ಮತ್ತೊಂದು ರೇಪ್ ಕೇಸ್- ಸಿದ್ದಾಪುರದಲ್ಲಿ 11ರ ಬಾಲೆ ಮೇಲೆ ಮಾವನಿಂದಲೇ ಅತ್ಯಾಚಾರ

– ಶಾಲೆಯಿಂದ ಮನೆಗೆ ಹೊರಟಾಗ ಕೃತ್ಯ

ಕಾರವಾರ: ಮೈಸೂರು ಸಾಮೂಹಿಕ ಅತ್ಯಾಚಾರ ಪ್ರಕರಣದ ಕುರಿತು ಸಾಕಷ್ಟು ಚರ್ಚೆ ನಡೆಯುತ್ತಿರುವಾಗಲೇ ಇದೀಗ ಮತ್ತೊಂದು ರೇಪ್ ಕೇಸ್ ಬೆಳಕಿಗೆ ಬಂದಿದೆ. ಸೋದರ ಮಾವನೇ 11 ವರ್ಷದ ಅಪ್ರಾಪ್ತೆ ಮೇಲೆ ಅತ್ಯಾಚಾರ ಮಾಡಿರುವ ಘಟನೆ ಸಿದ್ದಾಪುರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಬಾಲಕಿ ಸೋದರ ಮಾವನೇ ಅತ್ಯಾಚಾರ ಎಸಗಿದ್ದು, ಆರೋಪಿಯನ್ನು ಸಿದ್ದಾಪುರ ಪೊಲೀಸರು ಬಂಧಿಸಿದ್ದಾರೆ. ಸಂತ್ರಸ್ತ ಬಾಲಕಿಯನ್ನು ಇದೀಗ ವೈದ್ಯಕೀಯ ಪರೀಕ್ಷೆಗೆ ರವಾನಿಸಲಾಗಿದೆ. ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಇದನ್ನೂ ಓದಿ: ಗ್ಯಾಂಗ್‍ರೇಪ್ ಎಸಗಿ ವಿದ್ಯಾರ್ಥಿನಿಗೆ ಬೆದರಿಕೆ ಹಾಕಿದ ಕಿರಾತಕರು!

ಶಾಲೆಯಿಂದ ಹೊರಟಾಗ ಅತ್ಯಾಚಾರ:
ವಿದ್ಯಾರ್ಥಿನಿ ಶಾಲೆಯಿಂದ ಮನೆಗೆ ಹೊರಟಾಗ ಮನೆಗೆ ಬಿಡುವುದಾಗಿ ಹೇಳಿ ಬೈಕ್ ನಲ್ಲಿ ಕುರಿಸಿಕೊಂಡ ಆರೋಪಿ, ಮಾರ್ಗ ಮಧ್ಯೆ ಕಾಡಿನಲ್ಲಿ ಕರೆದೊಯ್ದು ಅತ್ಯಾಚಾರ ಮಾಡಿದ್ದಾನೆ. ನಂತರ ಯಾರಿಗೂ ಹೇಳದಂತೆ ಹೆದರಿಸಿ ಆಕೆಯನ್ನು ಮನೆಗೆ ಬಿಟ್ಟು ಹೋಗಿದ್ದಾನೆ. ವಿಷಯ ತಿಳಿಯುತಿದ್ದಂತೆ ಪೊಷಕರು ಸಿದ್ದಾಪುರ ಠಾಣೆಗೆ ದೂರು ನೀಡಿದ್ದು, ತಕ್ಷಣ ಆರೋಪಿಯನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ನನ್ನ ಮಾತನ್ನು ವಾಪಸ್ ಪಡೆಯುತ್ತೇನೆ – ಕ್ಷಮೆಯಾಚಿಸಿದ ಗೃಹ ಸಚಿವ

Source: publictv.in Source link