‘ನೀವು ಎಲ್ಲಿದ್ದರೂ ಹುಡುಕಿ ಹೊಡೆಯುತ್ತೇವೆ.. ಬೆಲೆ ತೆತ್ತುವಂತೆ ಮಾಡ್ತೇವೆ’- ಉಗ್ರರಿಗೆ ಅಮೆರಿಕ ವಾರ್ನಿಂಗ್

‘ನೀವು ಎಲ್ಲಿದ್ದರೂ ಹುಡುಕಿ ಹೊಡೆಯುತ್ತೇವೆ.. ಬೆಲೆ ತೆತ್ತುವಂತೆ ಮಾಡ್ತೇವೆ’- ಉಗ್ರರಿಗೆ ಅಮೆರಿಕ ವಾರ್ನಿಂಗ್

ಆಫ್ಘನಿಸ್ತಾನದ ಕಾಬೂಲ್​ನಲ್ಲಿ ನಡೆದ ಸರಣಿ ಸ್ಫೋಟಗಳಲ್ಲಿ ಅಮೆರಿಕದ 13 ಸೈನಿಕರು ಸೇರಿ ಒಟ್ಟು 73 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಈ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಪತ್ರಿಕಾಗೋಷ್ಠಿ ನಡೆಸಿ ಕೃತ್ಯ ಎಸಗಿದವರಿಗೆ ಎಚ್ಚರಿಕೆ ಕೊಟ್ಟಿದ್ದಾರೆ.

ಇದನ್ನೂ ಓದಿ: ಅಫ್ಘಾನ್ ಸರಣಿ ಬಾಂಬ್ ಸ್ಫೋಟ; 13 ಯುಎಸ್​ ಸೈನಿಕರು ಸೇರಿ ಒಟ್ಟು 73 ಕ್ಕೇರಿದ ಸಾವಿನ ಸಂಖ್ಯೆ

ಈ ದುಷ್ಕೃತ್ಯವನ್ನ ನಾವು ಎಂದಿಗೂ ಮರೆಯುವುದಿಲ್ಲ.. ಈ ದುಷ್ಕೃತ್ಯ ಎಸಗಿದವರನ್ನು ಸುಮ್ಮನೆ ಬಿಡುವುದಿಲ್ಲ. ಘಟನೆಯ ಹಿಂದಿರುವವರನ್ನು ನಾವು ಕ್ಷಮಿಸುವುದಿಲ್ಲ.. ಈ ಕೃತ್ಯ ಎಸಗಿದವರಿಗೆ ತಕ್ಕ ಪಾಠ ಕಲಿಸುತ್ತೇವೆ. ದಾಳಿಯಲ್ಲಿ ಹುತಾತ್ಮರಾದ ಅಮೆರಿಕ ಸೈನಿಕರು ವೀರರು.. ದಾಳಿ ನಂತರವೂ ಸ್ಥಳಾಂತರ ಕಾರ್ಯ ಮುಂದುವರೆಯುತ್ತದೆ.. ನೀವು ಎಲ್ಲಿದ್ದರೂ ಬಿಡುವುದಿಲ್ಲ.. ಹುಡುಕಿ ಹೊಡೆಯುತ್ತೇವೆ.. ಈ ಕೃತ್ಯಕ್ಕೆ ಬೆಲೆ ಕಟ್ಟುವಂತೆ ಮಾಡುತ್ತೇವೆ. ಈವರೆಗೆ ತಾಲಿಬಾನ್ ಮತ್ತು ಇಸ್ಲಾಮಿಕ್ ಸ್ಟೇಟ್ಸ್ ಕೈ ಜೋಡಿಸಿ ಈ ಕೃತ್ಯ ನಡೆಸಿರುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ ಎಂದು ಜೋ ಬೈಡನ್​ ವಾರ್ನ್ ಮಾಡಿದ್ದಾರೆ.

blank

Source: newsfirstlive.com Source link