ದುಬಾರಿ ಪಾಂಡ್ಯ..! ಅವರ ವಾಚ್​​ನ ಬೆಲೆ ಎಷ್ಟು ಕೋಟಿಯದ್ದು ಗೊತ್ತಾ..?

ದುಬಾರಿ ಪಾಂಡ್ಯ..! ಅವರ ವಾಚ್​​ನ ಬೆಲೆ ಎಷ್ಟು ಕೋಟಿಯದ್ದು ಗೊತ್ತಾ..?

ಜೀವನದಲ್ಲಿ ರಾಯಲ್​​ ಆಗಿ ಬದುಕುವ ಟೀಮ್ ಇಂಡಿಯಾದ ಆಲ್ ರೌಂಡರ್ ಹಾರ್ದಿಕ್​​ ಪಾಂಡ್ಯ, ಬ್ರಾಂಡೆಡ್​​ ಸರುಕುಗಳಿಗೆ ಹೆಚ್ಚು ಒಲವು ತೋರುತ್ತಾರೆ ಅನ್ನೋದು ಗೊತ್ತೇ ಇದೆ. ಐಷಾರಾಮಿ ಬದುಕು ಸಾಗಿಸುತ್ತಿರುವ ಹಾರ್ದಿಕ್, ದುಬಾರಿ ಕಾರುಗಳು, ಬ್ರಾಂಡೆಡ್ ವಸ್ತುಗಳನ್ನೇ ಹೆಚ್ಚು ಇಷ್ಟಪಡ್ತಾರೆ.

ಸದ್ಯ ಐಪಿಎಲ್​ನಲ್ಲಿ ಮಿಂಚಲು ಸಜ್ಜಾದ ಹಾರ್ದಿಕ್​, ಒಂದು ವಿಚಾರದಲ್ಲಿ ಸಖತ್​ ಸುದ್ದಿಯಲ್ಲಿದ್ದಾರೆ. ಹೌದು.. ಅದು ಅವರು ಖರೀದಿಸಿರುವ ರಿಸ್ಟ್ ವಾಚ್ ಬಗ್ಗೆ. ಆದರಿದು ಅಂತಿಂಥ ವಾಚ್​ ಅಲ್ಲ, ವೆರಿ ಕಾಸ್ಟ್ಲಿ ವಾಚ್​. ಈ ವಾಚ್​ ಸಿಗೋದು ಬಲು ಅಪರೂಪವಂತೆ.

ಇನ್ನು ಅದರ ಬೆಲೆ ಕೇಳಿದರೇನೇ ಹುಬ್ಬೇರೋದು ಗ್ಯಾರಂಟಿ. ಆ ವಾಚ್ ಪಾಟೆಕ್ ಫಿಲಿಪ್ ನಾಟಿಲಸ್ ಪ್ಲಾಟಿನಂ-5711 ಎಂಬ ಜನಪ್ರಿಯ ಕಂಪನಿಯದ್ದಾಗಿದೆ. ಹಾರ್ದಿಕ್ ಧರಿಸಿರುವ ಈ ಪಾಟೆಕ್ ಫಿಲಿಪ್ ನಾಟಿಲಸ್ ಪ್ಲಾಟಿನಂ 5711 ವಾಚ್‌ನ ಬೆಲೆ ಬರೋಬ್ಬರಿ 5 ಕೋಟಿ ರೂಪಾಯಿ. ಈ ಪಾಂಡ್ಯರ ಕೈ ಗಡಿಯಾರದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗ್ತಿವೆ.

Source: newsfirstlive.com Source link