ನಾನು ಬೇಲ್​​ಗೆ ಅರ್ಜಿ ಹಾಕಿದ್ದು ‘ಈ’ ಕಾರಣಕ್ಕೆ, ಹೆದರಿ ಅಲ್ಲ -ಅಜಯ್ ರಾವ್

ನಾನು ಬೇಲ್​​ಗೆ ಅರ್ಜಿ ಹಾಕಿದ್ದು ‘ಈ’ ಕಾರಣಕ್ಕೆ, ಹೆದರಿ ಅಲ್ಲ -ಅಜಯ್ ರಾವ್

ರಾಮನಗರ: ‘ಲವ್ ಯು’ ರಚ್ಚು ಚಿತ್ರೀಕರಣದ ದುರಂತ ಪ್ರಕರಣದಲ್ಲಿ 6 ಜನರಿಗೆ ರಾಮನಗರ ಜಿಲ್ಲಾ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ನಿರ್ದೇಶಕ ಶಂಕರ್ ಕ್ರೇನ್ ಅಪರೇಟರ್ ಮಹದೇವ್, ಸಾಹಸ ನಿರ್ದೇಶಕ ವಿನೋದ್ ಕುಮಾರ್​​ಗೆ ಜಾಮೀನು ಮಂಜೂರಾಗಿದೆ. ನಟ ಅಜಯ್ ರಾವ್, ಪ್ರೊಡಕ್ಷನ್ ಮ್ಯಾನೇಜರ್ ಫರ್ನಾಂಡೀಸ್, ನಿರ್ಮಾಪಕ ಗುರು ದೇಶಪಾಂಡೆಗೆ ನಿರೀಕ್ಷಣಾ ಜಾಮೀನು ಸಿಕ್ಕಿದೆ.

ಇನ್ನು ಪ್ರಕರಣ ಸಂಬಂಧ ಇಂದು ನಟ ಅಜಯ್ ರಾವ್ ಅವರು ಬಿಡದಿ ಪೊಲೀಸ್ ಠಾಣೆಗೆ ಆಗಮಿಸಿದ್ದರು. ವಿಚಾರಣೆ ಮುಗಿಸಿ ಹೊರ ಬಂದು ಮಾಧ್ಯಮಗಳ ಜೊತೆ ಮಾತನಾಡಿದ ಅಜಯ್ ರಾವ್, ನಾನು ಹೆದರಿಕೊಂಡು ಬೇಲ್​ಗೆ ಅಪ್ಲಿಕೇಷನ್ ಹಾಕಿಲ್ಲ. ನಾನು SSLC ಓದಿದ್ದೇನೆ ಅಷ್ಟೇ, ಪಿಯುಸಿ ಕೂಡ ಓದಿಲ್ಲ ಹೆದರಿಕೆ ಇದ್ದಿದ್ದರೆ ಓದು ನಿಲ್ಲಿಸಿ ಬೆಂಗಳೂರಿಗೆ ಬರುತ್ತಿರಲಿಲ್ಲ ಎಂದರು.

ನಾನು ನನಗಾಗಿ ಬೇಲ್​​ಗೆ ಅಪ್ಲಿಕೇಶನ್ ಹಾಕಿಲ್ಲ. ನನ್ನನ್ನ ನಂಬಿ ನಿರ್ಮಾಪಕರು ಕೋಟ್ಯಾಂತರ ರೂಪಾಯಿ ಬಂಡಾವಾಳ ಹಾಕಿದ್ದಾರೆ. ಇನ್ನು ಹಲವು ಸಿನಿಮಾಗಳು ಬಾಕಿ ಇವೆ. ನಾನು ಜೈಲಿಂದ ಹಾರಿಕೊಂಡು ಬಂದು ಶೂಟಿಂಗ್ ಮಾಡ್ತೀನಿ ಅನ್ನೋಕಾಗುತ್ತಾ? ಹೀಗಾಗಿ ನಾನು ಬೇಲ್ ಗೆ ಅಪ್ಲಿಕೇಷನ್ ಹಾಕಿದ್ದೇನೆ ಅಷ್ಟೇ, ಹೊರತು ಭಯದಿಂದಲ್ಲ ಎಂದರು.

ಚಿತ್ರೀಕರಣದ ವೇಳೆ ಹೀರೋಯಿನ್ ಇರಲಿಲ್ಲ, ಪ್ಯಾಚ್ ವರ್ಕ್ ನಡೆಯುತ್ತಿತ್ತು ಅಷ್ಟೇ, ಆದರೆ ಸಾಕ್ಷಗಳನ್ನ ನಾಶ ಪಡಿಸುವ ಕೆಲಸವನ್ನ ಚಿತ್ರತಂಡ ಮಾಡಿಲ್ಲ. ನಿರ್ಮಾಪಕರು ಆತನ ಕುಟುಂಬಕ್ಕೆ ಏನು ಸಹಾಯ ಮಾಡಬೇಕೋ ಮಾಡ್ತಾರೆ. ನಂತರ ನಾನು ಸಹ ನೆರವಾಗ್ತೀನಿ. ಆದರೆ ಇದಕ್ಕೂ ಹೀರೋನೇ ಮೊದಲು ಬರಬೇಕು ಅಂದರೆ ಅದಕ್ಕೂ ರೆಡಿ ಇದ್ದೇನೆ ಎಂದಿದ್ದಾರೆ.

ಇದನ್ನೂ ಓದಿ:  ಕೋಟಿಗೊಬ್ಬನ ಜನ್ಮದಿನ ಚಂದನವನಕ್ಕೆ ಆಗುತ್ತಾ ಸುದಿನ..? ಸ್ಪೆಷಲ್ ರಿಪೋರ್ಟ್

Source: newsfirstlive.com Source link