ಕಾಬೂಲ್ ಬ್ಲಾಸ್ಟ್​ನಲ್ಲಿ ಅಮೆರಿಕನ್ನರ ಸಾವು; ಈಗ್ಲಾದರೂ ಎಚ್ಚರಗೊಳ್ಳುತ್ತಾರಾ ಅಮೆರಿಕ ಅಧ್ಯಕ್ಷ..?

ಕಾಬೂಲ್ ಬ್ಲಾಸ್ಟ್​ನಲ್ಲಿ ಅಮೆರಿಕನ್ನರ ಸಾವು; ಈಗ್ಲಾದರೂ ಎಚ್ಚರಗೊಳ್ಳುತ್ತಾರಾ ಅಮೆರಿಕ ಅಧ್ಯಕ್ಷ..?

ಅಫ್ಘಾನಿಸ್ತಾನದಲ್ಲಿ ಹರಿಯುತ್ತಿರುವ ರಕ್ತ ಚರಿತ್ರೆಗೆ ಅಮೆರಿಕವೇ ನೇರ ಕಾರಣ ಅನ್ನೋ ವಾದ ಒಂದುಕಡೆ ಜೋರಾಗಿದೆ. ಇದರ ಮಧ್ಯೆ ಇಂದು ವಿಶ್ವದ ದೊಡ್ಡಣ್ಣ ಅಮೆರಿಕಗೆ ಬಿಗ್ ಶಾಕ್ ಆಗಿದೆ. ಕಾಬೂಲ್​​ನಲ್ಲಿ ನಡೆದ ಸರಣಿ ಸ್ಫೋಟದಲ್ಲಿ ಅಮೆರಿಕನ್ನರೂ ಸೇರಿದ್ದಾರೆ ಅಂತಾ ಯುಎಸ್​ ಅಧಿಕಾರಿಗಳೇ ಸ್ಪಷ್ಟಪಡಿಸಿದ್ದಾರೆ.

ಸಾವು ನೋವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ
ಇಲ್ಲಿಯವರೆಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ, ಇಂದು ಸಂಜೆ ವೇಳೆಗೆ ನಡೆದ ಸರಣಿ ಸ್ಫೋಟದಲ್ಲಿ ಮಕ್ಕಳು, ಮಹಿಳೆಯರೂ ಸೇರಿದಂತೆ 18 ಮಂದಿ ಸಾವನ್ನಪ್ಪಿದ್ದಾರೆ. ಅದರಲ್ಲಿ ಅಮೆರಿಕದವರೂ ಕೂಡ ಇದ್ದಾರೆ ಅಂತಾ ಪೆಂಟಗಾನ್ ಖಚಿತ ಪಡಿಸಿದೆ. ಕೇವಲ 18 ಮಾತ್ರವಲ್ಲ ಸಾವು ನೋವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

blank

ಇದನ್ನೂ ಓದಿ: ಕಾಬೂಲ್​ನಲ್ಲಿ ಮತ್ತೊಂದು ಸ್ಫೋಟದ ಎಚ್ಚರಿಕೆ! ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಪ್ರಯಾಣಿಕರಿಗೆ ಎಚ್ಚರಿಕೆ

ಅಮೆರಿಕ ಅಧ್ಯಕ್ಷರ ಮುಂದಿನ ನಡೆ ಏನು..?
ಮೊದಲ ಸ್ಫೋಟ ಕಾಬೂಲ್​ ಏರ್​ಪೋರ್ಟ್​ ಬಳಿ ಕಾರಿನಲ್ಲಿ ಬಾಂಬ್ ಇಟ್ಟು ಸ್ಫೋಟಿಸಲಾಗಿದೆ. ಮತ್ತೊಂದು ಸ್ಫೋಟ ಅಮೆರಿಕನ್ನರು ಇದ್ದ ಹೋಟೆಲ್​​ನಲ್ಲಿ ಸ್ಫೋಟ ಮಾಡಲಾಗಿದೆ. ಆತ್ಮಾಹುತಿ ಬಾಂಬ್ ದಾಳಿಕೋರರ ಕೆಲಸ ಎಂದಿರುವ ಅಮೆರಿಕ ಐಸಿಸ್​ ಉಗ್ರರ ಕೈವಾಡ ಇರಬಹುದು ಅಂತಾ ಅಮೆರಿಕ ಹೇಳಿದೆ.

ಸ್ಫೋಟ ಬೆನ್ನಲ್ಲೇ ಅಮೆರಿಕ ಅಫ್ಘಾನಿಸ್ತಾನದಲ್ಲಿರುವ ತನ್ನ ನಾಗರಿಕರಿಗೆ ಎಚ್ಚರಿಕೆಯನ್ನ ನೀಡಿದೆ. ಉಗ್ರರ ಕೆಂಗಣ್ಣಿಗೆ ಅಮೆರಿಕದ ನಾಗರಿಕರು ಗುರಿಯಾಗಬಹುದು, ಹೀಗಾಗಿ ಎಲ್ಲರೂ ಸುರಕ್ಷಿತ ಸ್ಥಳದಲ್ಲಿ ಎಚ್ಚರಿಕೆಯಿಂದ ಇರಬೇಕು ಅಂತಾ ವಾರ್ನಿಂಗ್ ನೀಡಿದೆ. ಇದರ ಮಧ್ಯೆ ಅಮೆರಿಕ ಅಧ್ಯಕ್ಷರ ಮುಂದಿನ ನಡೆ ಏನು ಅನ್ನೋ ಪ್ರಶ್ನೆ ಶುರುವಾಗಿದೆ.

