ಮೈಸೂರು ಗ್ಯಾಂಗ್ ರೇಪ್: ಪೊಲೀಸರ ‘ತಲೆದಂಡ’ದ ಸುಳಿವು ಕೊಟ್ಟ ಸರ್ಕಾರ

ಮೈಸೂರು ಗ್ಯಾಂಗ್ ರೇಪ್: ಪೊಲೀಸರ ‘ತಲೆದಂಡ’ದ ಸುಳಿವು ಕೊಟ್ಟ ಸರ್ಕಾರ

ಬೆಂಗಳೂರು: ಮೈಸೂರು ಗ್ಯಾಂಗ್ ರೇಪ್ ಪ್ರಕರಣಕ್ಕೆ ಪೊಲೀಸರ ತಲೆದಂಡ ಖಚಿತವಾಗಿದೆ. ಈ ಕುರಿತು ಮಾತನಾಡಿದ ಮೈಸೂರು ಉಸ್ತುವಾರಿ ಸಚಿವ ಎಸ್​.ಟಿ. ಸೋಮಶೇಖರ್​ ಪೊಲೀಸರ ವರ್ಗಾವಣೆ ಕುರಿತು ಸುಳಿವು ನೀಡಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ, ಶೂಟ್ ಔಟ್, ಗ್ಯಾಂಗ್ ರೇಪ್ ಪ್ರಕರಣದಲ್ಲಿ ಪೊಲೀಸ್ ನಿರ್ಲಕ್ಷ್ಯದ ಆರೋಪ ಕೇಳಿಬಂದಿದೆ. ಸಾರ್ವಜನಿಕರ ಭಾವನೆಗೆ ಸರ್ಕಾರ ಸ್ಪಂದಿಸಬೇಕಾಗುತ್ತದೆ. ಗ್ಯಾಂಗ್ ರೇಪ್ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ.

blank

ಪ್ರಕರಣದ ಪರಶೀಲನೆಗೆ ಎಡಿಜಿಪಿ ಅವರನ್ನೇ ಸರ್ಕಾರ ನಿಯೋಜಿಸಿದೆ. ಗೃಹ ಸಚಿವರೇ ಮೈಸೂರಿಗೆ ಆಗಮಿಸಿ ಪರಿಶೀಲನೆ ನಡೆಸಲಿದ್ದಾರೆ. ಎಡಿಜಿಪಿ ವರದಿ ನಂತರ ನಿರ್ಲಕ್ಷ್ಯದ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳುತ್ತದೆ. ಮೈಸೂರಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಡವಲು ಬಿಡುವುದಿಲ್ಲ ಎಂದಿದ್ದಾರೆ.

ಇದನ್ನೂ ಓದಿ: ಏಳು ವರ್ಷದ ಪ್ರೇಮ ವೈಫಲ್ಯ.. ಹತಾಶ ಪ್ರೇಮಿಯಿಂದ ಪ್ರೇಯಸಿಯ ಕಗ್ಗೊಲೆ ಶಂಕೆ

Source: newsfirstlive.com Source link