ಅಫ್ಘಾನ್ ಸರಣಿ ಬಾಂಬ್ ಸ್ಫೋಟ; 13 ಯುಎಸ್​ ಸೈನಿಕರು ಸೇರಿ ಒಟ್ಟು 73 ಕ್ಕೇರಿದ ಸಾವಿನ ಸಂಖ್ಯೆ

ಅಫ್ಘಾನ್ ಸರಣಿ ಬಾಂಬ್ ಸ್ಫೋಟ; 13 ಯುಎಸ್​ ಸೈನಿಕರು ಸೇರಿ ಒಟ್ಟು 73 ಕ್ಕೇರಿದ ಸಾವಿನ ಸಂಖ್ಯೆ

ಅಫ್ಘಾನಿಸ್ತಾನವನ್ನ ತಾಲಿಬಾನಿಗಳು ವಶಪಡಿಸಿಕೊಳ್ಳುತ್ತಲೇ ಅಲ್ಲಿನ ಜನರು ದೇಶಬಿಡಲು ತಯಾರಾಗಿದ್ದರು.. ಅದಕ್ಕೊಂದು ಕಾರಣವಿತ್ತು.. ನಾವು ಈ ತಾಲಿಬಾನಿಗಳ ಕೈಗೆ ಸಿಕ್ಕರೆ ಜೀವಂತವಾಗಿ ಉಳಿಯೋದಿಲ್ಲ ಅನ್ನೋ ಆತಂಕ ಅಫ್ಘಾನಿಸ್ತಾನದ ಜನರಲ್ಲಿ ಮನೆಮಾಡಿತ್ತು. ಇದೀಗ ಈ ಆತಂಕ ನಿಜವಾಗಿದೆ. ಕಾಬೂಲ್ ಏರ್​ಪೋರ್ಟ್​ ಸೇರಿದಂತೆ ಹಲವೆಡೆ ಸರಣಿ ಸ್ಫೋಟಗಳು ಸಂಭವಿಸಿವೆ. ಐಎಸ್​ಐಎಸ್​ ಉಗ್ರ ಸಂಘಟನೆ ಈ ಬ್ಲಾಸ್ಟ್​ನ ಹೊಣೆ ಹೊತ್ತುಕೊಂಡಿದೆ.

ಸಂಜೆ ಸುಮಾರು 6.45ರ ವೇಳೆ ಮೊದಲನೇ ಸ್ಫೋಟ ಅಫ್ಘಾನ್​ನ ಕಾಬೂಲ್ ವಿಮಾನ ನಿಲ್ದಾಣದ ಗೇಟ್​ ಬಳಿ ಮೊದಲ ಸ್ಫೋಟ ಸಂಭವಿಸಿತ್ತು. ಇದರ ಬೆನ್ನಲ್ಲೇ ರಾತ್ರಿ 8 ಗಂಟೆ ಸುಮಾರಿಗೆ ಎರಡನೇ ಸ್ಫೋಟ ಇದೇ ಏರ್​ಪೋರ್ಟ್ ಬಳಿಯ ಬ್ಯಾರೋನ್​ ಹೋಟೆಲ್​ನ​ ಮುಂಭಾಗದಲ್ಲಿ ಸಂಭವಿಸಿತ್ತು. ಇಲ್ಲಿಗೆ ಎಲ್ಲವೂ ಮುಗಿಯಲಿಲ್ಲ. ರಾತ್ರಿಯಿಡೀ ಉಗ್ರರ ದುಷ್ಕೃತ್ಯ ಮುಂದುವರಿದಿತ್ತು. ಕಾಬೂಲ್​ನ ಅಹಮದ್ ಶಾ ಬಾಬಾ ಮಿನಾ ಬಳಿ ಮೂರನೇ ಬಾಂಬ್​ ಸ್ಫೋಟಗೊಂಡಿದೆ. ಇನ್ನೊಂದೆಡೆ ವಾಯುವ್ಯ ಕಾಬೂಲ್​ನ ಶಾರ್ ಇ ನಾವ್​ ನಗರದಲ್ಲಿ ನಾಲ್ಕನೇ ಬಾಂಬ್​ ಸ್ಫೋಟಗೊಂಡಿದೆ. ಇದೇ ನಗರದಲ್ಲಿ ಮತ್ತೊಂದು ಸ್ಫೋಟದ ಸದ್ದು ಅಫ್ಘನ್ನರನ್ನೇ ಬೆಚ್ಚಿ ಬೀಳಿಸಿತ್ತು. ಇನ್ನು, ಕಾಬೂಲ್​ನ ಸರಾಯೇ ಶಾಮಲಿ ಬಳಿ ಆರನೇ ಸ್ಫೋಟ ಸಂಭವಿಸಿದೆ ಎನ್ನಲಾಗಿದೆ.

