ್ರೇ ನಿಜಕ್ಕೂ ಕಿಚ್ಚ ಜನ್ಮ ದಿನ ಸ್ಯಾಂಡಲ್ವುಡ್ಗೆ ಸುದಿನ.. ಕಿಚ್ಚನ ಬರ್ತಡೇಯೂ ಸಂಭ್ರಮದಿಂದ ಆಗ್ಲಿ , ಚಿತ್ರರಂಗಕ್ಕೂ ಸಂಭ್ರಮ ಸಡಗರದ ದಿನಗಳು ಬರ್ಲಿ ಅನ್ನೋದು ಚಿತ್ರಪ್ರೇಮಿಗಳ ಆಶಯ..

ಇದನ್ನೂ ಓದಿ: ಫೈಟರ್ ಸಾವು ಕೇಸ್​​​; ನಟ ಅಜಯ್ ರಾವ್​ಗೆ ಸಿಕ್ತು ನಿರೀಕ್ಷಣಾ ಜಾಮೀನು

Source: newsfirstlive.com Source link