ಬಿಗ್ ಬುಲೆಟಿನ್ | August 26, 2021 | ಭಾಗ-1

ಅಫ್ಘಾನಿಸ್ತಾನದಲ್ಲಿ ಒಂದು ಕಡೆ ತಾಲಿಬಾನಿಗಳ ಹಿಂಸೆ ನಡುವೆ, ಕಾಬೂಲ್ ವಿಮಾನ ನಿಲ್ದಾಣದ ಪ್ರವೇಶದ್ವಾರವೊಂದರಲ್ಲಿ ಆತ್ಮಾಹುತಿ ದಾಳಿ ಸಂಭವಿಸಿದೆ.

ಪ್ರಾಥಮಿಕ ವರದಿಗಳ ಪ್ರಕಾರ 11 ಮಂದಿ ಮೃತಪಟ್ಟಿದ್ದಾರೆ. ಸಾವು, ನೋವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.ತಾಲಿಬಾನಿ ಉಗ್ರರು ದಾಳಿ ನಡೆಸಲು ಸಂಚು ರೂಪಿಸಿದ್ದಾರೆ ಎಂದು ಬ್ರಿಟನ್ ಎಚ್ಚರಿಕೆ ನೀಡಿತ್ತು. ಅಮೆರಿಕ ಕೂಡ ಕಾಬೂಲ್ ಏರ್‍ಪೋರ್ಟ್‍ನಿಂದ ದೂರ ಇರುವಂತೆ ಎಚ್ಚರಿಸಿತ್ತು. ಈ ಬೆನ್ನಲ್ಲೇ ಆತ್ಮಾಹುತಿ ದಾಳಿ ನಡೆದಿದೆ.  ಇದನ್ನೂ ಓದಿ :ಜರ್ಮನಿಯಲ್ಲಿ ಪಿಜ್ಜಾ ಡೆಲಿವರಿ ಬಾಯ್ ಆದ ಅಫ್ಘಾನ್ ಮಾಜಿ ಸಚಿವ! 

Source: publictv.in Source link