blank

ಹೀಗೆ ಒಂದಲ್ಲ ಎರಡಲ್ಲ.. ಸಾಲು ಸಾಲು ಸ್ಫೋಟಕ್ಕೆ ಕಾಬೂಲ್​ ನಗರ ಸಾಕ್ಷಿಯಾಗಿದೆ. ಅಫ್ಘಾನ್​ನ ಒಂದೊಂದು ದಾಳಿಯೂ ನರಕ ದರ್ಶನ ಮಾಡಿಸುತ್ತಿದೆ. ಜನರಿಗೆ ಅಫ್ಘಾನಿಸ್ತಾನ ತೊರೆಯಲು ಇರೋ ಏಕೈಕ ಜಾಗ ಕಾಬೂಲ್​ ಏರ್​ಪೋರ್ಟ್. ಹೀಗಾಗಿ ಪ್ರತಿ ದಿನವೂ ಇಲ್ಲಿಗೆ ಜನ ಸಾಗರವೇ ಹರಿದು ಬರ್ತಿದೆ. ಸದ್ಯ ಕೆಲ ದಿನಗಳಿಂದ ಏರ್​​ಪೋರ್ಟ್​ ಬಳಿ ಒಂದಲ್ಲ ಒಂದು ದಾಳಿಯಾಗ್ತಿದ್ದು, ಇವತ್ತು ಕೂಡ ಭೀಕರ ದಾಳಿಯಾಗುವ ಮೂನ್ಸೂಚನೆ ಇತ್ತು. ಏರ್​ಪೋರ್ಟ್​ ಬಳಿ ದಾಳಿ ನಡೆಸೋ ಬಗ್ಗೆ ಭಯೋತ್ಪಾದಕರು ಅಮೆರಿಕಾಗೆ ಬೆದರಿಕೆ ಹಾಕಿತ್ತು. ಅಮೆರಿಕಾ ಕೂಡ ಉಗ್ರರು ದಾಳಿ ಮಾಡೋ ಸಾಧ್ಯತೆಯನ್ನ ಜಗತ್ತಿನ ಮುಂದೆ ತೆರದಿಟ್ಟಿತ್ತು. ಕೊನೆಗೂ ಈ ಬೆದರಿಕೆ ಸತ್ಯವಾಗಿದ್ದು, ಕಾಬುಲ್​ ಏರ್​ಪೋರ್ಟ್​ ಬಳಿ ಸರಣಿ ಬಾಂಬ್​ ಸ್ಫೋಟಗಳು ನಡೆದಿವೆ.