ಇದನ್ನೂ ಓದಿ: ಕಾಬೂಲ್ ಏರ್​ಪೋರ್ಟ್ ಬಳಿ ಭಾರೀ ಸ್ಫೋಟ; ಸಾವು ನೋವಿನ ಆತಂಕ

blank

ಅಫ್ಘಾನ್​ನಲ್ಲಿ ಇನ್ನೂ 4500 ಮಂದಿ ಅಮೆರಿಕನ್ನರು
ಯಾಕಂದ್ರೆ ಅಫ್ಘಾನ್​​ ತೆಕ್ಕೆಗೆ ತೆಗೆದುಕೊಂಡಿರುವ ತಾಲಿಬಾನಿಗಳು ಅಮೆರಿಕಗೆ ವಾರ್ನಿಂಗ್ ನೀಡಿದ್ದಾರೆ. ನಿಮ್ಮ ಸೇನೆಯನ್ನ ಅಗಸ್ಟ್​​ 31 ರೊಳಗೆ ವಾಪಸ್​ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಭಾರೀ ತಲೆದಂಡ ತೆರಬೇಕಾಗುತ್ತದೆ ಅಂತಾ ತಾಲಿಬಾನಿ ಉಗ್ರರು ಎಚ್ಚರಿಕೆಯನ್ನ ನೀಡಿದ್ದಾರೆ. ಉಗ್ರರ ಎಚ್ಚರಿಕೆಯ ಆತಂಕದ ಮಧ್ಯೆ ಅಫ್ಘಾನಿಸ್ತಾನದಲ್ಲಿ ಇನ್ನೂ 4500 ಮಂದಿ ಅಮೆರಿಕನ್ನರು ಇದ್ದಾರೆ. ಇವರನೆಲ್ಲಾ ಸುರಕ್ಷಿತವಾಗಿ ಅಮೆರಿಕಗೆ ಕರೆದುಕೊಂಡು ಹೋಗುವ ಜವಾಬ್ದಾರಿ ಬೈಡನ್ ಮೇಲಿದೆ.

ಇದನ್ನೂ ಓದಿ: ಕಾಬೂಲ್ ಏರ್​ಪೋರ್ಟ್​ನಲ್ಲಿ ಸ್ಫೋಟ; 13 ಮಂದಿ ದುರ್ಮರಣ

ಇದರ ಮಧ್ಯೆ ಅಫ್ಘಾನಿಸ್ತಾನದಲ್ಲಿ ಹಿಂಸಾಚಾರಗಳು ಹೆಚ್ಚಾಗುತ್ತಿದೆ. ಅದರಲ್ಲೂ ಅಮೆರಿಕ ನಾಗರೀಕರು ಹೆಚ್ಚಾಗಿ ಟಾರ್ಗೆಟ್ ಆಗುತ್ತಿದ್ದಾರೆ. ಹೀಗಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್​​ ನಿರ್ಧಾರದ ಮೇಲೆ ಅಫ್ಘಾನ್ ಭವಿಷ್ಯ, ಅಲ್ಲಿರುವ ಅಮೆರಿಕ ನಾಗರಿಕರ ಭವಿಷ್ಯ ನಿಂತಿದೆ. ಹೀಗಾಗಿ ಅಫ್ಘಾನ್​ನಿಂದ ಸೇನೆಯನ್ನ ಅಮೆರಿಕ ಹಿಂತೆಗೆದುಕೊಳ್ಳುತ್ತಾ? ಅಥವಾ ಬೈಡನ್ ತಮ್ಮ ನಿರ್ಧಾರವನ್ನ ಯಥಾಸ್ಥಿತಿಯಲ್ಲೇ ಕಾಪಾಡಿಕೊಳ್ತಾರಾ? ಅನ್ನೋ ಕುತೂಹಲ ನೆಟ್ಟಿದೆ.

blank

ಬೈಡನ್ ವಿರುದ್ಧ ಪ್ರತಿಭಟನೆ 
ಯಾಕಂದ್ರೆ ಅಫ್ಘಾನ್ ವಿಚಾರದಲ್ಲಿ ಬೈಡನ್​ ತೆಗೆದುಕೊಂಡಿರುವ ನಿರ್ಧಾರದ ಬಗ್ಗೆ ಭಾರೀ ಖಂಡನೆ ವ್ಯಕ್ತವಾಗುತ್ತಿದೆ. ಅಲ್ಲದೇ ಅಮೆರಿಕದಲ್ಲಿ ಬೈಡನ್ ವಿರುದ್ಧ ಪ್ರತಿಭಟನೆಗಳೂ ಕೂಡ ನಡೆಯುತ್ತಿದೆ. ಜೊತೆಗೆ ಬೈಡನ್ ಅವರ ವಿರುದ್ಧ ಹಕ್ಕುಚ್ಯುತಿ ಮಂಡಿಸಿ, ಅವರನ್ನ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಬೇಕು ಅನ್ನೋ ಆಗ್ರಹಗಳು ಕೂಡ ಇವೆ. ಬೈಡನ್ ಅಫ್ಘಾನ್ ವಿಚಾರದಲ್ಲಿ ಏನು ನಿರ್ಧಾರ ತೆಗೆದುಕೊಳ್ತಾರೆ ಅನ್ನೋದು ತುಂಬಾ ಮಹತ್ವ ಪಡೆದುಕೊಂಡಿದೆ.

ಇದನ್ನೂ ಓದಿ: ಏರ್​ಪೋರ್ಟ್​​ ಬೆನ್ನಲ್ಲೇ ಕಾಬೂಲ್​​ನ ಹೋಟೆಲ್​​ನಲ್ಲಿ ಮತ್ತೊಂದು ಸ್ಫೋಟ

Source: newsfirstlive.com Source link