ಕಾಬೂಲ್​​ನಲ್ಲಿ ಸರಣಿ ಸ್ಫೋಟ: ಮೃತರ ಸಂಖ್ಯೆ 20ಕ್ಕೆ ಏರಿಕೆ, 52 ಮಂದಿ ಗಂಭೀರ 

ಕಾಬೂಲ್​​ನಲ್ಲಿ ಸರಣಿ ಸ್ಫೋಟ: ಮೃತರ ಸಂಖ್ಯೆ 20ಕ್ಕೆ ಏರಿಕೆ, 52 ಮಂದಿ ಗಂಭೀರ 

ಕಾಬೂಲ್ ಏರ್​ಪೋರ್ಟ್​ನಲ್ಲಿ ಸಂಭವಿಸಿದ ಸ್ಫೋಟದಿಂದ ಸಾವು, ನೋವಿನ ಸಂಖ್ಯೆ ಹೆಚ್ಚುತ್ತಲೇ ಇದ್ದು, ಇದೀಗ ಮೃತಪಟ್ಟವರ ಸಂಖ್ಯೆ 20ಕ್ಕೆ ಏರಿಕೆಯಾಗಿದೆ. 52 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ: ಕಾಬೂಲ್ ಬ್ಲಾಸ್ಟ್​ನಲ್ಲಿ ಅಮೆರಿಕನ್ನರ ಸಾವು; ಈಗ್ಲಾದರೂ ಎಚ್ಚರಗೊಳ್ಳುತ್ತಾರಾ ಅಮೆರಿಕ ಅಧ್ಯಕ್ಷ..?

ಕೆಲವು ಮಾಧ್ಯಮಗಳ ವರದಿ ಪ್ರಕಾರ ಅಮೆರಿಕ ಸೇನೆಯ ಅಧಿಕಾರಿಗಳು ಕೂಡ ಸ್ಫೋಟದಲ್ಲಿ ಗಾಯಗೊಂಡಿದ್ದಾರೆ. ಮೃತಪಟ್ಟವರಲ್ಲಿ ಅಮೆರಿಕ ನಾಗರಿಕರೂ ಸಹ ಇದ್ದಾರೆ. ಇಂದು ಸಂಜೆ ಕಾಬೂಲ್ ಏರ್​ಪೋರ್ಟ್​ ಗೇಟ್ ಬಳಿ ಕಾರು ಒಂದರ ಮೇಲೆ ಬಾಂಬ್ ಇಟ್ಟು ಸ್ಫೋಟ ಮಾಡಲಾಗಿದೆ.

ಇದನ್ನೂ ಓದಿ: ಕಾಬೂಲ್​ನಲ್ಲಿ ಮತ್ತೊಂದು ಸ್ಫೋಟದ ಎಚ್ಚರಿಕೆ! ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಪ್ರಯಾಣಿಕರಿಗೆ ಎಚ್ಚರಿಕೆ

ಈ ಸ್ಫೋಟ ಸಂಭವಿಸಿದ ಕೆಲವೇ ಹೊತ್ತಿನಲ್ಲಿ ಕಾಬೂಲ್​ ಹೋಟೆಲ್ ಒಂದರಲ್ಲಿ ಸ್ಫೋಟ ನಡೆದಿದೆ. ಹೋಟೆಲ್​​ನಲ್ಲಿ ಅಮೆರಿಕನ್ನರು ಇದ್ದರು ಅಂತಾ ವರದಿಯಾಗಿದೆ. ಐಸಿಸ್ ಉಗ್ರರು ಕಾಬೂಲ್​ನಲ್ಲಿ ಸರಣಿ ಸ್ಫೋಟ ಮಾಡುತ್ತಿದ್ದಾರೆ ಅಂತಾ ಅಮೆರಿಕ ವಾರ್ನಿಂಗ್ ಮಾಡಿದೆ. ಜೊತೆಗೆ ಅಫ್ಘಾನ್​ನಲ್ಲಿರುವ ತನ್ನೆಲ್ಲಾ ನಾಗರಿಕರು ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಿದೆ.

ಇದನ್ನೂ ಓದಿ: ಕಾಬೂಲ್ ಏರ್​ಪೋರ್ಟ್ ಬಳಿ ಭಾರೀ ಸ್ಫೋಟ; ಸಾವು ನೋವಿನ ಆತಂಕ

ಇದನ್ನೂ ಓದಿ: ಕಾಬೂಲ್ ಏರ್​ಪೋರ್ಟ್​ನಲ್ಲಿ ಸ್ಫೋಟ; 13 ಮಂದಿ ದುರ್ಮರಣ

ಇದನ್ನೂ ಓದಿ: ಏರ್​ಪೋರ್ಟ್​​ ಬೆನ್ನಲ್ಲೇ ಕಾಬೂಲ್​​ನ ಹೋಟೆಲ್​​ನಲ್ಲಿ ಮತ್ತೊಂದು ಸ್ಫೋಟ

Source: newsfirstlive.com Source link