blank

ಸದ್ಯ ಕಾಬೂಲ್ ಏರ್​ಪೋರ್ಟ್​ ಬಳಿ ಸರಣಿ ಬಾಂಬ್​​​​ ಸ್ಫೋಟಗಳು ಸಂಭವಿಸುತ್ತಿದ್ದು, ಇಲ್ಲಿಯವರೆಗೂ ಒಟ್ಟು 6 ಕಡೆ ಬಾಂಬ್​ ಸ್ಫೋಟಗೊಂಡಿದೆ ಎಂಬ ಮಾಹಿತಿ ಇದೆ. ಈ ಭೀಕರ ದಾಳಿಯಲ್ಲಿ ಒಟ್ಟು 73ಕ್ಕೂ ಹೆಚ್ಚು ಜನ ಮೃತಪಟ್ಟಿದ್ರೆ, 130ಕ್ಕೂ ಹೆಚ್ಚು ಜನರು ತೀವ್ರವಾಗಿ ಗಾಯಗೊಂಡಿದ್ದಾರೆ ಅನ್ನೋದು ಅಧಿಕೃತ ಮಾಹಿತಿ. 300ಕ್ಕೂ ಅಧಿಕ ಮಂದಿ ಸರಣಿ ಸ್ಫೋಟದಲ್ಲಿ ಮೃತರಾಗಿದ್ದಾರೆ ಅಂತಾ ಅಫ್ಘಾನ್​ನಲ್ಲಿನ ಕೆಲವು ಮಾಧ್ಯಮಗಳು ವರದಿ ಮಾಡಿವೆ. ಅಲ್ಲದೆ ಅಮೆರಿಕಾ ಸೇನೆಯ ಒಟ್ಟು 13 ಸೈನಿಕರು ಈ ಭೀಬತ್ಸ ಸ್ಫೋಟದಲ್ಲಿ ಜೀವ ತೆತ್ತಿದ್ದಾರೆ. ಇನ್ನು, 15 ಮಂದಿ ಯುಎಸ್ ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಅವರಿಗೆ ಚಿಕಿತ್ಸೆ ನೀಡಲಾಗ್ತಿದೆ. ಈ ಬೆನ್ನಲ್ಲೇ ಕಾಬೂಲ್​ನಲ್ಲಿ ಅಮೆರಿಕ ಸೆಕ್ಯುರಿಟ್ ಅಲರ್ಟ್ ಘೋಷಣೆ ಮಾಡಿದ್ದು, ಅಮೆರಿಕನ್ನರು ಯಾರೂ ಏರ್​ಪೋರ್ಟ್​ ಬಳಿ ಬರಬೇಡಿ ಎಂದು ಸೂಚನೆ ನೀಡಿದೆ.

blank

ಇನ್ನು ಈ ಭೀಬತ್ಸ ಕೃತ್ಯದ ಹಿಂದೆ ಐಸಿಸ್ ಉಗ್ರ ಸಂಘಟನೆಯ ಕೈವಾಡವಿರೋ ಮಾತುಗಳು ಕೇಳಿ ಬಂದಿದ್ವು. ಇದರ ಬೆನ್ನಲ್ಲೇ ಐಸಿಸ್​ ಸಂಘಟನೆ ಸ್ಫೋಟದ ಹೊಣೆ ಹೊತ್ತಿದೆ. ಟೆಲಿಗ್ರಾಮ್​ನಲ್ಲಿ ಐಸಿಸ್ ಉಗ್ರನೊಬ್ಬ ಕೃತ್ಯ ಎಸಗಿರೋ ಬಗ್ಗೆ ಹಂಚಿಕೊಂಡಿರೋದು ಬಹಿರಂಗವಾಗಿದೆ.

ಅಫ್ಘಾನ್​ನ ಹೃದಯ ಭಾಗದಲ್ಲಿ ನಡೆದಿರೋ ಸ್ಫೋಟಕ್ಕೆ ವಿಶ್ವದ ಅನೇಕ ದೇಶಗಳು ಕಳವಳ ವ್ಯಕ್ತಪಡಿಸಿವೆ. ಅಮೆರಿಕಾ, ಫ್ರಾನ್ಸ್, ಬ್ರಿಟನ್​ ಸೇರಿ ಹಲವು ದೇಶಗಳು ಐಸಿಸ್ ಕಿರಾತಕರ ಕೃತ್ಯವನ್ನ ಖಂಡಿಸಿವೆ. ಇನ್ನು ಭಾರತೀಯ ವಿದೇಶಾಂಗ ಇಲಾಖೆ ಕೂಡ ಉಗ್ರರ ಆರ್ಭಟವನ್ನ ಖಂಡಿಸಿದೆ.

Source: newsfirstlive.com Source link